Goravanahalli Lakshmi Temple: ವರಮಹಾಲಕ್ಷ್ಮೀ ಹಬ್ಬಕ್ಕೆ ಭಕ್ತರಿಗಿಲ್ಲ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದರ್ಶನ ಭಾಗ್ಯ, ದೇಗುಲ ಬಂದ್

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇಗುಲ ಬಂದ್ ಮಾಡಲಾಗಿದೆ. ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದ್ದು ದೇವಸ್ಥಾನಕ್ಕೆ ಬರುವ ಭಕ್ತ ಸಾಗರವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾಳೆ ವರಮಹಾಲಕ್ಷ್ಮೀ ದೇಗಲವನ್ನು ಬಂದ್ ಮಾಡಲಾಗುತ್ತದೆ.

Goravanahalli Lakshmi Temple: ವರಮಹಾಲಕ್ಷ್ಮೀ ಹಬ್ಬಕ್ಕೆ ಭಕ್ತರಿಗಿಲ್ಲ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದರ್ಶನ ಭಾಗ್ಯ, ದೇಗುಲ ಬಂದ್
ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇಗುಲ
Follow us
TV9 Web
| Updated By: ಆಯೇಷಾ ಬಾನು

Updated on:Aug 19, 2021 | 1:18 PM

ತುಮಕೂರು: ಆಗಸ್ಟ್​20ರಂದು ವರಮಹಾಲಕ್ಷ್ಮೀ ಹಬ್ಬ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಆಗಮಿಸುತ್ತಾರೆಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇಗುಲ ಬಂದ್ ಮಾಡಲಾಗಿದೆ. ಕೊರೊನಾ ಮೂರನೇ ಅಲೆ ಭೀತಿ ಎದುರಾಗಿದ್ದು ದೇವಸ್ಥಾನಕ್ಕೆ ಬರುವ ಭಕ್ತ ಸಾಗರವನ್ನು ನಿಯಂತ್ರಿಸಲು ಕಷ್ಟವಾಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್​ 20ರಂದು​ ಮಹಾಲಕ್ಷ್ಮೀ ದೇಗಲವನ್ನು ಬಂದ್ ಮಾಡಲಾಗುತ್ತದೆ. ಜಿಲ್ಲೆಯ ಗೊರವನಹಳ್ಳಿ, ದೇವರಾಯನದುರ್ಗ, ನಾಮದಚಿಲುಮೆ ಹಾಗೂ ಬಸದಿಬೆಟ್ಟ, ಸಿದ್ದರಬೆಟ್ಟ ಸೇರಿದಂತೆ ಹಲವು ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧವಿಧಿಸಿದೆ.

ವಾರದಲ್ಲಿ 4 ದಿನ ಬಂದ್ ಮತ್ತು 3 ದಿನ ಮಾತ್ರ ದೇಗುಲ ಓಪನ್ ಮಾಡಲು ಜಿಲ್ಲಾಡಳಿತ ಆದೇಶ ಮಾಡಿದೆ. ಮಂಗಳವಾರ, ಬುಧವಾರ, ಗುರುವಾರ ಮಾತ್ರ ದೇವಸ್ಥಾನ ಓಪನ್ ಇರುತ್ತೆ. ಹಾಗೂ ಉಳಿದ ನಾಲ್ಕು ದಿನ ದೇವಸ್ಥಾನ ಬಂದ್ ಆಗಲಿದೆ. ಈ ವೇಳೆ ಅರ್ಚಕರಿಗೆ ಮಾತ್ರ ಪೂಜೆ ಮಾಡುವ ಅವಕಾಶವಿದ್ದು ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ.

