ಬೆಂಗಳೂರು: ಮೊನ್ನೆ ಶಿಕ್ಷಣ ಸಚಿವರೇನೋ 5ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ರದ್ದು ಅಂತಾ ಘೋಷಿಸಿದ್ರು. ಆದ್ರೆ ನಿನ್ನೆ ಕಾನೂನು ಸಚಿವ್ರು 7ನೇ ಕ್ಲಾಸ್ವರೆಗೂ ರದ್ದು ಅನ್ನೋ ಮೂಲಕ ಗೊಂದಲ ಸೃಷ್ಟಿಸಿದ್ರು. ತದನಂತ್ರ ಶಿಕ್ಷಣ ಸಚಿವರು ಹೇಳಿದ್ದೇ ಸರಿ ಅಂತಾ ಮತ್ತೆ ತೇಪೆ ಹಚ್ಚಿದ್ರು. ಹೀಗಾಗಿ ಯಾರದ್ದು ಸರಿ? ಯಾರದ್ದು ತಪ್ಪು ಹೇಳಿಕೆ ಅನ್ನೋ ಕನ್ಫೂಸ್ ಶುರುವಾಗಿದೆ. ಇದ್ರಿಂದ ಸ್ವತಃ ಶಿಕ್ಷಣ ಸಚಿವರೇ ಪೋಷಕರ ಗೊಂದಲಕ್ಕಿಂದು ಸ್ಪಷ್ಟನೆ ಕೊಡಲಿದ್ದಾರೆ.
ಕನ್ಪ್ಯೂಷನ್.. ಫುಲ್ ಕನ್ಪ್ಯೂಷನ್.. ಶಿಕ್ಷಣ ಸಚಿವರು ಹೇಳೋದೇ ಒಂದು. ಕಾನೂನು ಸಚಿವರ ಮಾತೇ ಮತ್ತೊಂದು. ಒಂದೇ ವಿಷ್ಯಕ್ಕೆ. ಇಬ್ಬರು ಸಚಿವರು ಹೇಳಿದ ಮಾತು ಕೇಳಿ ಪೋಷಕರು ಫುಲ್ ಕನ್ಪ್ಯೂಷನ್ ಆಗಿದ್ರು . ಆನ್‌ಲೈನ್ ಕ್ಲಾಸ್ ಕುರಿತು, ಯಾರ ಆದೇಶ ಸರಿ ಅಂತ ತಲೆ ಕೆಡಿಸಿಕೊಂಡಿದ್ದಾರೆ.
ಆನ್‌ಲೈನ್ ಕ್ಲಾಸ್ ಕುರಿತು ಸಚಿವರಲ್ಲೇ ಗೊಂದಲ!
ಎಸ್.. ಎಲ್ಕೆಜಿಯಿಂದ ಐದನೇ ತರಗತಿ ವರೆಗಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ಗಳು ಇರಲ್ಲ ಅಂತ ಮೊನ್ನೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ರು. ಆದ್ರೆ, ನಿನ್ನೆ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದೇ ಬೇರೆ. ವಿಧಾನಸೌಧದಲ್ಲಿ ಮಾತನಾಡಿದ ಅವ್ರು, ಗ್ರಾಮೀಣ ಭಾಗದಲ್ಲಿ ಅನೇಕ ಮಕ್ಕಳಿದ್ದಾರೆ. ಹೀಗಾಗಿ, ಏಳನೇ ತರಗತಿ ವಿದ್ಯಾರ್ಥಿಗಳ ತನಕ ಆನ್‌ಲೈನ್ ಕ್ಲಾಸ್ ರದ್ದು ಪಡಿಸಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ್ದೀವಿ ಅಂದ್ರು. ಹಾಗೆ, 8, 9ನೇ ತರಗತಿಗೂ ಆನ್‌ಲೈನ್ ಕ್ಲಾಸ್ ಬೇಕಾ, ಬೇಡ್ವೋ ಅಂತ ತೀರ್ಮಾನಿಸ್ತೀವಿ ಅಂದ್ರು.
ಟ್ವಿಟರ್ನಲ್ಲಿ ಸುರೇಶ್ ಕುಮಾರ್ ಸ್ಪಷ್ಟನೆ ಟ್ವೀಟ್!
