ಮಕ್ಕಳಿಗೂ ಬಂತು ಕೊರೊನಾ, ರಾಯಚೂರಿನಲ್ಲಿ 522 ಮಕ್ಕಳು ಪಾಸಿಟಿವ್
ಅಪೌಷ್ಠಿಕತೆ ತಾಂಡವವಾಡ್ತಿರುವ ದೇವದುರ್ಗದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಸೇರಿ ಒಟ್ಟು 522 ಮಕ್ಕಳಿಗೆ ಸೊಂಕು ತಗುಲಿದೆ. 5 ವರ್ಷದೊಳಗಿನ 322 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ರಾಯಚೂರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಕೊರೊನಾ 3ನೇ ಅಲೆಗೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ರಾಯಚೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ಮತ್ತಷ್ಟು ಪ್ರಬಲವಾಗುತ್ತಿದೆ. ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಬರುತ್ತೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ರಾಜ್ಯದಲ್ಲಿ ಮಕ್ಕಳಿಗೂ ಕೊರೊನಾ ತಗುಲುತ್ತಿದೆ. ಈಗಾಗಲೇ ಅನೇಕ ಕಡೆ ಮಕ್ಕಳಿಗೂ ಕೊರೊನಾ ತಗುಲಿರುವ ಬಗ್ಗೆ ವರದಿಯಾಗುತ್ತಿದೆ. ರಾಯಚೂರು ಜಿಲ್ಲೆಯಾದ್ಯಂತ 322 ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ.
ಅಪೌಷ್ಠಿಕತೆ ತಾಂಡವವಾಡ್ತಿರುವ ದೇವದುರ್ಗದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಸೇರಿ ಒಟ್ಟು 522 ಮಕ್ಕಳಿಗೆ ಸೊಂಕು ತಗುಲಿದೆ. 5 ವರ್ಷದೊಳಗಿನ 322 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ರಾಯಚೂರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಕೊರೊನಾ 3ನೇ ಅಲೆಗೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ರಿಮ್ಸ್‌ನಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು 200 ಬೆಡ್‌ಗಳ ವಾರ್ಡ್ ತೆರೆಯುವುದಕ್ಕೆ ನಿರ್ಧರಿಸಲಾಗಿದೆ.
ಕೆಜಿಎಫ್ನಲ್ಲೂ ಮಕ್ಕಳಿಗೆ ಕೊರೊನಾ ಇನ್ನು ನಗರದ ಹೊರವಲಯದ ಘಟ್ಟರಾಗಡಹಳ್ಳಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು ಗ್ರಾಮದ 12 ಮಕ್ಕಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಮಕ್ಕಳನ್ನು ಕೊವಿಡ್ ಕೇರ್ ಸೆಂಟರ್ಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಕ್ಕಳಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ. ಮಕ್ಕಳು ಚಟುವಟಿಕೆಯಿಂದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಱಪಿಡ್ ಆ್ಯಂಟಿಜೆನ್ ಟೆಸ್ಟ್ನಲ್ಲಿ ಗ್ರಾಮದ ಬಹುತೇಕರಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಅದರ ಜೊತೆಗೆ 12 ಮಕ್ಕಳ ವರದಿ ಕೂಡ ಪಾಸಿಟಿವ್ ಬಂದಿದೆ.
ಇದನ್ನೂ ಓದಿ: ನನ್ನಿಂದಲೇ ಮಕ್ಕಳು, ಮೊಮ್ಮಕ್ಕಳಿಗೆ ಕೊರೊನಾ ಬಂತು; ಕ್ಷಮಿಸು ಮಾರಿಕಾಂಬ ದೇವಿ ಎಂದು ಡೆತ್ ನೋಟು ಬರೆದು ಆತ್ಮಹತ್ಯೆಗೆ ಶರಣು