ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲೋದು ತುಂಬಾನೇ ಅಪಾಯಕಾರಿ ಎನ್ನೋದು ಅನೇಕರಿಗೆ ಅರಿವಾಗಿರುತ್ತದೆ. ಏಕೆಂದರೆ, ನಮ್ಮ ಪಾಡಿಗೆ ನಾವು ನಿಂತಿದ್ದರೂ ರಸ್ತೆ ಬದಿಯಲ್ಲಿ ಓಡಾಡುವ ವಾಹನ ನಮ್ಮ ಮೇಲೆ ಬಂದೆರಗಬಹುದು. ಈಗ ಉಡುಪಿಯಲ್ಲಿ ಇದೇ ರೀತಿ ಆಗಿ ಇಬ್ಬರು ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎರ್ಮಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೇ ಊರಿನ ನಿವಾಸಿ ಸಂಜೀವ ದೇವಾಡಿಗ (45) ಹಾಗೂ ಉತ್ತರ ಪ್ರದೇಶ ಮೂಲದ ಅರವಿಂದ್ (22) ಬಸ್ಗಾಗಿ ಕಾಯುತ್ತಿದ್ದರು. ಎಷ್ಟೇ ಹೊತ್ತಾದರೂ ಬಸ್ ಮಾತ್ರ ಬಂದಿರಲಿಲ್ಲ. ಆದರೆ ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರು ಏಕಾಏಕಿ ಇವರತ್ತ ತಿರುಗಿದೆ.
ನೋಡ ನೋಡುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ಇವರ ಮೇಲೆ ಹರಿದಿದೆ. ನಂತರ ಕಾರು ಮರಕ್ಕೆ ಡಿಕ್ಕಿ ಆಗಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟರೆ, ಕಾರಿನಲ್ಲಿದ್ದ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧುಗಿರಿ-ಹಿಂದೂಪುರ ರಸ್ತೆಯ ಬಳಿ ಬೈಕ್ ಡಿಕ್ಕಿ: ಸ್ಥಳದಲ್ಲೇ ಸವಾರರಿಬ್ಬರ ಸಾವು