ಉಡುಪಿ: ಚಲಿಸುತ್ತಿದ್ದ ಸ್ಕೂಟಿಯೊಂದು ಅಚಾನಕ್ ಆಗಿ ಬಂದ್ ಬಿದ್ದಿದೆ. ಏನಾಯ್ತು ಎಂದು ಚಾಲಕ ಇಳಿದು ನೋಡುವಾಗಲೇ ಸ್ಕೂಟಿಗೆ ಬೆಂಕಿ ಹತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಜೋರಾಗಿ ಹೊತ್ತಿ ಉರಿದ ಬೆಂಕಿ ಸ್ಕೂಟಿಯನ್ನು ಆಹುತಿ (Fire breaks out on Scooty) ಪಡೆದುಕೊಂಡಿದೆ. ಈ ಬೆಂಕಿ ಅವಘಡ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆ (Yenne Hole)ಯಲ್ಲಿರುವ ಸೇತುವೆ ಬಳಿ ನಡೆದಿದ್ದು, ಕಾರ್ಕಳ ಮೂಲದವರಿಗೆ ಸೇರಿದ ಸ್ಕೂಟಿ ಇದಾಗಿದೆ ಎಂದು ತಿಳಿದುಬಂದಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ.
ಬೆಳ್ತಂಗಡಿ: ಮಾಲಾಧಾರಿಗಳಿದ್ದ ಮಿನಿ ಬಸ್ ಬ್ರೇಕ್ಫೇಲ್ (Minibus Brake file) ಆಗಿ ಅರಣ್ಯಕ್ಕೆ ನುಗ್ಗಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ನಡೆದಿದೆ. ಬಳ್ಳಾರಿಯ ಜಿಲ್ಲೆಯ ಕೂಡ್ಲಿಗಿ ತಾಲೂಕಿನ 21 ಜನ ಅಯ್ಯಪ್ಪ ಮಾಲಾಧಾರಿಗಳು ಶಬರಿಮಲೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಗಾಯಾಳುಗಳನ್ನು ಕಕ್ಕಿಂಜೆ, ಮಂಗಳೂರು, ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 15 ಗಾಯಾಳುಗಳನ್ನು ಕಕ್ಕಿಂಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬ್ರೆಜಿಲ್: ಸಂಗಾತಿ ತನ್ನಿಂದ ಬೇರ್ಪಟ್ಟದ್ದರಿಂದ ರೊಚ್ಚಿಗೆದ್ದ ಅವನು ಮಕ್ಕಳೆದುರೇ ಅಕೆಯನ್ನು ಬರ್ಬರವಾಗಿ ತಿವಿದು ಕೊಂದ!
ಧಾರವಾಡ: ಕೆಐಎಡಿಬಿ ಭೂಸ್ವಾಧೀನದಲ್ಲಿ ಅಕ್ರಮ ಪ್ರಕರಣ (Illegal case of land acquisition) ಸಂಬಂಧ ನಿವೃತ್ತ ವಿಶೇಷ ಭೂಸ್ವಾಧಿನಕಾರಿ ವಿ.ಡಿ.ಸಜ್ಜನ ಸೇರಿ 14 ಜನರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಸ್ವಾಧೀನಪಡಿಸಿಕೊಂಡ ಜಮೀನುಗಳ ಮೇಲೆ ಮತ್ತೆ ಸ್ವಾಧೀನಕ್ಕೆ ದಾಖಲೆ ಸೃಷ್ಟಿಸಿ 2011-12ರಲ್ಲಿ ಮಮ್ಮಿಗಟ್ಟಿ, ಚಿಕ್ಕಮಲಿಗವಾಡ ವ್ಯಾಪ್ತಿಯ ಜಮೀನನ್ನು ಸ್ವಾದೀನ ಮಾಡಿಕೊಳ್ಳಲಾಗಿತ್ತು. ಬ್ಯಾಂಕ್ ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಎಸಗಿದ್ದಲ್ಲದೆ ರೈತರ ಹೆಸರಿನ ಮೇಲೆ ಪರಿಹಾರ ಮಂಜೂರು ಮಾಡಲಾಗಿತ್ತು.
ಆರೋಪದ ಮೇಲೆ ಹಾಲಿ ವಿಶೇಷ ಭೂಸ್ವಾಧೀನಾಧಿಕಾರಿ ಮಮತಾ ಅವರು ದೂರು ದಾಖಲಿಸಿದ್ದಾರೆ. ಅಕ್ರಮದಲ್ಲಿ ಕೆಐಎಡಿಬಿ ಕಚೇರಿಯ ವಿವಿಧ ಹಂತದ ಸಿಬ್ಬಂದಿ ಕೂಡ ಭಾಗಿಯಾಗಿದ್ದು, ಶಾಮೀಲಾದ ಸಿಬ್ಬಂದಿ ಸೇರಿ ಭಾಗಿಯಾದ ಬ್ಯಾಂಕ್‌ಗಳ ಮೇಲೂ ದೂರು ದಾಖಲಾಗಿದೆ. ಅಕ್ರಮ ವಿರುದ್ಧ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಹೋರಾಟ ಮಾಡಿದ್ದರು. ಹೋರಾಟದ ಬಳಿಕ ಪ್ರಕರಣವು ಗಂಭೀರತೆಯನ್ನು ಪಡೆದುಕೊಂಡಿತ್ತು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Fri, 23 December 22