AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರೆಜಿಲ್: ಸಂಗಾತಿ ತನ್ನಿಂದ ಬೇರ್ಪಟ್ಟದ್ದರಿಂದ ರೊಚ್ಚಿಗೆದ್ದ ಅವನು ಮಕ್ಕಳೆದುರೇ ಅಕೆಯನ್ನು ಬರ್ಬರವಾಗಿ ತಿವಿದು ಕೊಂದ!

ಸ್ಥಳೀಯ ಮಾಧ್ಯಮದ ವರದಿಯೊಂದರ ಪ್ರಕಾರ ರಾಮೋಸ್ ಳನ್ನು ಕೊಂದ ಬಳಿಕ ಸ್ಯಾಂಟೋಸ್ ಪರಾರಿಯಾಗಿದ್ದನಂತೆ; ಆದರೆ ಒಂದೆರಡು ದಿನಗಳಾದ ಮೇಲೆ ತಾನೇ ಖುದ್ದಾಗಿ ಕ್ಯಾಂಪೋಸ್ ಎಲಿಸಿಯೋಸ್ ಪೊಲೀಸ್ ಸ್ಟೇಶನ್ ಗೆ ಹೋಗಿ ಶರಣಾಗಿದ್ದಾನೆ.

ಬ್ರೆಜಿಲ್: ಸಂಗಾತಿ ತನ್ನಿಂದ ಬೇರ್ಪಟ್ಟದ್ದರಿಂದ ರೊಚ್ಚಿಗೆದ್ದ ಅವನು ಮಕ್ಕಳೆದುರೇ ಅಕೆಯನ್ನು ಬರ್ಬರವಾಗಿ ತಿವಿದು ಕೊಂದ!
ಮರ್ಸಿಲೊ ಡಿ ಸೌಜಾ ಸ್ಯಾಂಟೋಸ್ ಮತ್ತು ಅನಾ ಬೀಟ್ರಿಜ್ ರಾಮೋಸ್ ಡ ಸಿಲ್ವಾ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Dec 23, 2022 | 7:53 AM

Share

ಇದು ಸಹ ಬ್ರೆಜಿಲ್ ನಿಂದ ನಮಗೆ ಲಭ್ಯವಾಗಿರುವ ಕ್ರೈಮ್ ಕತೆ. ನರರಾಕ್ಷಸನೊಬ್ಬ ತನ್ನಿಂದ ಬೇರ್ಪಟ್ಟ ಸಂಗಾತಿಯನ್ನು ತಮಗೆ ಹುಟ್ಟಿದ ಮೂರು ಮಕ್ಕಳ ಎದುರಲ್ಲೇ ತಿವಿದು ಕೊಂದ ಭಯಾನಕ ಕತೆಯಿದು. ಮಹಿಳೆಯನ್ನು ಕೊಂದ ನಂತರ ನರಾಧಮ ಪೊಲೀಸರಿಗೆ ಶರಣಾಗಿದ್ದಾನೆ. ರಿಯೋ ಡಿ ಜನೈರೊ ರಾಜ್ಯದ ಬೆಲ್ಫೋರ್ಡ್ ರಾಕ್ಸೋ (Belford Roxo) ಪ್ರಾಂತ್ಯದ ಪೊಲೀಸರು ತನ್ನ ಮಾಜಿ ಸಂಗಾತಿ ಆನಾ ಬೀಟ್ರಿಜ್ ರಾಮೋಸ್ ಳನ್ನು (Ana Beatriz Ramos da Silva) ಡಿಸೆಂಬರ್ 9 ರಂದು ಕೊಂದ ಆರೋಪದಲ್ಲಿ ಮಾರ್ಸಿಲೊ ಡಿ ಸೌಜಾ ಸ್ಯಾಂಟೊಸ್ (Marcelo de Souza Santos) ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅವತ್ತು ಬೆಳಗಿನ ಸಮಯ ಡುಕ್ಯೂ ಡಿ ಕೇಕ್ಸಿಯಾಸ್ ನಲ್ಲಿರುವ ಅವಳ ಮನೆಯಲ್ಲೇ ತಿವಿದು ಕೊಂದಿದ್ದಾಗಿ ಸ್ಯಾಂಟೋಸ್ ಪೊಲೀಸರಿಗೆ ತಿಳಿಸಿದ ನಂತರ ಅವನನ್ನು ಬಂಧಿಸಲಾಗಿತ್ತು. ಅವನು ರಾಮೋಸ್ ಳನ್ನು ಮನ ಬಂದಂತೆ ತಿವಿಯುತ್ತಿದ್ದುದನ್ನು ಕಂಡು ಭಯ ಮತ್ತು ಆತಂಕದಿಂದ ವಿಹ್ವಲಿತರಾಗಿದ್ದ ಮಕ್ಕಳು ಮನೆಯಿಂದ ಹೊರಗೋಡಿ ನೆರೆಹೊರೆಯವರಿಗೆ ‘ಅಪ್ಪ ಅಮ್ಮನನ್ನು ಕೊಲ್ಲುತ್ತಿದ್ದಾನೆ’ ಅಂತ ಹೇಳಿ ಸಹಾಯ ಯಾಚಿಸಿದ್ದಾರೆ.

