ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಹಫ್ತಾ ವಸೂಲಿ; ತಪ್ಪೊಪ್ಪಿಕೊಂಡ ಸಿಕ್ಕಿಬಿದ್ದ ವ್ಯಕ್ತಿ
ವ್ಯಕ್ತಿ ಬೆಂಗಳೂರಿನ ಟೌನ್ಹಾಲ್ ಬಳಿ ಹಫ್ತಾ ವಸೂಲಿ ಮಾಡುತ್ತಿದ್ದ. ಸುಮಾರು 100 ವ್ಯಾಪಾರಿಗಳಿಂದ ತಲಾ 50 ರೂ. ವಸೂಲಿ ಮಾಡುತ್ತಿದ್ದ. ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡುವ ವೇಳೆ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಆತ ಹಫ್ತಾ ವಸೂಲಿ ಮಾಡುತ್ತಿದ್ದ ದೃಶ್ಯ ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಂಗಳೂರು: ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್ಡೌನ್ ವಿಧಿಸಿದೆ. ಇಡೀ ರಾಜ್ಯ ಸಂಪೂರ್ಣ ಬಂದ್ ಆಗಿರುವ ಕಾರಣ ವ್ಯಾಪಾರಸ್ಥರಿಗೆ ವ್ಯಾಪಾರವಾಗದೆ ಬದುಕು ನಡೆಸುವುದು ತೀರಾ ಕಷ್ಟವಾಗಿದೆ. ಚಿಕ್ಕ ಚಿಕ್ಕ ವ್ಯಾಪಾರಿಗಳಿಗಂತೂ ಲಾಕ್ಡೌನ್ನಿಂದಾದ ತೊಂದರೆ ಅಷ್ಟಿಷ್ಟಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯ ವರೆಗೆ ಅವಕಾಶ ಇರುವುದರಿಂದ ಬಂದಷ್ಟು ಹಣ ಬರಲಿ ಅಂತ ಬೀದಿ ಬದಿ ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಈ ನಡುವೆ ಮಾನವೀಯತೆ ಇಲ್ಲದೆ ವ್ಯಕ್ತಿಯೊಬ್ಬ ಬೀದಿ ಬದಿ ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾನೆ. ಈ ದೃಶ್ಯ ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ.
ವ್ಯಕ್ತಿ ಬೆಂಗಳೂರಿನ ಟೌನ್ಹಾಲ್ ಬಳಿ ಹಫ್ತಾ ವಸೂಲಿ ಮಾಡುತ್ತಿದ್ದ. ಸುಮಾರು 100 ವ್ಯಾಪಾರಿಗಳಿಂದ ತಲಾ 50 ರೂ. ವಸೂಲಿ ಮಾಡುತ್ತಿದ್ದ. ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡುವ ವೇಳೆ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. ಆತ ಹಫ್ತಾ ವಸೂಲಿ ಮಾಡುತ್ತಿದ್ದ ದೃಶ್ಯ ಟಿವಿ9 ಕ್ಯಾಮರಾದಲ್ಲಿ ಸೆರೆಯಾಗಿದೆ. ವ್ಯಕ್ತಿ, ಸತೀಶ್ ಮತ್ತು ಮಂಜು ಎಂಬುವವರ ಸೂಚನೆ ಮೇರೆಗೆ ವಸೂಲಿ ಮಾಡುತ್ತಿದ್ದ. ಕೊನೆಗೆ ಹಫ್ತಾ ವಸೂಲಿ ಮಾಡುತ್ತಿರುವುದು ನಿಜ ಎಂದು ವ್ಯಕ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ವ್ಯಾಪಾರಿಗಳು ಒಂದೊತ್ತಿನ ಊಟಕ್ಕೆ ಬೆಳಂಬೆಳಗ್ಗೆ ಹಣ್ಣು, ತರಕಾರಿ ಮಾರಲು ಬರುತ್ತಿದ್ದಾರೆ. ನಾಲ್ಕು ಗಂಟೆಯೊಳಗೆ ತಂದಿರುವ ಹಣ್ಣು, ತರಕಾರಿ ಮಾರಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇನ್ನೂರು, ಮುನ್ನೂರು ರೂಪಾಯಿ ಲಾಭ ಬರುವುದೂ ಕಷ್ಟ. ಇಂತಹದರಲ್ಲಿ ಒಂದು ತಳ್ಳುವ ಗಾಡಿ ವ್ಯಾಪಾರಿಯಿಂದ 50 ರೂಪಾಯಿ ಹಫ್ತಾ ವಸೂಲಿ ಮಾಡುತ್ತಿದ್ದಾರೆ. ಟೌನ್ಹಾಲ್ ಎದುರು 100 ಕ್ಕೂ ಅಧಿಕ ತಳ್ಳುವ ಗಾಡಿ ವ್ಯಾಪಾರಸ್ಥರಿದ್ದು, ನಿತ್ಯ 50 ರೂ. ಯಂತೆ ಹಫ್ತಾ ವಸೂಲಿ ಮಾಡುತ್ತಾರೆ. ಹಫ್ತಾ ನೀಡದಿದ್ದರೆ ಅಂಗಡಿ ಹಾಕುವುದಕ್ಕೆ ಬಿಡುವುದಿಲ್ಲ ಎಂದು ಹೆದರಿಸುತ್ತಾರೆ ಎಂದು ಬೀದಿ ಬದಿಯ ವ್ಯಾಪಾರಿಗಳು ಗಂಭೀರ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ
ಕೊರೊನಾ ಗೆದ್ದ ಬಳ್ಳಾರಿಯ ಶತಾಯುಷಿ ದಂಪತಿ; ಹದಿನೈದು ದಿನಗಳಲ್ಲಿ ಕೊವಿಡ್ನಿಂದ ಗುಣಮುಖ
(man was making hafta from the street vendors at Bengaluru)