ಕೊರೊನಾದಿಂದ ನೊಂದ ರೈತರಿಗೆ ‘ವರ’ವಾದ ಹಬ್ಬಗಳು ಚಿಕ್ಕಬಳ್ಳಾಪುರ ಹೂ ಬೆಳೆಗಾರರ ಬದುಕು ಮತ್ತೆ ಅರಳಿದೆ. ಎರಡನೇ ಅಲೆಯ ಹೊಡೆತದಿಂದ, ಲಾಕ್ಡೌನ್ ಅನ್ನೋ ಕಟ್ಟು ಪಾಡುಗಳಿಂದ ಚಿಕ್ಕಬಳ್ಳಾಪುರದಲ್ಲಿ ಹೂಬೆಳೆಗಾರರು ಸಂಕಷ್ಟದ ಸುಳಿಗೆ ಸಿಲುಕಿದ್ರು.. ಸಾಲ ಮಾಡಿ ಹೂವು ಬೆಳೆದವರು ಕಂಗಾಲಾಗಿ ಹೋಗಿದ್ರು. ಆದ್ರೆ ವರಮಹಾಲಕ್ಷ್ಮೀ ಹಬ್ಬ ಬರ್ತಿದ್ದಂತೆ ಇಲ್ಲಿನ ಹೂವುಗಳಿಗೆ ಭಾರಿ ಬೇಡಿಕೆ ಬಂದಿದೆ. ತಾಲೂಕಿನ ಕತ್ರಿಗುಪ್ಪೆ, ಮರಳುಕುಂಟೆ ಸೇರಿದಂತೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಗ್ಲಾಡಿಯೋಲಸ್ ಬೆಳೆದಿದ್ದು, ಈ ಹೂವುಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. 5 ಹೂವಿನ ಒಂದು ಕಟ್ಟು 50 ರೂಪಾಯಿಯವರೆಗೆ ಮಾರಾಟವಾಗ್ತಿದ್ದು, ಕೊರೊನಾದಿಂದ ಕಂಗೆಟ್ಟಿದ್ದವರ ಕೈ ಹಿಡಿದಿದೆ.

ಇನ್ನೂ ಕೇವಲ ಗ್ಲಾಡಿಯೋಲಸ್ ಅಷ್ಟೇ ಅಲ್ಲದೆ ಅಲಂಕಾರಕ್ಕೆ ಅತಿ ಹೆಚ್ಚಾಗಿ ಬಳಸೋ ಜರ್ಬೆರಾ ವನ್ನ ಸಹ ಚಿಕ್ಕಬಳ್ಳಾಪುರ ತಾಲೂಕಿನ ವಿಜಯ್ ಕುಮಾರ್ ಅನ್ನೋ ರೈತ ಬೆಳೆದಿದ್ದು, ಇದಕ್ಕೂ ಭಾರಿ ಡಿಮ್ಯಾಂಡ್ ಬಂದಿದೆ. 10ಹೂವಿನ ಕಟ್ಟು 200 ರೂಪಾಯಿಗೆ ಸೇಲ್ ಆಗ್ತಿದೆ. ವ್ಯಾಪಾರಸ್ಥರೇ ತೋಟಕ್ಕೆ ಭೇಟಿ ನೀಡಿ ಕೇಳಿದಷ್ಟು ಕಾಸು ಕೊಟ್ಟು ಹೂ ಕಟಾವು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಗುಲಾಬಿ, ಸೇವಂತಿಗೆ ಸೇರಿದಂತೆ ಅಲಂಕಾರಿಕ ಹೂವುಗಳಿಗೆ ಭರ್ಜರಿ ಬೇಡಿಕೆ ಬಂದಿದ್ದು, ರೈತರಿಗೆ ಭರ್ಜರಿ ಲಾಭ ತಂದು ಕೊಡುತ್ತಿದೆ.

ಇದನ್ನೂ ಓದಿ: ‘ಅಮ್ಮನಷ್ಟು ವಯಸ್ಸಾಗಿದೆ, ಆದ್ರೂ ಬುದ್ಧಿ ಇಲ್ಲ’; ಶಮಿತಾ ಶೆಟ್ಟಿಗೆ ಬಿಗ್​ ಬಾಸ್​ನಲ್ಲಿ ಚುಚ್ಚು ಮಾತು: ಶಿಲ್ಪಾ ತಂಗಿಗೆ ವಯಸ್ಸೆಷ್ಟು?

Published On - 8:37 am, Thu, 19 August 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್