ಟಂಟಂ-ಲಾರಿ ಡಿಕ್ಕಿ, ಮದುವೆಗೆ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು

|

Updated on: Oct 22, 2019 | 12:06 PM

ಯಾದಗಿರಿ: ಟಂಟಂ ವಾಹನ ಹಾಗೂ ಲಾರಿ ಮುಖಾಮುಕಿ ಡಿಕ್ಕಿಯಾಗಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಬಳಿ ನಿನ್ನೆ ತಡ ರಾತ್ರಿ ನಡೆದಿದೆ. ನಿನ್ನೆ ತಡ ರಾತ್ರಿ ಬಳಿಚಕ್ರ ತಾಂಡದಿಂದ ಬದ್ದೇಪಲ್ಲಿ ತಾಂಡಗೆ ಟಂಟಂ ವಾಹನದಲ್ಲಿ ಮದುವೆಗೆ ಎಂದು ಹೋಗುತ್ತಿದ್ದವರ ಮೇಲೆ ಯಮರಾಯನ ಕಣ್ಣು ಬಿದ್ದಿದೆ. ಲಾರಿ ಚಾಲಕನ ಅತಿವೇಗದ ಚಾಲನೆ ಟಂಟಂ ವಾಹನದಲ್ಲಿ ಮದುವೆಗೆ ಹೋಗುತ್ತಿದ್ದ 40 ವರ್ಷದ ಠಾಕ್ರ್ಯಾ ಮತ್ತು 35 ವರ್ಷದ ಚನ್ನ್ಯಾ ಎಂಬ ಇಬ್ಬರ ಬಲಿ […]

ಟಂಟಂ-ಲಾರಿ ಡಿಕ್ಕಿ, ಮದುವೆಗೆ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವು
Follow us on

ಯಾದಗಿರಿ: ಟಂಟಂ ವಾಹನ ಹಾಗೂ ಲಾರಿ ಮುಖಾಮುಕಿ ಡಿಕ್ಕಿಯಾಗಿ ಟಂಟಂನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಬಳಿ ನಿನ್ನೆ ತಡ ರಾತ್ರಿ ನಡೆದಿದೆ.

ನಿನ್ನೆ ತಡ ರಾತ್ರಿ ಬಳಿಚಕ್ರ ತಾಂಡದಿಂದ ಬದ್ದೇಪಲ್ಲಿ ತಾಂಡಗೆ ಟಂಟಂ ವಾಹನದಲ್ಲಿ ಮದುವೆಗೆ ಎಂದು ಹೋಗುತ್ತಿದ್ದವರ ಮೇಲೆ ಯಮರಾಯನ ಕಣ್ಣು ಬಿದ್ದಿದೆ. ಲಾರಿ ಚಾಲಕನ ಅತಿವೇಗದ ಚಾಲನೆ ಟಂಟಂ ವಾಹನದಲ್ಲಿ ಮದುವೆಗೆ ಹೋಗುತ್ತಿದ್ದ 40 ವರ್ಷದ ಠಾಕ್ರ್ಯಾ ಮತ್ತು 35 ವರ್ಷದ ಚನ್ನ್ಯಾ ಎಂಬ ಇಬ್ಬರ ಬಲಿ ಪಡೆದಿದೆ ಹಾಗೂ ಆರು ಮಂದಿಗೆ ಗಂಭೀರ ಗಾಯಗಳಾಗಿವೆ.

ಲಾರಿ ಚಾಲಕ ಪರಾರಿ:
ಘಟನೆ ಬಳಿಕ ಲಾರಿ ಚಾಲಕ ಲಾರಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಗಯಾಳುಗಳನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಈ ಸಂಭಂದ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Published On - 10:42 am, Tue, 22 October 19