ಮೊದಲಿಗೆ ಪರಾರಿಯಾಗಿದ್ದ

ಸ್ಥಳೀಯ ಮಾಧ್ಯಮದ ವರದಿಯೊಂದರ ಪ್ರಕಾರ ರಾಮೋಸ್ ಳನ್ನು ಕೊಂದ ಬಳಿಕ ಸ್ಯಾಂಟೋಸ್ ಪರಾರಿಯಾಗಿದ್ದನಂತೆ; ಆದರೆ ಒಂದೆರಡು ದಿನಗಳಾದ ಮೇಲೆ ತಾನೇ ಖುದ್ದಾಗಿ ಕ್ಯಾಂಪೋಸ್ ಎಲಿಸಿಯೋಸ್ ಪೊಲೀಸ್ ಸ್ಟೇಶನ್ ಗೆ ಹೋಗಿ ಶರಣಾಗಿದ್ದಾನೆ.

ರಾಮೋಸ್ ಳ ಕಸಿನ್ ಮೂರು ಮಕ್ಕಳನ್ನು ತನ್ನ ಆಶ್ರಯಕ್ಕೆ ತೆಗೆದುಕೊಂಡ ನಂತರ ಅವರಲ್ಲಿ 9-ವರ್ಷ-ವಯಸ್ಸಿನ ಒಂದು ಗಂಡು ಮಗು, ‘ನಮ್ಮಮ್ಮ ಸಾಯುತ್ತಿದ್ದಾಳೆ, ನಮ್ಮಪ್ಪ ಅವಳನ್ನು ಕೊಂದಿದ್ದಾನೆ!’ ಅಂತ ಓಣಿಯಲ್ಲಿ ನಿಂತುಕೊಂಡು ಅರಚಿತ್ತು ಎಂದು ಮಾಧ್ಯಮಕ್ಕೆ ತಿಳಿಸಿದ್ದಾಳೆ. ಸ್ಯಾಂಟೋಸ್ ಮತ್ತು ರಾಮೋಸ್ ಗೆ ಮತ್ತೊಂದು ಗಂಡು ಮಗು ಮತ್ತು ಒಂದು ಹೆಣ್ಣು ಮಗು ಇದ್ದಾರೆ.

Ramos and Santos with their children

ಮಕ್ಕಳೊಂದಿಗೆ ರಾಮೋಸ್ ಮತ್ತು ಸ್ಯಾಂಟೋಸ್

9 ವರ್ಷಗಳ ಸಂಬಂಧ

ರಾಮೋಸ್ 9 ವರ್ಷಗಳ ಕಾಲ ಸ್ಯಾಂಟೋಸ್ ನೊಂದಿಗೆ ಸಂಬಂಧ ಹೊಂದಿದ್ದಳು ಆದರೆ, ಅವನ ಹಿಂಸಾ ಪ್ರವೃತ್ತಿಯಿಂದ ಬೇಸತ್ತು ಆಗಸ್ಟ್ ನಲ್ಲಿ ಅವನಿಂದ ಬೇರ್ಪಟ್ಟಿದ್ದಳು ಎಂದು ರಾಮೋಸ್ ಕಸಿನ್ ಹೇಳಿದ್ದಾಳೆ. ಆ ಸಂಗತಿಯನ್ನು ರಾಮೋಸ್ ಪೊಲೀಸರಿಗೂ ತಿಳಿಸಿದ್ದಳು ಮತ್ತು ಅವರು ಸ್ಯಾಂಟೋಸ್ ಗೆ ಅವಳ ಹತ್ತಿರ ಸುಳಿಯದಂತೆ ಎಚ್ಚರಿಸಿದ್ದರು.

ಅದರೆ, ರಾಮೋಸ್ ತನ್ನಿಂದ ದೂರವಾಗಿರೋದು ಸ್ಯಾಂಟೋಸ್ ಗೆ ಸಹ್ಯವಾಗಲಿಲ್ಲ ಮತ್ತು ಅವನು ಅಸಂತುಷ್ಟನಾಗಿದ್ದ. ಅವಳಿಲ್ಲದ ಬದುಕು ಅವನಿಗೆ ನಿಸ್ತೇಜ, ನೀರಸ ಅನಿಸತೊಡಗಿತ್ತು.

ಇದನ್ನೂ ಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ಅಸಹಾಯಕ ಪುರುಷರನ್ನು ಬೇಟೆಯಾಡುತ್ತಿದ್ದ ಡೆನಿಸ್ ನಿಲ್ಸನ್, ಅವರನ್ನು ಕೊಂದು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ!

