ಮುಳ್ಳಿನ ರಾಶಿ ಮೇಲೆ ಜಿಗಿದು ಭಕ್ತಿಯ ಪರಾಕಾಷ್ಠೆ ಮೆರೆದ ಜನ
ಕೊಪ್ಪಳ: ನಮ್ಮ ಕಾಲಿಗೆ ಅಪ್ಪಿ ತಪ್ಪಿ ಒಂದು ಮುಳ್ಳು ಚುಚ್ಚಿದ್ರೆ ಸಾಕು ಜೀವ ಹೋದಂಗೆ ಅನ್ಸುತ್ತೆ. ಮುಳ್ಳು ಹೊರಗೆ ತೆಗೆಯೋವರ್ಗೂ ಕಾಲು ಮುಂದಕ್ಕೆ ಇಡೋಕ್ ಆಗಲ್ಲ. ಅಂಥಾದ್ರಲ್ಲಿ ಇಲ್ಲಿ ಮುಳ್ಳಿನ ರಾಶಿ ಮೇಲೆಯೇ ದೊಬ್ಬನೆ ಬೀಳ್ತಾರೆ. ಮೈತುಂಬಾ ಮುಳ್ಳು ಚುಚ್ಚುತ್ತಿದ್ರೂ ಏನೂ ಆಗಿಲ್ಲದಂತೆ ಮಲಗಿರ್ತಾರೆ. ಮೈಮೇಲೆ ಚೂರು ಅರಿವಿಲ್ಲ. ಮುಳ್ಳಿನ ರಾಶಿ ಮೇಲೆ ಧುಮುಕಿದ್ರೂ ನೋವು ಗೊತ್ತಾಗ್ತಿಲ್ಲ. ಈಜಲು ಹಾರಿದವ್ರಂತೆ ಬಿಲ್ಡಿಂಗ್ ಮೇಲಿಂದ ದೊಬ್ಬನೆ ಬೀಳ್ತಾರೆ. ಬರೀ ಮೈಯಲ್ಲೇ ಮುಳ್ಳಿನ ಮೇಲೆ ಹಾಯಾಗಿ ಮಲಗ್ತಾರೆ. ಕಾರ್ತಿಕ ಮಾಸದ […]
ಕೊಪ್ಪಳ: ನಮ್ಮ ಕಾಲಿಗೆ ಅಪ್ಪಿ ತಪ್ಪಿ ಒಂದು ಮುಳ್ಳು ಚುಚ್ಚಿದ್ರೆ ಸಾಕು ಜೀವ ಹೋದಂಗೆ ಅನ್ಸುತ್ತೆ. ಮುಳ್ಳು ಹೊರಗೆ ತೆಗೆಯೋವರ್ಗೂ ಕಾಲು ಮುಂದಕ್ಕೆ ಇಡೋಕ್ ಆಗಲ್ಲ. ಅಂಥಾದ್ರಲ್ಲಿ ಇಲ್ಲಿ ಮುಳ್ಳಿನ ರಾಶಿ ಮೇಲೆಯೇ ದೊಬ್ಬನೆ ಬೀಳ್ತಾರೆ. ಮೈತುಂಬಾ ಮುಳ್ಳು ಚುಚ್ಚುತ್ತಿದ್ರೂ ಏನೂ ಆಗಿಲ್ಲದಂತೆ ಮಲಗಿರ್ತಾರೆ.
ಮೈಮೇಲೆ ಚೂರು ಅರಿವಿಲ್ಲ. ಮುಳ್ಳಿನ ರಾಶಿ ಮೇಲೆ ಧುಮುಕಿದ್ರೂ ನೋವು ಗೊತ್ತಾಗ್ತಿಲ್ಲ. ಈಜಲು ಹಾರಿದವ್ರಂತೆ ಬಿಲ್ಡಿಂಗ್ ಮೇಲಿಂದ ದೊಬ್ಬನೆ ಬೀಳ್ತಾರೆ. ಬರೀ ಮೈಯಲ್ಲೇ ಮುಳ್ಳಿನ ಮೇಲೆ ಹಾಯಾಗಿ ಮಲಗ್ತಾರೆ.
