‘ಸಿಎಂ ಆಗುತ್ತೇನೆಂದು ಎಲ್ಲರೂ ಹೇಳಿ ಹೇಳಿಯೇ ನಾನು ಇಲ್ಲೇ ಇದ್ದೀನಿ’
ಬೆಂಗಳೂರು: ನಾನು ಸಿಎಂ ಆಗುತ್ತೇನೆಂದು ಎಲ್ಲರೂ ಹೇಳಿ ಹೇಳಿಯೇ ನಾನು ಇನ್ನೂ ಇಲ್ಲೇ ಇದ್ದೇನೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೊದಲು ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆದ್ದು ಬರಲಿ. ನಂತರ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತೆ. ಮುಂದೆ ಸಿಎಂ ಯಾರು ಅನ್ನೋ ಪ್ರಶ್ನೆ ಈಗ ಉದ್ಭವಿಸಲ್ಲ. ಆದ್ರೆ ನನ್ನ ಹೆಸರು ಹೇಳಿ ಹೇಳಿ ಈ […]
ಬೆಂಗಳೂರು: ನಾನು ಸಿಎಂ ಆಗುತ್ತೇನೆಂದು ಎಲ್ಲರೂ ಹೇಳಿ ಹೇಳಿಯೇ ನಾನು ಇನ್ನೂ ಇಲ್ಲೇ ಇದ್ದೇನೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಮೊದಲು ನಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳು ಗೆದ್ದು ಬರಲಿ. ನಂತರ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತೆ. ಮುಂದೆ ಸಿಎಂ ಯಾರು ಅನ್ನೋ ಪ್ರಶ್ನೆ ಈಗ ಉದ್ಭವಿಸಲ್ಲ. ಆದ್ರೆ ನನ್ನ ಹೆಸರು ಹೇಳಿ ಹೇಳಿ ಈ ಮಟ್ಟಕ್ಕೆ ತಂದಿದ್ದಾರೆ. ಸಿದ್ದರಾಮಯ್ಯ ಮತ್ತೆ ಸಿಎಂ ಎಂದು ಬಿಂಬಿಸುವ ವಿಚಾರ ಕುರಿತು ಈಗ ಇಂಥ ಪ್ರಶ್ನೆ ಉದ್ಭವವಾಗಲ್ಲ ಎಂದರು.
ಡಿ. 9ರಂದು ಶುಭ ಸುದ್ದಿ ಕೊಡುತ್ತೇವೆ: ಉಪಚುನಾವಣೆ ಫಲಿತಾಂಶ ಏನು ಆಗುತ್ತದೆಯೋ ಗೊತ್ತಿಲ್ಲ, ಆದರೆ ನಮ್ಮ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. 15 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಬಿಜೆಪಿಯನ್ನ ಅಧಿಕಾರದಿಂದ ದೂರವಿಡೋದೇ ನಮ್ಮ ಧ್ಯೇಯ. ದೇಶವನ್ನು ಪಾರು ಮಾಡಲು ಸಮಾನಮನಸ್ಕರ ಜತೆಗಿದ್ದೇವೆ. ಡಿ.9ರ ತನಕ ಕಾಯಿರಿ, ಶುಭ ಸುದ್ದಿ ಕೊಡುತ್ತೇವೆ ಎಂದು ಹೆಚ್.ಡಿ.ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
Published On - 1:01 pm, Sun, 1 December 19