ರಾಮೋಸ್ ಕುಟುಂಬವರು ಹೇಳಿರುವ ಪ್ರಕಾರ ಸ್ಯಾಂಟೋಸ್ ಮಹಿಳೆಯರನ್ನು ಹಿಂಸಿಸುವ ಚಾರಿತ್ರ್ಯವುಳ್ಳವನಾಗಿದ್ದ ಮತ್ತು ರಾಮೋಸ್ ದೂರು ನೀಡಿದ ಬಳಿಕ ಪೊಲೀಸರು ಜಾರಿಗೊಳಿಸಿದ್ದ ಎಚ್ಚರಿಕೆಯ ಆದೇಶವನ್ನು ಹಲವಾರು ಬಾರಿ ಉಲ್ಲಂಘಿಸಿದ್ದ. ಪೊಲೀಸರು ರಾಮೋಸ್ ಕೊಲೆ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ ಮತ್ತು ಸ್ಯಾಂಟೋಸ್ ನನ್ನು ಇಷ್ಟರಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.

ಮತ್ತೊಬ್ಬ ಸ್ವಂತ ಮಕ್ಕಳನ್ನೇ ಕೊಂದ!

ಬ್ರೆಜಿಲ್ ನಲ್ಲೇ ಮತ್ತೊಬ್ಬ ವ್ಯಕ್ತಿ ತನ್ನ ನಾಲ್ಕು ಮಕ್ಕಳನ್ನು ತಲೆದಿಂಬು ಹಾಗೂ ಚಾಕುವೊಂದನ್ನು ಬಳಸಿ ಕೊಂದು ವನ್ಯಜೀವಿಗಳಂತೆ ಕ್ರೌರ್ಯ ಮೆರೆದ ಕೆಲವೇ ದಿನಗಳ ನಂತರ ರಾಮೋಸ್ ಳ ಭೀಕರ ಹತ್ಯೆ ನಡೆದಿದೆ.

ಮೂರು, ಆರು, ಎಂಟು ಮತ್ತು ಮತ್ತು ಹನ್ನೊಂದು ವರ್ಷ ವಯಸ್ಸಿನ ಮಕ್ಕಳ ದೇಹಗಳು ಅಲ್ವೊರಾಡಾದಲ್ಲಿರುವ ಹಂತಕನ ಮನೆಯಲ್ಲಿ ಮಂಗಳವಾರ ಪತ್ತ್ತೆಯಾಗಿದ್ದವು. ತನ್ನ ಸಂಗಾತಿಯ ಮೇಲೆ ಸೇಡು ತೀರಿಸಿಕೊಳ್ಳಲು ಅ ಹೇಡಿ ಮಕ್ಕಳನ್ನು ಕೊಂದಿದ್ದಂತೆ.

ಹೋಟೆಲಲ್ಲಿ ಅಡಗಿದ್ದ!

ಮರುದಿನವೇ ಪೊಲೀಸರು 28-ವರ್ಷ-ವಯಸ್ಸಿನ ಡೇವಿಡ್ ಡ ಸಿಲ್ವಾ ಲಿಮೋಸ್ ನನ್ನು ಪಕ್ಕದೂರು ಪೊರ್ಟೊ ಅಲೆಗ್ರೆಯಲ್ಲಿನ ಹೋಟೆಲೊಂದರಿಂದ ವಶಕ್ಕೆ ಪಡೆದರು.

ಇದನ್ನೂ ಓದಿ:  India Covid Updates: ವಿದೇಶಗಳಿಂದ ಬರುವವರಿಗೆ RT-PCR ಪರೀಕ್ಷೆ ಆರಂಭ: ಮನ್ಸುಖ್ ಮಾಂಡವೀಯ

ಮಕ್ಕಳಿಗೆ ಚಹಾ ಕುಡಿಸುವುದಾಗಿ ಮನವೊಲಿಸಿದ ಬಳಿಕ ಒಬ್ಬೊಬ್ಬರನ್ನಾಗಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಚಾಕುನಿಂದ ಅವರ ದೇಹಗಳನ್ನು ತಿವಿದನೆಂದು ಲಿಮೋಸ್ ಪೊಲೀಸರಿಗೆ ಹೇಳಿದ್ದಾನೆ. ಮತ್ತಷ್ಟು ಕ್ರೈಮ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಕ್ಕಳ ಅಜ್ಜಿ (ಅಮ್ಮಮ್ಮ-ಅಮ್ಮನ ಅಮ್ಮ) ಪೊಲೀಸರಿಗೆ ನೀಡಿರುವ ವರದಿಯ ಪ್ರಕಾರ ಲಿಮೋಸ್ ನಿಂದ ಬೇರ್ಪಟ್ಟಿದ್ದ ತನ್ನ ಮಗಳ ಮೇಲೆ ಸೇಡು ತೀರಿಸಿಕೊಳ್ಳಲು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿದ.

ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