
ಮಂಗಳೂರು: ಶಾರ್ಜಾದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಇಬ್ಬರನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ನ ಡಿಆರ್ಐ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ.
ಶಾರ್ಜಾದಿಂದ ವಿಮಾನದಲ್ಲಿ ಬಂದಿದ್ದ ಕಾಸರಗೋಡಿನ ನಿವಾಸಿಗಳಾದ ಫೈಜಲ್ (37) ಹಾಗೂ ಮೊಹಮ್ಮದ್ ಹುಸೇನ್ (31) ಎಂಬುವವರು ಪೇಸ್ಟ್ ರೂಪದಲ್ಲಿ ಚಿನ್ನ ಸಾಗಿಸುತ್ತಿದ್ದರು. ಒಳಚಡ್ಡಿಯ ಜೇಬಿನಲ್ಲಿ ಚಿನ್ನ ಪತ್ತೆಯಾಗಿದ್ದು, ತಪಾಸಣೆ ಮಾಡುವ ವೇಳೆಗೆ ಸುಮಾರು 1.09 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಚಿನ್ನ ಇರುವುದು ತಿಳಿದುಬಂದಿದೆ. ಸದ್ಯ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ.
ಸಿಟಿ ಇನ್ಸ್ಟಿಟ್ಯೂಟ್ ಮುಂದೆ.. ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ಕಿರಾತಕ ಅಂದರ್