ಆಳಂದ: ಹಾಸ್ಟೆಲ್​ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ.

ಆಳಂದ: ಹಾಸ್ಟೆಲ್​ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 22, 2022 | 6:04 PM

ಕಲಬುರಗಿ: ನೇಣು ಬಿಗಿದುಕೊಂಡು ವಿದ್ಯಾರ್ಥಿ (Student) ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ. ತಾನಾಜಿ ಗಾಯಕ್ವಾಡ್(17) ನೇಣಿಗೆ ಶರಣಾದ ವಿದ್ಯಾರ್ಥಿ. ಆಳಂದ ತಾಲೂಕಿನ ಆಣೂರು ನಿವಾಸಿಯಾಗಿರುವ ತಾನಾಜಿ ಆಳಂದದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ಏನು ತಿಳಿದು ಬಂದಿಲ್ಲ ಎನ್ನಲಾಗುತ್ತಿದೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ‌ಯಾಗಿದ್ದು, 3 ವರ್ಷದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿರುವಂತಹ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಂಗಲ ಗ್ರಾಮದ ಬಳಿ ನಡೆದಿದೆ. ತನ್ಮಯ್(3) ಮೃತ ಮಗು. ಕಾರಿನಲ್ಲಿದ್ದ 6 ಜನರಿಗೆ ಗಾಯಗಳಾಗಿವೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದು ಡ್ರಗ್ ಪೆಡ್ಲರ್ ಆದ ಎಂಬಿಎ ಪದವೀಧರನ ಕಥೆ

ಬೆಂಗಳೂರು: ಸ್ನೇಹಿತನ ಕಾರ್ ಆಕ್ಸಿಡೆಂಟ್ ಮಾಡಿದ್ದ ಖರ್ಚಿಗಾಗಿ ಎಂಬಿಎ ಪದವೀಧರ ಡ್ರಗ್ ಪೆಡ್ಲರ್ ಆಗಿರುವಂತಹ ಘಟನೆ ನಡೆದಿದೆ. ಆಂದ್ರದ ವಿಶಾಖಪಟ್ಟಣಂ ನಿವಾಸಿ ಕೊರಡ ಸಾಯಿ ಅಮರನಾಥ್​ನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ. ಬಂಧಿತನಿಂದ 12 ಲಕ್ಷ ರೂ ಮೌಲ್ಯದ 200 ಗ್ರಾಂ ವೀಡ್ ಆಯಿಲ್ ವಶಪಡೆಯಲಾಗಿದೆ. ಸ್ನೇಹಿತನ ಕಾರನ್ನ ಈ ಹಿಂದೆ ಆಕ್ಸಿಡೆಂಟ್ ಮಾಡಿದ್ದ. ಆಕ್ಸಿಡೆಂಟ್ ಖರ್ಚನ್ನ ಸರಿದೂಗಿಸಲಾಗದೆ ಮಾದಕ ವಸ್ತು ಮಾರಾಟಕ್ಕೆ ