ಜ್ಯೂಸ್ ಕುಡಿದು ಅಸ್ವಸ್ಥಗೊಂಡ ಮಕ್ಕಳು ಸಾವು: ತಾಯಿಯೇ ಕಂದಮ್ಮಗಳಿಗೆ ವಿಷ ಉಣಿಸಿದಳಾ?

| Updated By: ಸಾಧು ಶ್ರೀನಾಥ್​

Updated on: Jan 05, 2021 | 5:39 PM

ಜ್ಯೂಸ್ ಸೇವನೆ ಬಳಿಕ ಅಸ್ವಸ್ಥಗೊಂಡಿದ್ದ ಇಬ್ಬರು ಮಕ್ಕಳು ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ನಗರದಲ್ಲಿ ವರದಿಯಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಕೊನೆಯುಸಿರೆಳೆದಿದ್ದಾರೆ.

ಜ್ಯೂಸ್ ಕುಡಿದು ಅಸ್ವಸ್ಥಗೊಂಡ ಮಕ್ಕಳು ಸಾವು: ತಾಯಿಯೇ ಕಂದಮ್ಮಗಳಿಗೆ ವಿಷ ಉಣಿಸಿದಳಾ?
ಜ್ಯೂಸ್ ಕುಡಿದ ಬಳಿಕ ಅಸ್ವಸ್ಥಗೊಂಡ ಮಕ್ಕಳು ಸಾವು
Follow us on

ಶಿವಮೊಗ್ಗ: ಜ್ಯೂಸ್ ಸೇವನೆ ಬಳಿಕ ಅಸ್ವಸ್ಥಗೊಂಡಿದ್ದ ಇಬ್ಬರು ಮಕ್ಕಳು ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ನಗರದಲ್ಲಿ ವರದಿಯಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಕ್ಕಳು ಕೊನೆಯುಸಿರೆಳೆದಿದ್ದಾರೆ.

8 ವರ್ಷದ ಬಾಲಕ ಹಾಗೂ 5 ವರ್ಷದ ಬಾಲಕಿ ನಿನ್ನೆ ಭದ್ರಾವತಿಯಿಂದ ಶಿವಮೊಗ್ಗಕ್ಕೆ ತಮ್ಮ ತಾಯಿ ಗೀತಾ ಜೊತೆ ಆಗಮಿಸಿದ್ದರು. ಈ ವೇಳೆ, ನಗರದ ಗಾಂಧಿ ಪಾರ್ಕ್ ಬಳಿ ಮಕ್ಕಳು ಜ್ಯೂಸ್​ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ, ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು.

ಈ ಬಳಿಕ, ಇಬ್ಬರು ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಕ್ಕಳು ಇಂದು ಸಾವಿಗೀಡಾಗಿದ್ದಾರೆ. ಈ ನಡುವೆ, ಮಕ್ಕಳ ತಾಯಿ ಗೀತಾನೇ ಇಬ್ಬರಿಗೂ ವಿಷ ಕುಡಿಸಿರುವ ಶಂಕೆ ವ್ಯಕ್ತವಾಗಿದೆ.

ಹಾಗಾಗಿ, ಮಕ್ಕಳ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಕಾಮಾಕ್ಷಿಪಾಳ್ಯ: ಇಬ್ಬರು ಬ್ಯಾಚುಲರ್ಸ್ ವಾಸವಿದ್ದ ಮನೆಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು