ಮೈಸೂರು: ಕೊರೊನಾಗೆ ತಂದೆ-ತಾಯಿ ಬಲಿ, ಅನಾಥರಾದ ಇಬ್ಬರು ಮ್ಕಕಳು
ಮೈಸೂರಿನಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. 10 ದಿನದ ಅಂತರದಲ್ಲಿ ಅಪ್ಪ ಹಾಗೂ ಅಮ್ಮ ಇಬ್ಬರೂ ಕೊರೊನಾಗೆ ಬಲಿಯಾಗಿದ್ದಾರೆ. ಮೈಸೂರು ವಿವಿ ಗುತ್ತಿಗೆ ನೌಕರ ಪ್ರಸನ್ನ ಹಾಗೂ ಪತ್ನಿ ಸುಷ್ಮಾ ಕೊರೊನಾದಿಂದ ಮೃತಪಟ್ಟಿದ್ದು ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.
ಮೈಸೂರು: ಕೊರೊನಾ ಸೋಂಕಿಗೆ ಜನ ನರಳಿ ನರಳಿ ಪ್ರಾಣ ಬಿಡ್ತಿದ್ದಾರೆ. ಕೊರೊನಾ ವೈರಸ್ ಕೇವಲ ಜೀವವನ್ನ ಮಾತ್ರ ತೆಗೆಯುತ್ತಿಲ್ಲ, ಅದೆಷ್ಟೋ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಕೈ ಹಿಡಿದು ನಡೆಸೋರನ್ನ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ಹೆಮ್ಮಾರಿ ಕೊರೊನಾ ಚಿಕ್ಕ ಚಿಕ್ಕ ಮಕ್ಕಳಿಂದ ತಂದೆ, ತಾಯಿಯನ್ನ ಕಿತ್ತುಕೊಂಡಿದೆ. ಮೈಸೂರಿನಲ್ಲಿ ಕೊರೊನಾದಿಂದಾಗಿ ಮುದ್ದಾದ ಮಕ್ಕಳು ತಬ್ಬಲಿಯಾಗಿದ್ದಾರೆ.
ಮೈಸೂರಿನಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. 10 ದಿನದ ಅಂತರದಲ್ಲಿ ಅಪ್ಪ ಹಾಗೂ ಅಮ್ಮ ಇಬ್ಬರೂ ಕೊರೊನಾಗೆ ಬಲಿಯಾಗಿದ್ದಾರೆ. ಮೈಸೂರು ವಿವಿ ಗುತ್ತಿಗೆ ನೌಕರ ಪ್ರಸನ್ನ ಹಾಗೂ ಪತ್ನಿ ಸುಷ್ಮಾ ಕೊರೊನಾದಿಂದ ಮೃತಪಟ್ಟಿದ್ದು ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.
ಕೊರೊನಾ ದೃಢಪಡುತ್ತಿದ್ದಂತೆ ಮೈಸೂರಿನ ಗಂಗ್ರೋತ್ರಿ ಬಡಾವಣೆ ಮನೆಯಲ್ಲಿ ಪ್ರಸನ್ನ ಕ್ವಾರಂಟೈನ್ ಆಗಿದ್ದರು. ಗಂಡನನ್ನ ನೋಡಿಕೊಳ್ಳುವಾಗ ಪತ್ನಿಗೂ ಸೋಂಕು ತಗುಲಿದೆ. ಬಳಿಕ ಮೇ 18ರಂದು ಕೊರೊನಾಗೆ ಮೊದಲು ಸುಷ್ಮಾ ಬಲಿಯಾಗಿದ್ದಾರೆ. ಬಳಿಕ ಉಸಿರಾಟದ ತೊಂದರೆಯಿಂದ ಪ್ರಸನ್ನ ಆಸ್ಪತ್ರೆಗೆ ದಾಖಲಾದ್ರು. ಮೇ 28ರಂದು ಚಿಕಿತ್ಸೆ ಫಲಿಸದೆ ಪ್ರಸನ್ನ ಕೂಡ ನಿಧನರಾಗಿದ್ದಾರೆ. ದಂಪತಿ ಸಾವಿನಿಂದ ಇಬ್ಬರು ಮಕ್ಕಳು ಈಗ ತಬ್ಬಲಿಯಾಗಿದ್ದಾರೆ.
18 ವರ್ಷ ವಯಸ್ಸಿನ ಹರ್ಷ ಹಾಗೂ 16 ವರ್ಷದ ನಯನ ಈಗ ಪೋಷಕರನ್ನು ಕಳೆದುಕೊಂಡಿದ್ದಾರೆ. ತಾಯಿ ತವರು ಮನೆಯಲ್ಲಿದ್ದ ಕಾರಣ ಇಬ್ಬರೂ ಮಕ್ಕಳು ಕೊರೊನಾದಿಂದ ಪಾರಾಗಿದ್ದಾರೆ. ಸದ್ಯ ಹುಣಸೂರಿನ ತಾಯಿ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ಮಂಡ್ಯ: 15 ದಿನದ ಅಂತರದಲ್ಲಿ ತಂದೆ, ತಾಯಿ ಕೊರೊನಾಗೆ ಬಲಿ; ತಬ್ಬಲಿಯಾದ 5 ದಿನದ ಮಗು