AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ನೀರಿಗಾಗಿ ಹಾಹಾಕಾರ

ಬಾಗಲಕೋಟೆ: ಅನ್ನದಾತರಿಗೆ ಮಾದರಿಯಾಗಬೇಕಿದ್ದ ತೋಟಗಾರಿಗೆ ಇಲಾಖೆಯಲ್ಲಿ ನೀರಿಗೆ ಕೊರತೆ ಎದುರಾಗಿದೆ. ಪ್ರತಿ ವರ್ಷವೂ ಇದೇ ಸಮಸ್ಯೆ ಇದೇ ಕಥೆಯಾಗಿದೆ. ರಣಬಿಸಿಲು ನೆತ್ತಿ ಸುಡ್ತಿದೆ. ಭೂಮಿ ಶಾಖಕ್ಕೆ ನೀರು ಪಾತಾಳ ಸೇರಿದೆ. ಗಿಡ, ಬಳ್ಳಿಗಳು ಜೀವ ಜಲಕ್ಕಾಗಿ ಬಾಯಿ ಬಿಡ್ತಿವೆ. ಎಲ್ಲೆಲ್ಲೂ ಒಣಗಿರೋ ಭೂಮಿ. ನೀರಿಲ್ಲದೆ ಬೋರ್​ವೆಲ್​ಗಳು ಖಾಲಿ ಖಾಲಿಯಾಗಿವೆ. ತೋಟಗಾರಿಕೆ ವಿವಿಯಲ್ಲೇ ಜೀವಜಲಕ್ಕೆ ಪರದಾಟ..! ಎಲ್ಲಿ ನೋಡಿದ್ರೂ ಬರಡು ಭೂಮಿಯಂತಾಗಿದೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣ. ರಾಜ್ಯದ ಪ್ರತಿಷ್ಟಿತ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಗೆ ಪಡೆದಿರೋ ಈ […]

ಬಾಗಲಕೋಟೆ ತೋಟಗಾರಿಕೆ  ವಿವಿಯಲ್ಲಿ ನೀರಿಗಾಗಿ  ಹಾಹಾಕಾರ
ಸಾಧು ಶ್ರೀನಾಥ್​
|

Updated on:Dec 01, 2019 | 11:53 AM

Share

ಬಾಗಲಕೋಟೆ: ಅನ್ನದಾತರಿಗೆ ಮಾದರಿಯಾಗಬೇಕಿದ್ದ ತೋಟಗಾರಿಗೆ ಇಲಾಖೆಯಲ್ಲಿ ನೀರಿಗೆ ಕೊರತೆ ಎದುರಾಗಿದೆ. ಪ್ರತಿ ವರ್ಷವೂ ಇದೇ ಸಮಸ್ಯೆ ಇದೇ ಕಥೆಯಾಗಿದೆ. ರಣಬಿಸಿಲು ನೆತ್ತಿ ಸುಡ್ತಿದೆ. ಭೂಮಿ ಶಾಖಕ್ಕೆ ನೀರು ಪಾತಾಳ ಸೇರಿದೆ. ಗಿಡ, ಬಳ್ಳಿಗಳು ಜೀವ ಜಲಕ್ಕಾಗಿ ಬಾಯಿ ಬಿಡ್ತಿವೆ. ಎಲ್ಲೆಲ್ಲೂ ಒಣಗಿರೋ ಭೂಮಿ. ನೀರಿಲ್ಲದೆ ಬೋರ್​ವೆಲ್​ಗಳು ಖಾಲಿ ಖಾಲಿಯಾಗಿವೆ.

