ಮಕ್ಕಳಲ್ಲಿಯೂ ಪತ್ತೆಯಾಗುತ್ತಿದೆ ಬ್ಲ್ಯಾಕ್ ಫಂಗಸ್; ಮೆದುಳಿಗೆ ಅಟ್ಯಾಕ್, ನಿಮ್ಹಾನ್ಸ್ನಲ್ಲಿ ಇಬ್ಬರು ಬಾಲಕರಿಗೆ ಚಿಕಿತ್ಸೆ
ಕೊರೊನಾ ಆಯ್ತು ಈಗ ಬ್ಲ್ಯಾಕ್ ಫಂಗಸ್ ಸೋಂಕು ಕೂಡ ಮಕ್ಕಳಿಗೆ ಹರಡಿದೆ. ನಗರದಲ್ಲಿ 14 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಚಿತ್ರದುರ್ಗದ 11 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ...
ಬೆಂಗಳೂರು: ರಾಜ್ಯದಲ್ಲಿ ಮಕ್ಕಳಿಗೂ ಕೊರೊನಾ ಸೋಂಕು ತಗುಲಿರುವುದರ ಬಗ್ಗೆ ವರದಿಯಾಗುತ್ತಿದೆ. ಇದರ ನಡುವೆ ಈಗ ಮತ್ತೊಂದು ಸಂಗತಿ ಪೋಷಕರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಇಬ್ಬರು ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದ್ದು ಮಕ್ಕಳು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಆಯ್ತು ಈಗ ಬ್ಲ್ಯಾಕ್ ಫಂಗಸ್ ಸೋಂಕು ಕೂಡ ಮಕ್ಕಳಿಗೆ ಹರಡಿದೆ. ನಗರದಲ್ಲಿ 14 ವರ್ಷದ ಬಾಲಕ ಮತ್ತು 11 ವರ್ಷದ ಬಾಲಕನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಚಿತ್ರದುರ್ಗದ 11 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೋರ್ವ ಬಳ್ಳಾರಿಯ ನಿವಾಸಿಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬ್ಲ್ಯಾಕ್ ಫಂಗಸ್ ಇಬ್ಬರಿಗೂ ಮೆದುಳಿಗೆ ಅಟ್ಯಾಕ್ ಮಾಡಿದೆ.
ಚಿತ್ರದುರ್ಗದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ಕಾರಣ ಬಾಲಕ ಕಣ್ಣು ಕಳೆದುಕೊಂಡಿದ್ದಾನೆ. ಇಲ್ಲಿವರೆಗೂ ವಯಸ್ಕರಲ್ಲಿ ಕಾಣಿಸಿಕೊಳ್ತಿದ್ದ ಬ್ಲ್ಯಾಕ್ ಫಂಗಸ್ ಈಗ ಮಕ್ಕಳಲ್ಲಿಯೂ ಪತ್ತೆಯಾಗುತ್ತಿದ್ದು ಆತಂಕದ ಸಂಗತಿಯಾಗಿದೆ. ಸದ್ಯ ಈ ಬಗ್ಗೆ ಸರ್ಕಾರದ ಬ್ಲ್ಯಾಕ್ ಫಂಗಸ್ ಟಾಸ್ಕ್‌ಫೋರ್ಸ್ ಸದಸ್ಯೆ, ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ಮಾಹಿತಿ ನೀಡಿದ್ದಾರೆ.
18 ತಿಂಗಳ ಮಗುವಿನಲ್ಲೂ ಬ್ಲ್ಯಾಕ್ ಫಂಗಸ್ ಇನ್ನು ಈ ಹಿಂದೆ ರಾಜಸ್ಥಾನದ ಬಿಕಾನೇರ್ನಲ್ಲಿ ಮೊಟ್ಟ ಮೊದಲ ಬಾರಿಗೆ 18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿತ್ತು. ಮಕ್ಕಳಿಗೂ ಬ್ಲ್ಯಾಕ್ ಫಂಗಸ್ ಪತ್ತೆಯಾದ ದೇಶದ ಮೊದಲ ಪ್ರಕರಣ ಇದಾಗಿದೆ.
ಇದನ್ನೂ ಓದಿ:ಮಕ್ಕಳಿಗೂ ಬಂತು ಕೊರೊನಾ, ರಾಯಚೂರಿನಲ್ಲಿ 522 ಮಕ್ಕಳು ಪಾಸಿಟಿವ್