AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುತ್ತಿದ್ದ ಕಾರಿನಿಂದ ದೊಪ್ಪನೆ ರಸ್ತೆಗೆ ಬಿದ್ದ ಮಗು; ಮುಂದೇನಾಯ್ತು ನೀವೇ ನೋಡಿ..

ಈ ವಿಡಿಯೋ ನೋಡಿದರೆ, ಮಗು ನಿಜಕ್ಕೂ ಪವಾಡ ಸದೃಶವಾಗಿ ಬಚಾವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಶಿರಿನ್ ಖಾನ್​ ಶೇರ್​ ಮಾಡಿಕೊಂಡ ವಿಡಿಯೋ 10 ಸಾವಿರಕ್ಕೂ ಹೆಚ್ಚು ವೀವ್ಸ್ ಕಂಡಿದೆ. ಜನರು ಮಗುವಿನ ಕುಟುಂಬದವರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Viral Video: ಚಲಿಸುತ್ತಿದ್ದ ಕಾರಿನಿಂದ ದೊಪ್ಪನೆ ರಸ್ತೆಗೆ ಬಿದ್ದ ಮಗು; ಮುಂದೇನಾಯ್ತು ನೀವೇ ನೋಡಿ..
ಚಲಿಸುತ್ತಿದ್ದ ಕಾರಿನಿಂದ ಬಿದ್ದ ಮಗು
Lakshmi Hegde
|

Updated on:Mar 17, 2021 | 8:02 PM

Share

ವಾಹನ ನಿಬಿಡ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಡಿಕ್ಕಿ ಓಪನ್​ ಆಗಿ, ಅಲ್ಲಿಂದ ಮಗುವೊಂದು ರಸ್ತೆಗೆ ಬಿದ್ದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ವೈರಲ್ ಆಗುತ್ತಿದೆ. ದಿ ಸನ್​ ಮಾಧ್ಯಮ ಮೊದಲು ಈ ವಿಡಿಯೋವನ್ನು ಪೋಸ್ಟ್ ಮಾಡಿಕೊಂಡಿತ್ತು. ಅದಾದ ಬಳಿಕ ಶಿರಿನ್​ ಖಾನ್ ಎಂಬ ಟ್ವಿಟರ್​ ಬಳಕೆದಾರರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ದೃಶ್ಯ ನಿಜಕ್ಕೂ ಭಯಾನಕವೆನಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಲವು ಕಾರುಗಳು, ಇತರ ವಾಹನಗಳು ಚಲಿಸುತ್ತಿರುವ ರಸ್ತೆ ಅದು. ಅಲ್ಲಿ ಬಿಳಿ ಬಣ್ಣದ ಎಸ್​ಯುವಿ ಕಾರೊಂದು ಹೋಗುತ್ತಿರುತ್ತದೆ. ಸಡನ್​ ಆಗಿ ಅದರ ಹಿಂಬದಿಯ ಡಿಕ್ಕಿ ಬಾಗಿಲು ತೆರೆದುಕೊಂಡು ಮಗುವೊಂದು ದೊಪ್ಪನೆ ಕೆಳಗೆ ಬೀಳುತ್ತದೆ. ಇನ್ನೊಂದು ವಾಹನದ ಬಳಿಯೇ ಬೀಳುವ ಮಗು ತಕ್ಷಣ ಎದ್ದು ಕಾರು ಹೋದ ಕಡೆಗೇ ಓಡುತ್ತದೆ. ಅಷ್ಟರಲ್ಲಿ ಕಾರಿನಲ್ಲಿದ್ದವರಿಗೂ ಮಗು ಬಿದ್ದಿರುವುದು ಗೊತ್ತಾಗಿ, ಮಹಿಳೆಯೊಬ್ಬಳು ಮಗುವನ್ನು ಎತ್ತಿಕೊಳ್ಳಲು ಓಡಿಬರುವುದನ್ನು ದೃಶ್ಯದಲ್ಲಿ ಕಾಣಬಹುದು.

ಈ ವಿಡಿಯೋ ನೋಡಿದರೆ, ಮಗು ನಿಜಕ್ಕೂ ಪವಾಡ ಸದೃಶವಾಗಿ ಬಚಾವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಶಿರಿನ್ ಖಾನ್​ ಶೇರ್​ ಮಾಡಿಕೊಂಡ ವಿಡಿಯೋ 10 ಸಾವಿರಕ್ಕೂ ಹೆಚ್ಚು ವೀವ್ಸ್ ಕಂಡಿದೆ. ಜನರು ಮಗುವಿನ ಕುಟುಂಬದವರ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು ಇದ್ದಾರೆ ಎಂದಮೇಲೆ ಸರಿಯಾಗಿ ಲಾಕ್​ ಮಾಡಬೇಕು ಎನ್ನುವ ಕನಿಷ್ಠ ತಿಳಿವಳಿಕೆಯೂ ಕುಟುಂಬದವರಿಗೆ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ. ಹಾಗೇ, ಇದು ನಿಜಕ್ಕೂ ಭಯಾನಕ ದೃಶ್ಯ ಎಂದಿದ್ದಾರೆ. ಆದರೆ ಇದು ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ.

ಇದನ್ನೂ ಓದಿ: Health Tips: ಡಯಟ್ ಮಾಡೋಕೆ ಆಗ್ತಿಲ್ಲ ಎಂದು ಚಿಂತೆ ಬೇಡ; ಫಿಟ್​ ಆಗಿ, ಆರೋಗ್ಯಕರವಾಗಿರಲು ಇಷ್ಟೆಲ್ಲ ದಾರಿಗಳಿವೆ ನೋಡಿ..

Viral Video: ಬೈಕ್​ನಲ್ಲಿ ಸ್ಟಂಟ್ ಮಾಡಿದ ಹುಡುಗಿಯರಿಗೆ ಪೊಲೀಸರಿಂದ ಭರ್ಜರಿ ಗಿಫ್ಟ್! ಸರ್ಕಸ್ ಮಾಡಿದವರಿಗೆ ಸಂಕಷ್ಟ

Published On - 8:00 pm, Wed, 17 March 21