ಪಾಕಿಸ್ತಾನದ ಈ ನವವಧುವನ್ನು ಭರ್ಜರಿ ಹೊಗಳುತ್ತಿದ್ದಾರೆ ನೆಟ್ಟಿಗರು; ಪತಿಯ ಬಳಿ ಇಟ್ಟ ಆ ಒಂದು ಬೇಡಿಕೆಯಿಂದ ಸ್ಟಾರ್​ ಆಗ್ಬಿಟ್ರು ಮಹಿಳೆ

ಇಸ್ಲಾಮಿಕ್​ ಕಾನೂನಿನ ಪ್ರಕಾರ ಮದುವೆ ಸಂದರ್ಭದಲ್ಲಿ ಹಕ್ ಮೆಹರ್ ಎಂಬ ಆಚರಣೆ ಮಾಡಲಾಗುತ್ತದೆ. ಈ ಪದ್ಧತಿ ಅನ್ವಯ, ವರ- ವಧುವಿನ ಕೈಹಿಡಿದ ಸಂದರ್ಭದಲ್ಲಿ ಅವಳಿಗೆ ಹಣ, ಒಡವೆ, ಪೀಠೋಪಕರಣಗಳು ಅಥವಾ ಅಗತ್ಯ ಇರುವ ಯಾವುದೇ ಬೆಲೆಬಾಳುವ ಸಾಮಗ್ರಿಯನ್ನು ಉಡುಗೊರೆ ಕೊಡಬೇಕು.

ಪಾಕಿಸ್ತಾನದ ಈ ನವವಧುವನ್ನು ಭರ್ಜರಿ ಹೊಗಳುತ್ತಿದ್ದಾರೆ ನೆಟ್ಟಿಗರು; ಪತಿಯ ಬಳಿ ಇಟ್ಟ ಆ ಒಂದು ಬೇಡಿಕೆಯಿಂದ ಸ್ಟಾರ್​ ಆಗ್ಬಿಟ್ರು ಮಹಿಳೆ
ನೈಲಾ ಶಮಲ್
Follow us
Lakshmi Hegde
|

Updated on: Mar 18, 2021 | 4:28 PM

ಲಾಹೋರ್​: ಪಾಕಿಸ್ತಾನದ ನವವಧುವೊಬ್ಬಳನ್ನು ಸೋಷಿಯಲ್​ ಮೀಡಿಯಾದಲ್ಲಿ ಜನರು ತುಂಬ ಹೊಗಳುತ್ತಿದ್ದಾರೆ. ಈಕೆಯ ಹೆಸರು ನೈಲಾ ಶಮಲ್​. ಪಾಕ್​ನ ಮರ್ದಾನ್​​ನವರು. ನೈಲಾರನ್ನು ನೆಟ್ಟಿಗರು ಅಷ್ಟೊಂದು ಹೊಗಳಲು ಮುಖ್ಯ ಕಾರಣ ಅವರು ಮದುವೆ ಸಂದರ್ಭದಲ್ಲಿ ಪತಿಯಿಂದ ಪಡೆದ ಉಡುಗೊರೆ. ಇಸ್ಲಾಮಿಕ್​ ಕಾನೂನಿನ ಪ್ರಕಾರ ಮದುವೆ ಸಂದರ್ಭದಲ್ಲಿ ಹಕ್ ಮೆಹರ್ ಎಂಬ ಆಚರಣೆ ಮಾಡಲಾಗುತ್ತದೆ. ಈ ಪದ್ಧತಿ ಅನ್ವಯ, ವರ- ವಧುವಿನ ಕೈಹಿಡಿದ ಸಂದರ್ಭದಲ್ಲಿ ಅವಳಿಗೆ ಹಣ, ಒಡವೆ, ಪೀಠೋಪಕರಣಗಳು ಅಥವಾ ಅಗತ್ಯ ಇರುವ ಯಾವುದೇ ಬೆಲೆಬಾಳುವ ಸಾಮಗ್ರಿಯನ್ನು ಉಡುಗೊರೆ ರೂಪದಲ್ಲಿ ಕೊಡಬೇಕು.

