ಟಿವಿ9 ಬಿಗ್ ಇಂಪ್ಯಾಕ್ಟ್: ಸಿಬ್ಬಂದಿ ಜೊತೆ ದರ್ಪ ತೋರುತ್ತಿದ್ದ ಹಾರ್ನ್ ಲೇಡಿ ಸಸ್ಪೆಂಡ್

ಸಿಬ್ಬಂದಿ ಜೊತೆ ದುರ್ವರ್ತನೆ ಆರೋಪದಡಿ ಸಿಂಧನೂರು ತಾಲುಕಿನ ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಆದೇಶ ಪ್ರತಿಯಲ್ಲಿ ಪ್ರಿಯಾಂಕಾ ಅವರ ಹಳೆಯ ಪ್ರಕರಣದ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಟಿವಿ9 ಬಿಗ್ ಇಂಪ್ಯಾಕ್ಟ್: ಸಿಬ್ಬಂದಿ ಜೊತೆ ದರ್ಪ ತೋರುತ್ತಿದ್ದ ಹಾರ್ನ್ ಲೇಡಿ ಸಸ್ಪೆಂಡ್
ಟಿವಿ9 ಬಿಗ್ ಇಂಪ್ಯಾಕ್ಟ್: ಸಿಬ್ಬಂದಿ ಜೊತೆ ದುರ್ವರ್ತನೆ ತೋರಿದ ಹಾರ್ನ್ ಲೇಡಿ ಸಸ್ಪೆಂಡ್
Updated By: Rakesh Nayak Manchi

Updated on: Sep 02, 2022 | 5:18 PM

ರಾಯಚೂರು: ಸಿಬ್ಬಂದಿ ಜೊತೆ ದುರ್ವರ್ತನೆ ಆರೋಪದಡಿ ಸಹಾಯಕ ಕೃಷಿ ನಿರ್ದೇಶಕಿ ಪ್ರಿಯಾಂಕಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಜಿಲ್ಲೆಯ ಸಿಂಧನೂರು ತಾಲುಕಿನ ಸಹಾಯಕ ಕೃಷಿ ನಿರ್ದೇಶಕಿಯಾಗಿರುವ ಪ್ರಿಯಾಂಕಾ, ಅವರ ನಿರಂತರ ದುರ್ವರ್ತನೆಯಿಂದ ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೇಸತ್ತಿದ್ದರು. ಕಚೇರಿಕೆ ಪ್ರವೇಶ ಮಾಡುತ್ತಿದ್ದಂತೆ ಅವರ ವರ್ತನೆಗಳು ಆರಂಭವಾಗುತ್ತಿದ್ದವು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ವರದಿ ಬೆನ್ನಲ್ಲೆ ಶಿಸ್ತು ಪ್ರಾಧಿಕಾರ ಹಾಗೂ ಕೃಷಿ ಆಯುಕ್ತ ಶರತ್.ಬಿ ಅವರು ಪ್ರಿಯಾಂಕಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸಹಾಯಕ ನಿರ್ದೇಶಕಿ ಪ್ರಿಯಾಂಕಾ, ಕಚೇರಿಗೆ ಪ್ರವೇಶಿಸುತ್ತಿದ್ದಂತೆ ಅವರದ್ದೇ ಆದ ಶಿಷ್ಟಾಚಾರಗಳನ್ನು ಪ್ರಾರಂಭಿಸುತ್ತಿದ್ದರು. ಕಚೇರಿ ಗೇಟ್​ನಲ್ಲಿ ಹಾರ್ನ್​ ಹಾಕಿ ಸಿಬ್ಬಂದಿಯನ್ನು ಎಚ್ಚರಿಸುತ್ತಿದ್ದ ಹಾರ್ನ್ ಲೇಡಿ ಪ್ರಿಯಾಂಕಾ, ಸಿಬ್ಬಂದಿಗಳು ಕಾರಿನ ಬಾಗಿಲು ತೆರೆದ  ನಂತರವೇ ಕೆಳಗಳಿಯುತ್ತಿದ್ದರು. ಒಂದೊಮ್ಮೆ ಸಿಬ್ಬಂದಿ ಬಾಗಿಲು ತೆರೆಯುವುದು ತಡವಾದರೆ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದರು.

ಪ್ರಿಯಾಂಕಾ ಅವರು ಸಿಬ್ಬಂದಿ ಮೇಲೆ ದರ್ಪ ತೋರುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಟಿವಿ9 ವಿಸ್ತೃತವಾದ ವರದಿಯನ್ನೂ ಮಾಡಿತ್ತು. ವರದಿಯ ಬೆನ್ನಲ್ಲೆ ಶಿಸ್ತು ಪ್ರಾಧಿಕಾರ ಹಾಗೂ ಕೃಷಿ ಆಯುಕ್ತ ಶರತ್.ಬಿ ಅವರು ಪ್ರಿಯಾಂಕಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಆದೇಶ ಪ್ರತಿಯಲ್ಲಿ ಹಳೆ ಕೇಸ್ ಬಗ್ಗೆ ಉಲ್ಲೇಖ

ಶಿಸ್ತು ಪ್ರಾಧಿಕಾರ ಹಾಗೂ ಕೃಷಿ ಆಯುಕ್ತ ಶರತ್.ಬಿ ಅವರು ಹೊರಡಿಸಿದ ಆದೇಶದ ಪ್ರತಿಯಲ್ಲಿ ಹಳೆಯ ಪ್ರಕರಣದ ಉಲ್ಲೇಖವನ್ನು ಕೂಡ ಮಾಡಲಾಗಿದೆ. ಈ ಹಿಂದೆ ದೇವದುರ್ಗ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕಿಯಾಗಿದ್ದ ಪ್ರಿಯಾಂಕಾ 19 ಡಿಸಿ ಬಿಲ್​ಗಳಲ್ಲಿ 4.6 ಲಕ್ಷ ಅಕ್ರಮ ಎಸಗಿದ್ದ ಆರೋಪ ಇದೆ. ಆ ಕೇಸ್​ನಲ್ಲಿ ಇಲಾಖಾ ತನಿಖೆ ನಡೆಯಿತ್ತಿದ್ದು, ತನಿಖೆಗೆ ಗೈರಾಗಿರುವ ಆರೋಪವೂ ಇದೆ. ಅಲ್ಲದೆ ಹಿರಿಯ ಅಧಿಕಾರಿಗಳ ಜೊತೆಯೂ ಉದ್ಧಟತನ ಪ್ರದರ್ಶಿಸಿರೋದರ ಬಗ್ಗೆ ಉಲ್ಲೇಖಿಸಲಾಗಿದೆ.

ವೈರಲ್ ವಿಡಿಯೋ:

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:14 pm, Fri, 2 September 22