ತುಮಕೂರು ವಿವಿ 14ನೇ ಘಟಿಕೋತ್ಸವ ಸಮಾರಂಭ; 73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

| Updated By: ಸಾಧು ಶ್ರೀನಾಥ್​

Updated on: Mar 05, 2021 | 2:30 PM

ತುಮಕೂರು ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ತುಮಕೂರು ವಿವಿ 14ನೇ ಘಟಿಕೋತ್ಸವ ಸಮಾರಂಭ; 73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ತುಮಕೂರು ವಿವಿ 14ನೇ ಘಟಿಕೋತ್ಸವ ಸಮಾರಂಭ
Follow us on

ತುಮಕೂರು: ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಸಮಾರಂಭ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಈ ಬಾರಿಯ ಘಟಿಕೋತ್ಸವದಲ್ಲಿ ಒಟ್ಟು 9,853 ಅಭ್ಯರ್ಥಿಗಳು ಪದವಿ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಭಾಗಿಯಾಗಿದ್ದು, ನಾಟ್ಯ, ಸಮಾಜ ಸೇವೆ ಮತ್ತು ಇತಿಹಾಸ ವಿಭಾಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವಿಸಲಾಗಿದೆ.

ಘಟಿಕೋತ್ಸವದಲ್ಲಿ 73 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ. 147 ಪಿಎಸ್​ಡಿ ಪದವಿ, 1,716 ಸ್ನಾತಕೋತ್ತರ ಹಾಗೂ 7,992 ಸ್ನಾತಕ ಪದವಿ ಪ್ರದಾನ ಮಾಡಲಾಗಿದೆ. 73 ವಿದ್ಯಾರ್ಥಿಗಳಿಗೆ 92 ಚಿನ್ನದ ಪದಕ ಹಾಗೂ 6 ನಗದು ಬಹುಮಾನ ಪ್ರದಾನ ಮಾಡಲಾಗಿದೆ. ವಿಶ್ವವಿದ್ಯಾಲಯವು ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ 5 ರ‍್ಯಾಂಕ್​ಗಳನ್ನು, ಸೆಮಿಸ್ಟರ್​ ಪದ್ದತಿಗಳಿಗೆ ತಲಾ 10 ರ‍್ಯಾಂಕ್​, ಬಿ.ಎಫ್​ಎ 1 ರ‍್ಯಾಂಕ್​, ಬಿ.ವೋಕ್​ 3, ಬಿಸಿಎಗೆ 5 ಹಾಗೂ ಬಿಎ ಇಂಟಿಗ್ರೇಟೆಡ್​ ಕನ್ನಡ ಪಂಡಿತ್​ಗೆ 2 ರ‍್ಯಾಂಕ್​ ಘೋಷಿಸಿದೆ.

ತುಮಕೂರು ವಿವಿ 14ನೇ ಘಟಿಕೋತ್ಸವ

ಘಟಿಕೋತ್ಸವದಲ್ಲಿ ವಿವಿ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ, ರಾಜಸ್ಥಾನ ಕೇಂದ್ರೀಯ ವಿವಿ ಕುಲಾಧಿಪತಿಗಳಾದ ಡಾ. ಕೃಷ್ಣಸ್ವಾಮಿ ಕಸ್ತೂರಿ ರಂಗನ್, ತುಮಕೂರು ವಿವಿ ಕುಲಪತಿ ವೈ.ಎಸ್ ಸಿದ್ದೇಗೌಡ ಉಪಸ್ಥಿತರಿದ್ದರು.

ವಿವಿ 14ನೇ ಘಟಿಕೋತ್ಸವ ಸಮಾರಂಭ

ಇದನ್ನೂ ಓದಿ: ರಾಜೀವ್ ಗಾಂಧಿ ಆರೋಗ್ಯ ವಿವಿಯ 23ನೇ ಘಟಿಕೋತ್ಸವ | ವೈದ್ಯಕೀಯ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಸಾಧನೆ ಅಪಾರ: ರಾಮನಾಥ​ ಕೋವಿಂದ್

ಇದನ್ನೂ ಓದಿ: ಕೊರೊನಾ ನಂತರದ ಮೊದಲ ಘಟಿಕೋತ್ಸವಕ್ಕೆ ಸಾಕ್ಷಿಯಾಗ್ತಿದೆ ಬೆಂಗಳೂರು ವಿವಿ! ಇಸ್ರೋ ಮುಖ್ಯಸ್ಥ ಶಿವನ್ ಮುಖ್ಯ ಅತಿಥಿ