ಆದರೆ ನೈಲಾ ತನ್ನ ಪತಿಯ ಬಳಿ ಇಟ್ಟ ಬೇಡಿಕೆಯೇ ಬೇರೆ. ನನಗೆ ಹಣ, ಒಡವೆ ಯಾವುದೂ ಬೇಡ.. ಹಕ್​ ಮೆಹರ್​ ರೂಪದಲ್ಲಿ 1,00,000 ರೂ.ಮೌಲ್ಯದ ಪುಸ್ತಕವನ್ನು ಕೊಡು ಎಂದು ಕೇಳಿದ್ದಾರೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ನೈಲಾರನ್ನು ಶ್ಲಾಘಿಸಿದ್ದಾರೆ. ನೈಲಾ ಒಬ್ಬ ಬರಹಗಾರ್ತಿ. ಮದುವೆ ಉಡುಪು ಧರಿಸಿಯೇ, ಪುಸ್ತಕಗಳಿದ್ದ ಶೆಲ್ಫ್​ ಬಳಿ ಕುಳಿತು ವಿಡಿಯೋವೊಂದನ್ನು ಮಾಡಿದ್ದಾರೆ. ಸಮಾಜದಲ್ಲಿ ಇರುವ ಕೆಲವು ತಪ್ಪು ಸಂಪ್ರದಾಯಗಳನ್ನು ತೊಡೆದು ಹಾಕಬೇಕು ಎಂದು ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ನಮ್ಮ ಪಾಕ್​ ದೇಶದಲ್ಲಿ ಹಣದುಬ್ಬರ ಜಾಸ್ತಿಯಾಗುತ್ತಿದೆ. ಹಾಗಾಗಿ ದುಬಾರಿ ವಸ್ತುಗಳನ್ನು ಕೊಳ್ಳುವುದು ಅಷ್ಟು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ನೈಲಾ ಹೇಳಿಕೊಂಡಿದ್ದಾರೆ.

ಹಕ್​ ಮೆಹರ್​ನಲ್ಲಿ ಅನೇಕ ಮಹಿಳೆಯರು ಒಡವೆ, ಹಣಕ್ಕೆ ಬೇಡಿಕೆ ಇಡುತ್ತಾರೆ. ಆದರೆ ನಾನೊಬ್ಬ ಬರಹಗಾರ್ತಿಯಾಗಿ ನನಗೆ ಪುಸ್ತಕಗಳೆಂದರೆ ಪ್ರೀತಿ. ಬರಹಗಾರ್ತಿಯಾದ ನಾನು ಪುಸ್ತಕಗಳ ಬಗ್ಗೆ ಒಲವು ತೋರದಿದ್ದರೆ, ಸಾಮಾನ್ಯ ಜನರು ಹೇಗೆ ತೋರುತ್ತಾರೆ. ಅವರಿಗೆ ಪುಸ್ತಕಗಳ ಮಹತ್ವ ಗೊತ್ತಾಗುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಎಲ್ಲರಲ್ಲೂ ಪುಸ್ತಕದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಾನು ಹಕ್​ ಮೆಹರ್​​ನಲ್ಲಿ ಪತಿಯಿಂದ 1 ಲಕ್ಷ ರೂ.ಮೌಲ್ಯದ ಪುಸ್ತಕಗಳನ್ನು ಪಡೆದೆ ಎಂದು ತಿಳಿಸಿದ್ದಾರೆ. ಇನ್ನು ನೈಲಾ ಪತಿ ಕೂಡ ಬರಹಗಾರರೇ ಆಗಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಿದ ಬನಾರಸ್​ ಹಿಂದೂ ವಿವಿ ಆಸ್ಪತ್ರೆ ವೈದ್ಯರು; ವೈರಲ್​ ಆದ ಫೋಟೋ ನೋಡಿ ಡೀನ್​ ಕೆಂಡಾಮಂಡಲ