ಕಡಿಮೆ ರೇಟ್​ಗೆ ಮೊಬೈಲ್ ಸಿಗುತ್ತೆ ಎಂದು ಲಿಂಕ್ ಕ್ಲಿಕ್ ಮಾಡಿದ, ಮುಂದೇನಾಯ್ತು?

ತುಮಕೂರು: ಹೇಳಿ ಕೇಳಿ ಇದು ಕಲಿಯುಗ ಸ್ವಲ್ಪ ಯಾಮಾರಿ ಕಣ್ ಮುಚ್ಕೊಂಡ್ರೆ ಕಿಡ್ನಿನೇ ಕದ್ದುಕೊಂಡು ಹೋಗೋ ಜನ ಇದಾರೆ. ಇಂತ ಜನರ ನಡುವೆ ಇನ್ನು ಆನ್​ಲೈನ್​ನಲ್ಲಿ ಕೇಳ್ಬೇಕಾ ಸ್ವಲ್ಪ ಯಾಮಾರಿದ್ರೂ ನೀವು ಕಷ್ಟ ಪಟ್ಟು ಸಂಪಾದಿಸಿರೋ ಇರೋ ಬರೋ ಹಣವನ್ನೆಲ್ಲಾ ಕದ್ದು ಮೂರು ನಾಮ ಹಾಕಿ ಹೋಗ್ತಾರೆ. ಹೌದು, ನಂಬಲಿಕ್ಕೆ ಆಗ್ತಿಲ್ಲ ಅಲ್ವಾ. ಹೀಗೆ ನಂಬಿ ತುಮಕೂರಿನ ಯುವಕ ನಯನ್ ಕುಮಾರ್ ಎಂಬಾತ 30 ಸಾವಿರದ ಮೊಬೈಲ್ 3 ಸಾವಿರಕ್ಕೆ ಸಿಗುತ್ತೆ ಅಂತ ಯಾಮಾರಿದ್ದಾನೆ. ಹಣ ಕಟ್ಟಿಸಿಕೊಳ್ಳುವವರೆಗೂ […]

ಕಡಿಮೆ ರೇಟ್​ಗೆ ಮೊಬೈಲ್ ಸಿಗುತ್ತೆ ಎಂದು ಲಿಂಕ್ ಕ್ಲಿಕ್ ಮಾಡಿದ, ಮುಂದೇನಾಯ್ತು?
ಸಾಂದರ್ಭಿಕ ಚಿತ್ರ
Follow us
ಸಾಧು ಶ್ರೀನಾಥ್​
| Updated By:

Updated on:Jun 27, 2020 | 2:47 PM

ತುಮಕೂರು: ಹೇಳಿ ಕೇಳಿ ಇದು ಕಲಿಯುಗ ಸ್ವಲ್ಪ ಯಾಮಾರಿ ಕಣ್ ಮುಚ್ಕೊಂಡ್ರೆ ಕಿಡ್ನಿನೇ ಕದ್ದುಕೊಂಡು ಹೋಗೋ ಜನ ಇದಾರೆ. ಇಂತ ಜನರ ನಡುವೆ ಇನ್ನು ಆನ್​ಲೈನ್​ನಲ್ಲಿ ಕೇಳ್ಬೇಕಾ ಸ್ವಲ್ಪ ಯಾಮಾರಿದ್ರೂ ನೀವು ಕಷ್ಟ ಪಟ್ಟು ಸಂಪಾದಿಸಿರೋ ಇರೋ ಬರೋ ಹಣವನ್ನೆಲ್ಲಾ ಕದ್ದು ಮೂರು ನಾಮ ಹಾಕಿ ಹೋಗ್ತಾರೆ.

ಹೌದು, ನಂಬಲಿಕ್ಕೆ ಆಗ್ತಿಲ್ಲ ಅಲ್ವಾ. ಹೀಗೆ ನಂಬಿ ತುಮಕೂರಿನ ಯುವಕ ನಯನ್ ಕುಮಾರ್ ಎಂಬಾತ 30 ಸಾವಿರದ ಮೊಬೈಲ್ 3 ಸಾವಿರಕ್ಕೆ ಸಿಗುತ್ತೆ ಅಂತ ಯಾಮಾರಿದ್ದಾನೆ. ಹಣ ಕಟ್ಟಿಸಿಕೊಳ್ಳುವವರೆಗೂ ನವರಂಗಿ ನಾಟಕ ಮಾಡಿದ ಆನ್​ಲೈನ್ ಖದೀಮರು ಯಾವಾಗ ಹಣ ಕ್ರೆಡಿಟ್ ಆಯ್ತೋ ಆಗ ಟಾಟಾ ಬಾಯ್ ಬಾಯ್ ಹೇಳಿದ್ದಾರೆ.

ನಯನ್ ಕುಮಾರ್ ತನ್ನ ಸಹೋದರ ಕಳುಹಿಸಿದ ಲಿಂಕ್ ಒತ್ತಿದ್ದಾರೆ. ಅದರಲ್ಲಿ 80 ಪರ್ಸೆಂಟ್​ ಡಿಸ್ಕೌಂಟ್​ನಲ್ಲಿ ಮೊಬೈಲ್ ದೊರೆಯುತ್ತೆ ಅನ್ನೋ ಮಾಹಿತಿ ನೋಡಿದ್ದಾನೆ. ಇಷ್ಟು ಕಡಿಮೆಗೆ ಮೊಬೈಲ್ ಸಿಗುತ್ತೆ ಅಂತ ಪರ್ಚೇಸ್ ಮಾಡಿಯೇ ಬಿಟ್ಟಿದ್ದಾನೆ. ಯುಪಿಐ ಪಿನ್ ಬಳಸಿ ಯಾವಾಗ ಹಣ ಕಟ್ಟಿದ್ನೋ ಆನಂತರ ಡೊಮೈನ್ ಪರ್ಚೇಸ್ ನೋಟಿಫಿಕೇಷನ್ ಕೂಡ ಬಂದಿಲ್ಲ. ಇತ್ತ ಎಲ್ಲಿಗೆ ಹಣ ಕೊಟ್ಟಿದ್ದೇನೆ ಎನ್ನೋದು ಗೊತ್ತಾಗಿಲ್ಲ.

ಕೊನೆಗೆ ನಯನ್ ಕುಮಾರ್ ತುಮಕೂರಿನ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ. ಬ್ಯಾಂಕ್ ಡೀಟೇಲ್ಸ್​ ಸಮೇತ ದೂರು ಕೊಡ್ತಾರೆ. ಯುಪಿಐ ಮುಖಾಂತರ ಸ್ವ ಇಚ್ಛೆಯಿಂದ ಹಣ ಕಳುಹಿಸಿದ್ದು ಕಳ್ಳರನ್ನ ಹಿಡಿಯೋದು ಕಷ್ಟ ಅಂತ ಪೊಲೀಸರು ಕೈ ಚಲ್ತಿದ್ದಾರೆ.

Published On - 2:47 pm, Sat, 27 June 20

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