Karnataka Dam Water Level: ಜು.03ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ

|

Updated on: Jul 03, 2024 | 7:28 AM

ಕೊಡಗು ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಕಾವೇರಿ ನದಿ ಪಾತ್ರದ ಜಲಾಶಯಗಳ ಒಳಹರಿವು ಹೆಚ್ಚಿದೆ. ಮಂಗಳವಾರ ಕೆಆರ್​ಎಸ್​ ಜಲಾಶಯದ ಒಳಹರಿವು ಹೆಚ್ಚಾಗಿದೆ. ಕೆಆರ್​ಎಸ್​ ಸೇರಿದಂತೆ ಇಂದಿನ (ಜು.03) ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ.

Karnataka Dam Water Level: ಜು.03ರ ರಾಜ್ಯದ ಡ್ಯಾಂಗಳ ನೀರಿನ ಮಟ್ಟ ವಿವರ ಹೀಗಿದೆ
ಸುಫಾ ಡ್ಯಾಂ
Follow us on

ಮಂಗಳವಾರ ಕೆಆರ್​ಎಸ್​ ಜಲಾಶಯದ ಒಳಹರಿವು 12,400 ಕ್ಯೂಸೆಕ್ಸ್​ ಏರಿಕೆಯಾಗಿತ್ತು. ಕಬಿನಿ ಜಲಾಶಯಕ್ಕೆ 10,400 ಮತ್ತು ಹೇಮಾವತಿ ಜಲಾಶಯಕ್ಕೆ 8500 ಕ್ಯೂಸೆಕ್ಸ್​ ನೀರು ಹರಿದು ಬಂದಿದೆ. ಹಾಗಾದರೆ ಕರ್ನಾಟಕದ ಪ್ರಮುಖ ಜಲಾಶಯಗಳಾದ (Karnataka dam Water Level) ಆಲಮಟ್ಟಿ, ತುಂಗಭದ್ರಾ, ಕೆಆರ್​ಎಸ್​ ಮತ್ತು ಮಲಪ್ರಭಾ ಡ್ಯಾಂಗಳ ಒಳಹರಿವು, ಹೊರಹರಿವು ಮತ್ತು ನೀರಿನ ಮಟ್ಟದ ಕುರಿತು ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 39.08 19.40 24761 430
ತುಂಗಭದ್ರಾ ಜಲಾಶಯ (Tungabhadra Dam) 497.71 105.79 7.91 3.01 13410 377
ಮಲಪ್ರಭಾ ಜಲಾಶಯ (Malaprabha Dam) 633.80 37.73 6.27 6.97 0 194
ಕೆ.ಆರ್.ಎಸ್ (KRS Dam) 38.04 49.45 20.19 9.98 8787 526
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 21.04 11.34 20951 2759
ಕಬಿನಿ ಜಲಾಶಯ (Kabini Dam) 696.13 19.52 16.20 4.62 11269 1542
ಭದ್ರಾ ಜಲಾಶಯ (Bhadra Dam) 657.73 71.54 18.16 24.83 5243 347
ಘಟಪ್ರಭಾ ಜಲಾಶಯ (Ghataprabha Dam) 662.91 51.00 10.61 24.83 5243 347
ಹೇಮಾವತಿ ಜಲಾಶಯ (Hemavathi Dam) 890.58 37.10 14.64 14.08 10137 250
ವರಾಹಿ ಜಲಾಶಯ (Varahi Dam) 594.36 31.10 4.44 2.44 3643 0
ಹಾರಂಗಿ ಜಲಾಶಯ (Harangi Dam)​​ 871.38 8.50 4.28 2.77 3441 200
ಸೂಫಾ (Supa Dam) 564.00 145.33 31.25 30.42 8451 964
ನಾರಾಯಣಪುರ ಜಲಾಶಯ (Narayanpura Dam) 492.25 15.87 21.17 14.31 207 207
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 18.13 24.92 0 147

ಕೆಆರ್​ಎಸ್​ನಲ್ಲಿ ನೀರಿನ ಸಂಗ್ರಹ ಮಟ್ಟ 96.5 ಅಡಿಗೆ ತಲುಪಿದ್ದು 100 ಅಡಿಗೆ ಇನ್ನು 3.5 ಅಡಿಯಷ್ಟು ನೀರಿ ಬರಬೇಕಿದೆ. 124 ಅಡಿ ಗರಿಷ್ಠ ಸಂಗ್ರಹ ಮಟ್ಟವಾಗಿದೆ. 49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 20.19 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