ತೋಟಗಾರಿಕೆ ವಿವಿಯಲ್ಲೇ ಜೀವಜಲಕ್ಕೆ ಪರದಾಟ..! ಎಲ್ಲಿ ನೋಡಿದ್ರೂ ಬರಡು ಭೂಮಿಯಂತಾಗಿದೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣ. ರಾಜ್ಯದ ಪ್ರತಿಷ್ಟಿತ ತೋಟಗಾರಿಕೆ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಗೆ ಪಡೆದಿರೋ ಈ ವಿವಿಗೆ ಜಲಕ್ಷಾಮ ಎದುರಾಗಿದೆ. ಭಾರಿ ಮಳೆಗೆ, ಪ್ರವಾಹದಿಂದ ಕೃಷ್ಣಾ, ಮಲಪ್ರಭಾ, ಘಟಪ್ರಭಾ 3 ನದಿಗಳು ತುಂಬಿ ತುಳುಕ್ತಿವೆ.

ಆದ್ರೆ, ತೋಟಗಾರಿಗೆ ವಿವಿಯಲ್ಲಿ ಹನಿ ಹನಿ ನೀರಿಗೂ ತತ್ವಾರ ಶುರುವಾಗಿದೆ. ಇದ್ರಿಂದ ಬೆಳೆಗಳು ಒಣಗಿ, ಸೊರಗಿ ಹೋಗ್ತಿವೆ. ವಿವಿ ಎದುರಿನ ಮೈದಾನದಲ್ಲಿರೋ ಹೋತೋಟ ಬಿಟ್ರೆ ಉಳಿದ ಬೆಳೆಗಳಿಗೆ ನೀರೇ ಇಲ್ಲ. ಹೀಗಾಗಿ ವಿಧ್ಯಾರ್ಥಿಗಳ ಪ್ರಾಯೋಗಿಕ ಅಧ್ಯಯನ ಹಾಗೂ ರೈತರಿಗೆ ಪ್ರಾಯೋಗಿಕ ಮಾಹಿತಿ ನೀಡಲು ವಿವಿಯವರು ಪರದಾಡ್ತಿದ್ದಾರೆ.

ತೋಟಗಾರಿಕೆ ವಿವಿಯಲ್ಲಿ ಫಲಪುಷ್ಪ ಸಸಿಗಳನ್ನು ಬೆಳೆಸೋದಕ್ಕಾಗಿಯೇ ಒಟ್ಟು 15 ಬೋರ್ ವೆಲ್​ಗಳನ್ನ ಕೊರೆಸಲಾಗಿತ್ತು. ಆದರೆ 15 ಬೋರ್​​ಗಳ ಪೈಕಿ 13 ಬೋರ್​​ವೆಲ್​ಗಳಲ್ಲಿ ನೀರೇ ಬರ್ತಿಲ್ಲ. ಕೇವಲ ಎರಡು ಕೊಳವೆ ಬಾವಿಗಳಲ್ಲಿ ಅಳಿದುಳಿದ ನೀರು ಬರ್ತಿದ್ದು, ಅದ್ರಲ್ಲೇ ಗಿಡಗಳಿಗೆ ನೀರು ಹಾಯಿಸ್ತಿದ್ದಾರೆ.

ವಿವಿಯಲ್ಲಿ ನೀರಿನ ಕೊರತೆ ನೀಗಿಸೋಕೆ ಆಲಮಟ್ಟಿ ಹಿನ್ನೀರಿನಿಂದ ಪೈಪ್​ಲೈನ್ ಮೂಲಕ ನೀರು ಹರಿಸೋ ಬೇಡಿಕೆ ಇಡಲಾಗಿತ್ತು. ಅಂದು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಹೆಚ್​ಡಿಕೆ ವಿವಿಗೆ ಭೇಟಿ ನೀಡಿದ್ದ ವೇಳೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸೋ ಭರವಸೆ ನೀಡಿದ್ರು. ಆದ್ರೆ, ಇದೂವರೆಗೂ ಕೊಟ್ಟ ಭರವಸೆ. ಬೇಡಿಕೆ ಇನ್ನೂ ಈಡೇರಿಲ್ಲ.

Published On - 11:51 am, Sun, 1 December 19

2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ವಿಜಯೇಂದ್ರಗೆ ಯತ್ನಾಳ್​​ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