ಪರಿಷತ್ ಸದಸ್ಯರ ನಡವಳಿಕೆಗೆ ಕಾರಣ ಅಧಿಕಾರಿಗಳ ಕರ್ತವ್ಯಲೋಪವಾ? ಸಚಿವ ಮಾಧುಸ್ವಾಮಿ ಹೇಳೋದೇನು?
ವಿಧಾನಪರಿಷತ್ ಸಭಾಪತಿ ಪೀಠದ ಬಳಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ, ಇದು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಮಾತ್ರ ಸೀಮಿತವಾಗಿದೆ. ಪರಿಷತ್ ಸದಸ್ಯರ ನಡವಳಿಕೆ ಬಗ್ಗೆ ತನಿಖೆಗೆ ಸಭಾಪತಿ ಆದೇಶ ನೀಡಿಲ್ಲ ಎಂದು ಕಲಬುರಗಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪೀಠದ ಬಳಿ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ, ಇದು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಮಾತ್ರ ಸೀಮಿತವಾಗಿದೆ. ಪರಿಷತ್ ಸದಸ್ಯರ ನಡವಳಿಕೆ ಬಗ್ಗೆ ತನಿಖೆಗೆ ಸಭಾಪತಿ ಆದೇಶ ನೀಡಿಲ್ಲ ಎಂದು ಕಲಬುರಗಿಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
‘ವಿಲೀನ ಹೆಸರಿನಲ್ಲಿ JDS ಇಬ್ಭಾಗ ಮಾಡಲು ಬಿಜೆಪಿ ತಂತ್ರ’ ಮಾಡಿದೆ ಎಂಬ ಹೆಚ್.ಡಿ ಕುಮಾರಸ್ವಾಮಿಯವರ ಆರೋಪಕ್ಕೆ ಸಂಬಂಧಿಸಿದಂತೆ, ಪರಿಷತ್‌ನಲ್ಲಿ ನಮಗೆ ಕುಮಾರಸ್ವಾಮಿಯೇ ಬೆಂಬಲಿಸಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡುತ್ತ, ಈ ರೀತಿಯ ಗದ್ದಲ ಗಲಾಟೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಸಭಾಪತಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿ 14 ದಿನ ಕಳೆದಿತ್ತು. ಹೀಗಾಗಿ ಅವರಾಗಿಯೇ ಕುರ್ಚಿ ಬಿಟ್ಟು ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು. ಬೆಲ್ ನಂತರವೂ ಸಭಾಪತಿ ಬಾರದಿರುವ ಕಾರಣ ಉಪಸಭಾಪತಿಯವರನ್ನು ಕೂರಿಸಲಾಯಿತು. ಇದಾದ ನಂತರ ಅನಿರೀಕ್ಷಿತ ರೀತಿನಲ್ಲಿ ಗಲಾಟೆ ಗದ್ದಲ ಪ್ರಾರಂಭಗೊಂಡಿತು. ಈ ಕುರಿತು ನಡೆಯುತ್ತಿರುವ ತನಿಖೆ ಕೇವಲ ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ನಡೆದ ಗಲಾಟೆ ನನ್ನ ಕೈ ಮೀರಿದ ಘಟನೆಗಳಾಗಿವೆ -ಸಭಾಪತಿ ನೋಟಿಸ್ಗೆ ಪರಿಷತ್ ಕಾರ್ಯದರ್ಶಿ ಉತ್ತರ
Published On - 6:05 pm, Tue, 5 January 21



