ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ಕರಾವಳಿಯ ಜಾನಪದ ಕ್ರೀಡೆಗೆ 1 ಕೋಟಿ ರೂ. ಸಹಾಯಧನ ಬಿಡುಗಡೆ
ಕರಾವಳಿಯ ಜಾನಪದ ಕ್ರೀಡೆಯಾದ ಕಂಬಳವನ್ನು ಪ್ರೋತ್ಸಾಹಿಸುವ ಸಲುವಾಗಿ ಸಹಾಯಧನ ನೀಡಲು ತೀರ್ಮಾನಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
Link: ಕಂಬಳಕ್ಕೆ ಉಡುಗೊರೆ; 1 ಕೋಟಿ ರೂ. ಸಹಾಯಧನ ಬಿಡುಗಡೆ
2) ಕೊರೊನಾಕ್ಕಿಂತ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೇ ಹೆಚ್ಚು
ಕಳೆದ ಒಂದು ವರ್ಷದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರಿಗಿಂತ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೇ ಹೆಚ್ಚು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.
Link: ಕಳೆದೊಂದು ವರ್ಷದಲ್ಲಿ ಕೊರೊನಾಕ್ಕಿಂತ ರಸ್ತೆ ಅಪಘಾತಕ್ಕೆ ಬಲಿಯಾದವರೇ ಹೆಚ್ಚು: ನಿತಿನ್ ಗಡ್ಕರಿ
3) ಸಾಮಾಜಿಕ ಮಾಧ್ಯಮಗಳ ದುರುಪಯೋಗಕ್ಕೆ ಅವಕಾಶ ನೀಡಲ್ಲ: ರವಿಶಂಕರ್ ಪ್ರಸಾದ್
ಅಂತರ್ಜಾಲದಲ್ಲಿ ಪ್ರಭುತ್ವ ಸಾಧಿಸಲು ಕೆಲವು ಸಂಸ್ಥೆಗಳು ಪ್ರಯತ್ನಿಸುತ್ತಿದ್ದು ಇದನ್ನು ನಾವು ಒಪ್ಪಲ್ಲ ಎಂದು ಕೇಂದ್ರ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
Link: ನಗ್ನಫೋಟೊ, ತಿರುಚಿದ ಫೋಟೊಗಳಿರುವ ಪೋಸ್ಟ್ನ್ನು 36ಗಂಟೆಗಳೊಳಗೆ ತೆಗೆದುಹಾಕಲಾಗುವುದು
4) ಗೋಶಾಲೆಯಲ್ಲಿ ಕಾಲ ಕಳೆದ ನಟ ದರ್ಶನ್
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ಗೆ ರಾಬರ್ಟ್ ಸಿನಿಮಾದಿಂದ ಬಹುದೊಡ್ಡ ಗೆಲುವು ಸಿಕ್ಕಿದೆ. ಬಾಕ್ಸ್ ಆಫೀಸ್ನಲ್ಲಿ 60 ಕೋಟಿ ರೂ.ಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿ ಈ ಸಿನಿಮಾ ಮನ್ನುಗ್ಗುತ್ತಿದೆ. ಈ ಖುಷಿಯಲ್ಲಿ ದರ್ಶನ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
Link: ಮಂತ್ರಾಲಯದ ಗೋಶಾಲೆಯಲ್ಲಿ ಕಾಲ ಕಳೆದ ಡಿ ಬಾಸ್ ದರ್ಶನ್! ವಿಡಿಯೋ ವೈರಲ್
5) ಪಾಕಿಸ್ತಾನದ ನವವಧುವನ್ನು ಹೊಗಳುತ್ತಿರುವ ನೆಟ್ಟಿಗರು
ಪಾಕಿಸ್ತಾನದ ನವವಧುವೊಬ್ಬಳನ್ನು ಸೋಷಿಯಲ್ ಮೀಡಿಯಾದಲ್ಲಿ ಜನರು ತುಂಬ ಹೊಗಳುತ್ತಿದ್ದಾರೆ. ಈಕೆಯ ಹೆಸರು ನೈಲಾ ಶಮಲ್. ಪಾಕ್ನ ಮರ್ದಾನ್ನವರು. ನೈಲಾರನ್ನು ನೆಟ್ಟಿಗರು ಅಷ್ಟೊಂದು ಹೊಗಳಲು ಮುಖ್ಯ ಕಾರಣ ಅವರು ಮದುವೆ ಸಂದರ್ಭದಲ್ಲಿ ಪತಿಯಿಂದ ಪಡೆದ ಉಡುಗೊರೆ.
