ಬೆಂಗಳೂರಿನಲ್ಲಿ BA.2 ತಳಿಯ ಎರಡು ಹೊಸ ವೈರಸ್​ ಪತ್ತೆ; ದೇಶದಲ್ಲಿ 4ನೇ ಅಲೆ ಶುರುವಾಗಿದೆ ಎಂದ ಡಾ. ಸಿ ಎನ್​ ಮಂಜುನಾಥ್​

| Updated By: Lakshmi Hegde

Updated on: Apr 23, 2022 | 2:10 PM

ಈಗಾಗಲೇ ಎಲ್ಲ ನಿರ್ಬಂಧಗಳನ್ನೂ ತೆಗೆದು, ಚಟುವಟಿಕೆಗಳು ಎಂದಿನಂತೆ ಪ್ರಾರಂಭವಾಗಿವೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ದೈನಂದಿನ ಕೊರೊನಾ ಕೇಸ್​ಗಳಲ್ಲಿ ಏರಿಕೆ ಕಂಡುಬರಲಿದೆ ಎಂದು ಡಾ. ಮಂಜುನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ BA.2 ತಳಿಯ ಎರಡು ಹೊಸ ವೈರಸ್​ ಪತ್ತೆ; ದೇಶದಲ್ಲಿ 4ನೇ ಅಲೆ ಶುರುವಾಗಿದೆ ಎಂದ ಡಾ. ಸಿ ಎನ್​ ಮಂಜುನಾಥ್​
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರಿನಲ್ಲಿ ಬಿಎ.2ಗೆ ಸಂಬಂಧಿಸಿದ ಎರಡು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. BA.2.10 ಹಾಗೂ BA.2. 12 ಗಳು ಕಾಣಿಸಿಕೊಂಡಿದ್ದಾಗಿ ಜಯದೇವ ಆಸ್ಪತ್ರೆ ನಿರ್ದೇಶಕ ಸಿ.ಎನ್​.ಮಂಜುನಾಥ್​ ತಿಳಿಸಿದ್ದಾರೆ.  ಬಿಎ.2 ರೂಪಾಂತರಗಳು ದೆಹಲಿ ಮತ್ತು ಮುಂಬೈನಲ್ಲಿ ಕಾಣಿಸಿಕೊಂಡಿದ್ದವು. ಅದೀಗ ಬೆಂಗಳೂರಲ್ಲಿ ಪತ್ತೆಯಾಗಿದೆ. ದೇಶದಲ್ಲಿ ಕೊರೊನಾದ ನಾಲ್ಕನೇ ಅಲೆ ಈಗಾಗಲೇ ಶುರುವಾಗಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಂಜುನಾಥ್​ ಹೇಳಿದ್ದಾರೆ. 

ರಾಜ್ಯದಲ್ಲಿ ಇನ್ನು 3-4ವಾರದಲ್ಲಿ ಕೊರೊನಾ 4ನೇ ಅಲೆ ಶುರುವಾಗುವ ಸಾಧ್ಯತೆ ಇದೆ. ಈ ಬಾರಿಯ ಅಲೆಗೆ ಬಿಎ 2 ರೂಪಾಂತರಿ ವೈರಸ್​ ಕಾರಣವಾಗಬಹುದು. ಕೊರೊನಾ 3ನೇ ಅಲೆಯಲ್ಲಿ ಸೋಂಕಿತರು ಯಾವೆಲ್ಲ ಲಕ್ಷಣ ಹೊಂದುತ್ತಿದ್ದರೂ, ಅದೇ ಲಕ್ಷಣಗಳು ನಾಲ್ಕನೇ ಅಲೆಯಲ್ಲಿಯೂ ಗೋಚರಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿರುತ್ತದೆ. ಆದರೆ ಸೋಂಕು ವ್ಯಾಪಕವಾಗಿರುತ್ತದೆ ಎಂದೂ ಡಾ. ಮಂಜುನಾಥ್​ ಹೇಳಿದ್ದಾರೆ.

ಈಗಾಗಲೇ ಎಲ್ಲ ನಿರ್ಬಂಧಗಳನ್ನೂ ತೆಗೆದು, ಚಟುವಟಿಕೆಗಳು ಎಂದಿನಂತೆ ಪ್ರಾರಂಭವಾಗಿವೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ದೈನಂದಿನ ಕೊರೊನಾ ಕೇಸ್​ಗಳಲ್ಲಿ ಏರಿಕೆ ಕಂಡುಬರಲಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ  ಶ್ವಾಸಕೋಶ, ಹೃದಯ ಸಮಸ್ಯೆ, ಕ್ಯಾನ್ಸರ್  ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಅತ್ಯಂತ ಜಾಗರೂಕರಾಗಿ ಇರಬೇಕು. ಮಾಸ್ಕ್​ ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದ್ದಾರೆ. ಜ್ವರ, ಕೆಮ್ಮು-ಶೀತವನ್ನು ನಿರ್ಲಕ್ಷಿಸಬೇಡಿ. ಕೂಡಲೇ ಕೊವಿಡ್​ 19 ಟೆಸ್ಟ್​ಗೆ ಒಳಗಾಗಿ. ಲಸಿಕೆ ತೆಗೆದುಕೊಂಡಿದ್ದೇವೆ. ಏನಾಗುವುದಿಲ್ಲ ಎಂಬ ನಿರ್ಲಕ್ಷವಂತೂ ಬೇಡವೇ ಬೇಡ ಎಂದಿದ್ದಾರೆ.

ಇದನ್ನೂ ಓದಿ: Who Is Tesla Founder: ಟೆಸ್ಲಾ ಸ್ಥಾಪಿಸಿದ್ದು ಮಸ್ಕ್ ಅಲ್ಲ ಎಂಬ ಬೆಂಗಳೂರು ವ್ಯಕ್ತಿಯ ಟ್ವೀಟ್​ಗೆ ಎಲಾನ್ ಉತ್ತರ ಏನು?

Published On - 2:03 pm, Sat, 23 April 22