ಕಾರ್ತಿಕ ಮಾಸದ ವೇಳೆ ಮುಳ್ಳು ಹಾರುವ ಆಚರಣೆ: ಲೇಬಗೇರಿ ಗ್ರಾಮದಲ್ಲಿ ನಡೆದ ಆಂಜನೇಯನ ಕಾರ್ತಿಕೋತ್ಸವದ ಮುಳ್ಳಿನ ಜಾತ್ರೆ. ಪ್ರತಿವರ್ಷ ಕಾರ್ತಿಕಮಾಸದ ವೇಳೆ ಮುಳ್ಳು ಹಾರುವ ಆಚರಣೆ ನಡೆಯುತ್ತೆ. ಅನಾದಿಕಾಲದಿಂದಲೂ ಈ ಸಂಪ್ರದಾಯವನ್ನು ಆಚರಣೆ ಮಾಡ್ತಿದ್ದು, ಇಂದಿಗೂ ಈ ಸಂಪ್ರದಾಯ ಮುಂದುವರಿದಿದೆ. ಮುಳ್ಳಿನ ಮೇಲೆ ಜಿಗಿಯೋದ್ರಿಂದ ಗ್ರಾಮದಲ್ಲಿ ಯಾರಿಗೂ ಏನೂ ಆಗಲ್ಲ ಅನ್ನೋದು ಇವ್ರ ನಂಬಿಕೆ.
ಮುಳ್ಳಿನ ಮೇಲೆ ಜಿಗಿದ್ರೂ ಏನು ಆಗಲ್ಲ: ಆಂಜನೇಯನ ಕಾರ್ತಿಕೋತ್ಸವದ ದಿನ ಬೆಳಗ್ಗೆ ಗ್ರಾಮದವರು ಕಾಡಿಗೆ ತೆರಳಿ ಮುಳ್ಳಿನ ಗಿಡಗಳನ್ನ ತರ್ತಾರೆ. ನಂತರ ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಕಿ ಅದರ ಮೇಲೆ ಗ್ರಾಮದ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವ್ರೂ ಕೂಡ ಹಾರುತ್ತಾರೆ. ಹೀಗೆ ಹಾರಿದವರ ಮೈ ಮೇಲೆ ಗಾಯಗಳಾಗಿದ್ರೂ ಸಹ ಅವರಿಗೆ ಏನೂ ಆಗುವುದಿಲ್ಲವಂತೆ. ರಾತ್ರಿ ಮನೆಗೆ ಹೋಗಿ ಕರಿ ಕಂಬಳಿಯ ಮೇಲೆ ಮಲಗಿಕೊಂಡರೆ ಮುಳ್ಳುಗಳೆಲ್ಲ ಹೊರಗೆ ಬರುತ್ತವಂತೆ. ಹೆಣ್ಣು ಮಕ್ಕಳು ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು ಖುಷಿಯಿಂದ ಭಾಗಿಯಾಗ್ತಾರೆ.
ಹಳ್ಳಿಗಳಲ್ಲಿ ಇಂದಿಗೂ ಸಹ ಅನೇಕ ಆಚರಣೆಗಳು ನಡೆಯುತ್ತವೆ. ಅದ್ರಲ್ಲಿ ಈ ಆಚರಣೆ ಸ್ವಲ್ಪ ಭಿನ್ನ ಅನ್ಸಿದ್ರೂ ಇವ್ರಿಗೆ ನಂಬಿಕೆಯ ಪ್ರಶ್ನೆ. ಹೀಗಾಗಿ ಖುಷಿಯಿಂದಲೇ ಇಂದಿಗೂ ಸಹ ಆಚರಣೆ ಮಾಡ್ತಾ ಮನೆ ಮಕ್ಕಳೆಲ್ಲಾ ಭಾಗಿಯಾಗ್ತಾರೆ.