ಯಾವಾಗ, ಏಳನೇ ತರಗತಿ ವರೆಗೂ ಆನ್‌ಲೈನ್ ಕ್ಲಾಸ್ ರದ್ದು ಮಾಡ್ತೀವಿ ಅಂತಂದ್ರೋ, ಗೊಂದಲ ಸೃಷ್ಟಿಯಾಗಿತ್ತು. ನಂತರ, ಖುದ್ದು ಸುರೇಶ್ ಕುಮಾರ್ ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ರು. ಏಳನೇ ತರಗತಿ ವರೆಗೂ ಆನ್‌ಲೈನ್ ತರಗತಿ ರದ್ದು ಮಾಡಲು ಯಾವುದೇ ನಿರ್ಣಯಕೈಗೊಂಡಿಲ್ಲ. ಇದು ಕೇವಲ ಸಲಹೆ ಅಷ್ಟೇ ಅಂತ ಫೋನ್ನಲ್ಲೂ ಸ್ಪಷ್ಟಪಡಿಸಿದ್ರು.
ಇನ್ನು, ಸಚಿವರಿಬ್ಬರ ಗೊಂದಲದ ಮಾತು ಹತ್ತಾರು ಚರ್ಚೆ ಹುಟ್ಟುಹಾಕಿತ್ತು. ಸಂಪುಟ ಸಹೋದ್ಯೋಗಿಗಳಲ್ಲೇ ಸಮನ್ವಯತೆ ಇಲ್ವಾ ಅನ್ನೋ ಪ್ರಶ್ನೆಗೆ ಕಾರಣವಾಗಿತ್ತು. ಬಳಿಕ ಮಾತ್ನಾಡಿದ ಸಚಿವ ಮಾಧುಸ್ವಾಮಿ, ಎಲ್ಲಾ ಗೊಂದಲಗಳಿಗೆ ಸಭೆಯಲ್ಲಿ ಚರ್ಚೆಯಾಗಿದೆ. 7ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ರದ್ದುಗೊಳಿಸೋಕೆ ಸಚಿವ್ರು ಒಪ್ಪಿಕೊಂಡಿದ್ದಾರೆ ಅಂದ್ರು.
7ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ರದ್ದು!
ಇತ್ತ ಈ ಬಗ್ಗೆ ಸಚಿವ ಸುಧಾಕರ್ ಕೂಡ ಬಾಯ್ಬಿಟ್ರು. LKGಯಿಂದ 7ನೇ ಕ್ಲಾಸ್ವರೆಗೆ ಆನ್‌ಲೈನ್ ಕ್ಲಾಸ್ ರದ್ದುಗೊಳಿಸೋ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಮೊದ್ಲು ಎಲ್ಕೆಜಿಯಿಂದ 5ನೇ ಕ್ಲಾಸ್ವರೆಗೆ ರದ್ದು ಮಾಡಿದ್ರು. ಆದ್ರೀಗ 6, 7ನೇ ತರಗತಿಗೂ ರದ್ದು ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಮಾಧುಸ್ವಾಮಿ ಹೇಳಿರೋದು ಸರಿಯಿದೆ. 7ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ರದ್ದುಗೊಳಿಸಿರೋ ಬಗ್ಗೆ ಶಿಕ್ಷಣ ಸಚಿವರಿಂದು ಘೋಷಣೆ ಮಾಡ್ಬಹುದು ಅಂದ್ರು.
ಒಟ್ನಲ್ಲಿ, ಸಚಿವರ ಮಾತು ಪೋಷಕರಲ್ಲಿ ಸಾಕಷ್ಟು ಗೊಂದಲ ಮೂಡಿಸಿತ್ತು. ಆದ್ರೆ ರಾತ್ರಿಯೊಳಗೆ ಸಚಿವ ಸುಧಾಕರ್ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಇಂದು 7ನೇ ತರಗತಿವರೆಗೆ ಆನ್‌ಲೈನ್ ಕ್ಲಾಸ್ ರದ್ದು ಅಂತಾ ಘೋಷಣೆ ಮಾಡೋ ಮೂಲಕ ಶಿಕ್ಷಣ ಸಚಿವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆಯೋ ಸಾಧ್ಯತೆಯಿದೆ. ಇನ್ನು, 8, 9ನೇ ತರಗತಿ ಮಕ್ಕಳ ತರಗತಿ ಭವಿಷ್ಯವೂ ನಾಳೆ ಹೊರಬೀಳಲಿದ್ದು, ಕಾದು ನೋಡ್ಬೇಕಿದೆ.
Published On - 7:39 am, Fri, 12 June 20