Link: ಪತಿಯ ಬಳಿ ಇಟ್ಟ ಆ ಒಂದು ಬೇಡಿಕೆಯಿಂದ ಸ್ಟಾರ್ ಆಗ್ಬಿಟ್ರು ಮಹಿಳೆ
6) ಪಕ್ಷದ ವರಿಷ್ಠರು ಸೂಚಿಸಿದರೆ ನಾನು ಸ್ಪರ್ಧಿಸುವುದಕ್ಕೆ ಸಿದ್ಧ; ಸತೀಶ್ ಜಾರಕಿಹೊಳಿ
ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಅನಿಸಿಕೆ ಹೊರ ಹಾಕಿದ್ದಾರೆ. ಪಕ್ಷದ ವರಿಷ್ಠರು ಸೂಚಿಸಿದರೆ ನಾನು ಸ್ಪರ್ಧಿಸುವುದಕ್ಕೆ ಸಿದ್ಧ ಎಂದು ವಿಧಾನಸೌಧದಲ್ಲಿ ‘ಕೈ’ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
Link: ವರಿಷ್ಠರು ಸೂಚಿಸಿದರೆ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಿದ್ಧ -ಸತೀಶ್ ಜಾರಕಿಹೊಳಿ
7) ಭಾರತದ ದ್ವೀಪವೊಂದರಲ್ಲಿ ಸೂಕ್ಷ್ಮಜೀವಿಯನ್ನು ಪತ್ತೆ ಹಚ್ಚಿದ ವಿಜ್ಞಾನಿಗಳು
ಹಲವು ಔಷಧಿಗಳಿಗೆ ಈಗಾಗಲೇ ಪ್ರತಿರೋಧ ಶಕ್ತಿ ಬೆಳೆಸಿಕೊಂಡಿರುವ ‘ಸೂಪರ್ಬಗ್’ (ಸೂಕ್ಷ್ಮಜೀವಿ) ಒಂದನ್ನು ವಿಜ್ಞಾನಿಗಳು ಭಾರತದ ದ್ವೀಪವೊಂದರಲ್ಲಿ ಪತ್ತೆ ಹಚ್ಚಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮಾಹಾಪಿಡುಗಾಗಿ ಜಗತ್ತಿಗೆ ಮತ್ತೊಂದು ಸಾಂಕ್ರಾಮಿಕ ರೋಗ ಹರಡಬಲ್ಲದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
Link: ಭಾರತದಲ್ಲಿ ಪತ್ತೆಯಾದ ಈ ‘ಸೂಪರ್ಬಗ್’ ಮುಂದಿನ ಮಹಾಪಿಡುಗು ಎನ್ನುತ್ತಿದೆ ವೈದ್ಯ ವಿಜ್ಞಾನ ಲೋಕ: ಹೊಸಿಲಲ್ಲಿದೆಯೇ ಮತ್ತೊಂದು ಸಾಂಕ್ರಾಮಿಕ?
8) ತಾಯಿ ಪಡೆದ ವ್ಯಾಕ್ಸಿನ್ನಿಂದ ಶಕ್ತಿ ಪಡೆದು ಹುಟ್ಟಿದ ಅಮೆರಿಕದ ಮೊದಲ ಮಗು
ಮೊಡೆರ್ನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದ ದಕ್ಷಿಣ ಫ್ಲೋರಿಡಾದ ಗರ್ಭಿಣಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೂ ಒಂದು ಅಚ್ಚರಿಯ ಸಂಗತಿಯೆಂದರೆ, ಈ ಮಗು ದೇಹದಲ್ಲಿ ಕೊರೊನಾ ಪ್ರತಿಕಾಯಗಳನ್ನು (ಆ್ಯಂಟಿಬಾಡೀಸ್) ಒಳಗೊಂಡೇ ಜನಿಸಿದೆ.
Link: ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿಯೇ ಹುಟ್ಟಿದ ಶಿಶು
9) ಕಾಫಿನಾಡಿನಲ್ಲಿ ಸರಳವಾಗಿ ತಮ್ಮ ಬರ್ತ್ಡೇ ಆಚರಿಸಿಕೊಂಡ ಪವರ್ ಸ್ಟಾರ್
ಮಾರ್ಚ್ 17 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟಿದ ದಿನ. ಅವರಿ ಅದ್ದೂರಿಯಾಗಿ ಹುಟ್ಟಿದ ಹಬ್ಬ ಆಚರಿಸಿಕೊಳ್ತಾರೆ ಅಂದುಕೊಂಡಿದ್ದ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಪುನೀತ್ ಕೈಗೆ ಸಿಕ್ಕಿರಲಿಲ್ಲ.
Link: ಚಿಕ್ಕಮಗಳೂರಿನಲ್ಲಿ ಪುನೀತ್ ಸಿಂಪಲ್ ಬರ್ತ್ಡೇ; ಫೋಟೋ ಕೇಳಿದ ಅಭಿಮಾನಿಗಳಿಗೆ ಅಪ್ಪು ಕಂಡೀಷನ್
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.
Published On - 6:23 pm, Thu, 18 March 21