ಕೆಟ್ಟು ನಿಂತಿದ್ದ ಬೊಲೆರೋ ವಾಹನಕ್ಕೆ ಲಾರಿ ಡಿಕ್ಕಿ, 2 ಕೂಲಿ ಕಾರ್ಮಿಕರ ದುರ್ಮರಣ

|

Updated on: Dec 05, 2019 | 2:34 PM

ವಿಜಯಪುರ: ಕೆಟ್ಟು ನಿಂತಿದ್ದ ಬೊಲೆರೋ ಪಿಕ್ ಅಪ್ ವಾಹನಕ್ಕೆ ಲಾರಿ ಡಿಕ್ಕಿಯೊಡೆದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮನಗೂಳಿ ಗ್ರಾಮದ ಬಳಿ ನಡೆದಿದೆ. ಧೀರಜ ಗಾಡೆ (35), ನಸೀರ ಜುಮ್ಮಾ (50) ಮೃತರು. ಮುಂಡರಗಿಯಿಂದ ಮಹಾರಾಷ್ಟ್ರದ ಪಂಡರಪುರಕ್ಕೆ ಕೂಲಿ ಕಾರ್ಮಿಕರು ತೆರಳುತ್ತಿದ್ದರು. ಬೊಲೆರೋ ಪಿಕ್ ಅಪ್ ವಾಹನದಲ್ಲಿ ಒಟ್ಟು 9 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಪಿಕ್ ಅಪ್ ವಾಹನ ಕೆಟ್ಟ ಕಾರಣ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ಲಾರಿ ಡಿಕ್ಕಿಯೊಡೆದು ದುರಂತ ಸಂಭವಿಸಿದೆ. ಘಟನೆ […]

ಕೆಟ್ಟು ನಿಂತಿದ್ದ ಬೊಲೆರೋ ವಾಹನಕ್ಕೆ ಲಾರಿ ಡಿಕ್ಕಿ, 2 ಕೂಲಿ ಕಾರ್ಮಿಕರ ದುರ್ಮರಣ
Follow us on

ವಿಜಯಪುರ: ಕೆಟ್ಟು ನಿಂತಿದ್ದ ಬೊಲೆರೋ ಪಿಕ್ ಅಪ್ ವಾಹನಕ್ಕೆ ಲಾರಿ ಡಿಕ್ಕಿಯೊಡೆದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮನಗೂಳಿ ಗ್ರಾಮದ ಬಳಿ ನಡೆದಿದೆ.

ಧೀರಜ ಗಾಡೆ (35), ನಸೀರ ಜುಮ್ಮಾ (50) ಮೃತರು. ಮುಂಡರಗಿಯಿಂದ ಮಹಾರಾಷ್ಟ್ರದ ಪಂಡರಪುರಕ್ಕೆ ಕೂಲಿ ಕಾರ್ಮಿಕರು ತೆರಳುತ್ತಿದ್ದರು. ಬೊಲೆರೋ ಪಿಕ್ ಅಪ್ ವಾಹನದಲ್ಲಿ ಒಟ್ಟು 9 ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಪಿಕ್ ಅಪ್ ವಾಹನ ಕೆಟ್ಟ ಕಾರಣ ರಸ್ತೆ ಬದಿ ನಿಲ್ಲಿಸಲಾಗಿತ್ತು. ಈ ವೇಳೆ ಲಾರಿ ಡಿಕ್ಕಿಯೊಡೆದು ದುರಂತ ಸಂಭವಿಸಿದೆ.

ಘಟನೆ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Published On - 9:05 am, Sun, 1 December 19