Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್ ಧರಿಸದೆ ಓಡಾಡಬೇಡ ಅಂದಿದ್ದೇ ತಪ್ಪಾಯ್ತಾ? ಕೊರೊನಾ ವಾರಿಯರ್ ಕೊಲೆಗೈದ ಐವರು ಅರೆಸ್ಟ್

ಕೊರೊನಾದಿಂದ ಮಲೆನಾಡಿನಲ್ಲಿ ನೂರಾರು ಜನರು ಈಗಾಗಲೇ ಎರಡನೇ ಅಲೆಯಲ್ಲಿ ಬಲಿಯಾಗಿದ್ದಾರೆ. ನಿತ್ಯ ಸಾವಿನ ಸಂಖ್ಯೆ ಏರುತ್ತಲೇ ಇದೆ. ಈ ನಡುವೆ ಭದ್ರಾವತಿಯ ನಗರಸಭೆಯ ಪೌರಕಾರ್ಮಿಕನು ಕೊವಿಡ್ ನಿಯಮಗಳನ್ನು ಯುವಕರಿಗೆ ಪಾಲಿಸಿ ಅಂತಾ ಹೇಳೀದ್ದೇ ಆತನ ಜೀವನಕ್ಕೆ ಮುಳುವಾಗಿದೆ. ಪೌರಕಾರ್ಮಿಕ ಮರ್ಡರ್ ಮಿಸ್ಟ್ರಿ ಕುರಿತು ಒಂದು ವರದಿ ಇಲ್ಲಿದೆ.

ಮಾಸ್ಕ್ ಧರಿಸದೆ ಓಡಾಡಬೇಡ ಅಂದಿದ್ದೇ ತಪ್ಪಾಯ್ತಾ? ಕೊರೊನಾ ವಾರಿಯರ್ ಕೊಲೆಗೈದ ಐವರು ಅರೆಸ್ಟ್
ಮೃತ ಸುನಿಲ್
Follow us
ಆಯೇಷಾ ಬಾನು
|

Updated on: May 30, 2021 | 7:51 AM

ಶಿವಮೊಗ್ಗ: ಕೊರೊನಾ ಮಹಾಮಾರಿ ಅಟ್ಟಹಾಸದ ನಡುವೆ ಫ್ರಂಟ್ಲೈನ್ ವಾರಿಯರ್ಸ್ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡ್ತಿದ್ದಾರೆ. ತಮ್ಮ ಮನೆಯಲ್ಲಿ ವಯಸ್ಸಾದ ತಂದೆ ತಾಯಿ, ಪುಟ್ಟ ಮಕ್ಕಳಿದ್ದರೂ ಸಮಾಜದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸ್ತಿದ್ದಾರೆ. ಆದ್ರೆ ತಮಗೆ ಬುದ್ಧಿವಾದ ಹೇಳಿದ ಒಂದೇ ನೆಪಕ್ಕೆ ಭದ್ರಾವತಿ ತಾಲೂಕಿನ ಜೈ ಭೀಮಾ ನಗರದಲ್ಲಿ ಕೊರೊನಾ ವಾರಿಯರ್ ಒಬ್ಬನನ್ನ ಐವರ ತಂಡ ಕೊಲೆ ಮಾಡಿದೆ.

