AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಿದ ಬನಾರಸ್​ ಹಿಂದೂ ವಿವಿ ಆಸ್ಪತ್ರೆ ವೈದ್ಯರು; ವೈರಲ್​ ಆದ ಫೋಟೋ ನೋಡಿ ಡೀನ್​ ಕೆಂಡಾಮಂಡಲ

ಸೋಮವಾರ ಬೆಳಗ್ಗೆ ಡೆಂಟಲ್​ ರೋಗಿಗೆ ದಂತದ ಸರ್ಜರಿ ಮಾಡುವುದಾಗಿ ಹಿಂದಿನ ದಿನವೇ ನಿರ್ಧರಿಸಲಾಗಿತ್ತು. ಹಾಗೇ, ಸೋಮವಾರ ಸರ್ಜರಿ ಆರಂಭ ಮಾಡಿದ ಕೆಲವೇ ಹೊತ್ತಲ್ಲಿ ಕರೆಂಟ್​ ಹೋಯಿತು. ಇರುವ ಪರ್ಯಾಯ ಮಾರ್ಗಗಳು ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದ್ದಾರೆ.

ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಿದ ಬನಾರಸ್​ ಹಿಂದೂ ವಿವಿ ಆಸ್ಪತ್ರೆ ವೈದ್ಯರು; ವೈರಲ್​ ಆದ ಫೋಟೋ ನೋಡಿ ಡೀನ್​ ಕೆಂಡಾಮಂಡಲ
ಮೊಬ
Lakshmi Hegde
|

Updated on:Mar 18, 2021 | 3:30 PM

Share

​ವಾರಾಣಸಿ: ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ಎಸ್​ಎಸ್​ಎಲ್​ ಆಸ್ಪತ್ರೆಯ ವೈದ್ಯರು, ಆರೋಗ್ಯ ಸಿಬ್ಬಂದಿ ಇದೀಗ ಸುದ್ದಿಯಲ್ಲಿದ್ದಾರೆ. ಸರ್ಜರಿ ಮಾಡುತ್ತಿದ್ದಾಗ ಕರೆಂಟ್​ ಹೋಯಿತು ಎಂಬ ಕಾರಣಕ್ಕೆ, ಮೊಬೈಲ್​ ಫ್ಲ್ಯಾಶ್​ ಬೆಳಕಲ್ಲೇ ಶಸ್ತ್ರಚಿಕಿತ್ಸೆ ಮಾಡಿರುವ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್​ ವೈರಲ್ ಆಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂದೂ ಜನರು ಪ್ರಶ್ನಿಸುತ್ತಿದ್ದಾರೆ.

ಇನ್ನು ವೈದ್ಯರು ಮೊಬಲ್​ ಬೆಳಕಲ್ಲಿ ಸರ್ಜರಿ ಮಾಡುತ್ತಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ವಿಶ್ವವಿದ್ಯಾಲಯದ ಆಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆ ಸರ್ಜರಿಯಲ್ಲಿ ಪಾಲ್ಗೊಂಡಿದ್ದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ವಿಚಾರಣೆಗೆ ಆದೇಶಿಸಲಾಗಿದೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ದಂತ ವಿಜ್ಞಾನ ವಿಭಾಗದ ಡೀನ್ ಪ್ರೊ.ವಿನಯ್​ ಕುಮಾರ್​ ಶ್ರೀವಾಸ್ತವ್​, ಮೊಬೈಲ್​ ಬೆಳಕಲ್ಲಿ ಆಪರೇಶನ್ ಮಾಡಿದ ಎಲ್ಲ ವೈದ್ಯರು, ಸಿಬ್ಬಂದಿಗೂ ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೆಲವು ಕೆಲಸ, ನಿರ್ವಹಣೆ ನಿಮಿತ್ತ ಸರ್ಜಿಕಲ್ ವಿಭಾಗಗಳಲ್ಲಿ ವಿದ್ಯುತ್​ ಕಡಿತ ಆಗಲಿದೆ ಎಂಬ ಬಗ್ಗೆ 15 ದಿನಗಳ ಹಿಂದೆಯೇ ಅಧಿಸೂಚನೆ ನೀಡಲಾಗಿದೆ. ಈ ನೋಟಿಫಿಕೇಶನ್​ ನೀಡಿದ ಬಳಿಕವೂ ಆಪರೇಶನ್​ ಥಿಯೇಟರ್​ ತೆರೆದಿದ್ದು ನನ್ನ ಗಮನಕ್ಕೆ ಬಂದಿಲ್ಲ. ಫೋಟೋಗಳೆಲ್ಲ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದು ದೊಡ್ಡ ಅಚಾತುರ್ಯ ಎಂದು ವಿನಯ್​ಕುಮಾರ್​ ಹೇಳಿದ್ದಾರೆ. ವೈದ್ಯರು, ಸಿಬ್ಬಂದಿಯನ್ನು ವಿಚಾರಿಸಲು, ಘಟನೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಅದರ ವರದಿಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದೂ ಹೇಳಿದ್ದಾರೆ.

ಮಾಡಿದ್ದು ದಂತ ಶಸ್ತ್ರಚಿಕಿತ್ಸೆ ವೈದ್ಯರು ಮೊಬೈಲ್ ಫ್ಲ್ಯಾಶ್​​ ಬೆಳಕಲ್ಲಿ ನಡೆಸಿದ್ದು ದಂತ ಶಸ್ತ್ರಚಿಕಿತ್ಸೆ ಎಂಬುದು ಫೋಟೋ ನೋಡಿದರೆ ಗೊತ್ತಾಗುತ್ತಿದೆ. ಸೋಮವಾರ ಬೆಳಗ್ಗೆ ಡೆಂಟಲ್​ ರೋಗಿಗೆ ದಂತದ ಸರ್ಜರಿ ಮಾಡುವುದಾಗಿ ಹಿಂದಿನ ದಿನವೇ ನಿರ್ಧರಿಸಲಾಗಿತ್ತು. ಹಾಗೇ, ಸೋಮವಾರ ಸರ್ಜರಿ ಆರಂಭ ಮಾಡಿದ ಕೆಲವೇ ಹೊತ್ತಲ್ಲಿ ಕರೆಂಟ್​ ಹೋಯಿತು. ಇರುವ ಪರ್ಯಾಯ ಮಾರ್ಗಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಮೊಬೈಲ್​ ಬೆಳಕಲ್ಲಿ ಸರ್ಜರಿ ಮಾಡಬೇಕಾಯಿತು. ಸಂಪೂರ್ಣ ಸರ್ಜರಿಯೂ ಮೊಬೈಲ್​ ಬೆಳಕಲ್ಲೇ ನಡೆದಿದೆ ಎಂದು ದಂತ ವಿಭಾಗದ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಚಲಿಸುತ್ತಿದ್ದ ಕಾರಿನಿಂದ ದೊಪ್ಪನೆ ರಸ್ತೆಗೆ ಬಿದ್ದ ಮಗು; ಮುಂದೇನಾಯ್ತು ನೀವೇ ನೋಡಿ..

ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !

Published On - 3:28 pm, Thu, 18 March 21

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