ಶತಕದ ಸನಿಹದಲ್ಲಿದ್ದ ದಂಪತಿ ಸಾವಿನಲ್ಲೂ ಒಂದಾದ್ರು!
ಕೋಲಾರ: ಪತ್ನಿ ಸಾವಿನ ಬಳಿಕ ಕೆಲವೇ ಗಂಟೆಗಳಲ್ಲಿ ಪತಿಯೂ ಸಾವನ್ನಪ್ಪಿರುವ ಅಪರೂಪದ ಘಟನೆ ಮುಳಬಾಗಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನಡೆದಿದೆ. ಮುನಿಯಮ್ಮ(85) ಮತ್ತು ವೆಂಕಟೇಶಪ್ಪ(95) ಮೃತ ದಂಪತಿ. ಮುನಿಯಮ್ಮ ಮತ್ತು ವೆಂಕಟೇಶಪ್ಪ ತಮ್ಮ ಮಕ್ಕಳ ಮನೆಯಲ್ಲಿ ವಾಸವಾಗಿದ್ದರು. ಮುನಿಯಮ್ಮ ತಮ್ಮ ಕೊನೇ ಮಗ ಚಿಕ್ಕಬೀರಪ್ಪ ಮನೆಯಲ್ಲಿದ್ದರೆ, ವೆಂಕಟೇಶಪ್ಪ ಮೊದಲ ಮಗ ನಾಗಪ್ಪ ಅವರ ಮನೆಯಲ್ಲಿ ವಾಸವಾಗಿದ್ದರು. ಸಾವಿನಲ್ಲೂ ಒಂದಾದ ದಂಪತಿ: ಆದ್ರೆ ಇದ್ದಕ್ಕಿದ್ದಂತೆ ಶುಕ್ರವಾರ ಬೆಳಗಿನ ಜಾವ ಏಕಾಏಕಿ ತಮ್ಮನ್ನು ಮುನಿಯಮ್ಮ ಬಳಿಗೆ ಕರೆದುಕೊಂಡು ಹೋಗಲು ವೆಂಕಟೇಶಪ್ಪ ತಿಳಿಸಿದ್ದಾರೆ. […]
ಕೋಲಾರ: ಪತ್ನಿ ಸಾವಿನ ಬಳಿಕ ಕೆಲವೇ ಗಂಟೆಗಳಲ್ಲಿ ಪತಿಯೂ ಸಾವನ್ನಪ್ಪಿರುವ ಅಪರೂಪದ ಘಟನೆ ಮುಳಬಾಗಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ನಡೆದಿದೆ. ಮುನಿಯಮ್ಮ(85) ಮತ್ತು ವೆಂಕಟೇಶಪ್ಪ(95) ಮೃತ ದಂಪತಿ.
ಮುನಿಯಮ್ಮ ಮತ್ತು ವೆಂಕಟೇಶಪ್ಪ ತಮ್ಮ ಮಕ್ಕಳ ಮನೆಯಲ್ಲಿ ವಾಸವಾಗಿದ್ದರು. ಮುನಿಯಮ್ಮ ತಮ್ಮ ಕೊನೇ ಮಗ ಚಿಕ್ಕಬೀರಪ್ಪ ಮನೆಯಲ್ಲಿದ್ದರೆ, ವೆಂಕಟೇಶಪ್ಪ ಮೊದಲ ಮಗ ನಾಗಪ್ಪ ಅವರ ಮನೆಯಲ್ಲಿ ವಾಸವಾಗಿದ್ದರು.
ಸಾವಿನಲ್ಲೂ ಒಂದಾದ ದಂಪತಿ: ಆದ್ರೆ ಇದ್ದಕ್ಕಿದ್ದಂತೆ ಶುಕ್ರವಾರ ಬೆಳಗಿನ ಜಾವ ಏಕಾಏಕಿ ತಮ್ಮನ್ನು ಮುನಿಯಮ್ಮ ಬಳಿಗೆ ಕರೆದುಕೊಂಡು ಹೋಗಲು ವೆಂಕಟೇಶಪ್ಪ ತಿಳಿಸಿದ್ದಾರೆ. ಇನ್ನು ವೆಂಕಟೇಶಪ್ಪ ಬಂದ ಕೆಲವೇ ಗಂಟೆಗಳಲ್ಲಿ ಮುನಿಯಮ್ಮ ಸಾವನ್ನಪ್ಪಿದ್ದಾರೆ. ಪತ್ನಿ ಸಾವಿನ ಆಘಾತದಿಂದ ಹೊರಬರದ ಪತಿ ವೆಂಕಟೇಶಪ್ಪ ಸಹ ಪತ್ನಿ ಶವದ ಬಳಿಯೇ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನಲ್ಲೂ ದಂಪಾತಿ ಒಂದಾಗಿದ್ದಾರೆ.
ಈ ವೃದ್ಧ ದಂಪತಿ ಮೊದಲಿನಿಂದಲೂ ಒಟ್ಟಿಗೆ ಸಾಯುವ ಇಂಗಿತ ವ್ಯಕ್ತಪಡಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ವಿಜಯಪುರದ ಬಬಲೇಶ್ವರ ಪಟ್ಟಣದಲ್ಲೂ ಇಂತಹದೊಂದ ಘಟನೆ ನಡೆದಿತ್ತು.