ಕ್ಷುಲ್ಲಕ ಕಾರಣಕ್ಕೆ ಕೊರೊನಾ ವಾರಿಯರ್ ಮರ್ಡರ್ 25 ವರ್ಷದ ಸುನಿಲ್ ಪೌರ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಮೊನ್ನೆ ಮೇ 25ರಂದು ಸಂಜೆ ಜೈ ಭೀಮಾ ನಗರದಲ್ಲಿ ಯುವಕನೊಬ್ಬ ವಿನಾಕಾರಣ ಮಾಸ್ಕ್ ಧರಿಸದೆ ಸುತ್ತಾಡ್ತಿದ್ದ. ಇಲ್ಲೆಲ್ಲಾ ಬಂದು ಯಾಕೆ ಓಡಾಡ್ತಿದ್ದಿರಾ ಅಂತಾ ಕೇಳಿದ್ದಕ್ಕೆ ಬೈಕ್ನಲ್ಲಿ ಬಂದಿರೋ ಯುವಕನಿಗೂ ಪೌರ ಕಾರ್ಮಿಕ ಸುನಿಲ್ ನಡುವೆ ಜಗಳ ಆಗಿದೆ. ಈ ಜಗಳ ಇಷ್ಟಕ್ಕೆ ಮುಗಿಯದೆ ಪುನಃ ಮತ್ತೆ ನಾಲ್ವರ ಜೊತೆ ಬೈಕ್ ಸವಾರನು ಜೈಭೀಮಾ ನಗರಕ್ಕೆ ಬಂದಿದ್ದಾನೆ. ಈ ವೇಳೆ ಸುನಿಲ್ ಮೇಲೆ ಮುಗಿಬಿದ್ದ ನಾಲ್ವರು ಯುವಕರ ತಂಡ ಚಾಕುವಿನಿಂದ ಚುಚ್ಚಿದೆ. ಜಗಳ ಬಿಡಿಸಲು ಬಂದಿದ್ದ ಶ್ರೀಕಂಠ ಹಾಗೂ ರಹೀಂ ಮೇಲೂ ಹಲ್ಲೆ ನಡೆಸಿದ್ದು, ಶ್ರೀಕಂಠನಿಗೂ ಚಾಕುವಿನಿಂದ ಇರಿಯಲಾಗಿದೆ. ತೀವ್ರ ಗಾಯಗೊಂಡಿದ್ದ ಸುನಿಲ್ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಕೊರೊನಾ ವಾರಿಯರ್ ಕೊಲೆಗೈದ ಐವರು ಅಂದರ್ ಇನ್ನು ತಕ್ಷಣ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಭದ್ರಾವತಿಯ ಓಲ್ಡ್ ಟೌನ್ ಠಾಣೆ ಪೊಲೀಸರು ಐವರು ಹಂತಕರ ಬೇಟೆಯಾಡಿದ್ದಾರೆ. ಸಾಬೀತ್, ಹಿದಾಯತ್, ಮಹಮದ್ ಜುನೇದ್, ನಿಶಾದ್ ಪಾಷಾ, ತಬ್ರೇಜ್ ಪಾಷಾ ಅನ್ನೋರನ್ನ ಬಂಧಿಸಲಾಗಿದೆ. ಬಂಧಿತರೆಲ್ಲರೂ 20, 21 ವರ್ಷ ಆಸುಪಾಸಿನವರಾಗಿದ್ದು, ಕೊಲೆಗೆ ಬಳಿಸಿದ ಮಾರಕಾಸ್ತ್ರಗಳನ್ನು ಮತ್ತು ಎರಡು ಬೈಕ್ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಇನ್ನು ಕುಟುಂಬಕ್ಕೆ ಆಧಾರವಾಗಿದ್ದ ಸುನಿಲ್ನನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಕೊರೊನಾ ವಿಚಾರವಾಗಿ ಯುವಕರಿಗೆ ಬುದ್ಧಿವಾದ ಹೇಳಿದ ಮಗ ಅನ್ಯಾಯವಾಗಿ ಕೊಲೆಯಾಗಿ ಹೋದ ಅಂತಾ ಮೃತ ಸುನಿಲ್ ತಾಯಿ, ಕಣ್ಣೀರು ಹಾಕ್ತಿದ್ದಾರೆ.

ಲಾಕ್ಡೌನ್ ಸಮಯದಲ್ಲಿ ಗುತ್ತಿಗೆ ಪೌರ ಕಾರ್ಮಿಕನ ಮರ್ಡರ್ ಕೇಸ್ ಭದ್ರಾವತಿ ನಗರದಲ್ಲಿ ಸಂಚಲನ ಮೂಡಿಸಿತ್ತು. ಪೊಲೀಸರು ಪ್ರಕರಣದ ಜಾಡು ಹಿಡಿದು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನರಿಗೆ ಲಾಕ್ ಡೌನ್ ಹೊಟ್ಟೆ ತುಂಬಿಸಿಕೊಳ್ಳಲು ಒದ್ದಾಡುತ್ತಿದ್ರೆ, ಈ ಪುಂಡರು ಮಾತ್ರ ಗಾಂಜಾ ಹೊಡೆದು ಕೊರೊನಾ ವಾರಿಯರ್ಸ್ ಜೀವಕ್ಕೇ ಕುತ್ತು ತರ್ತಿದ್ದಾರೆ.

sunil murder

ಕೊಲೆ ಮಾಡಿದ ಆರೋಪಿಗಳು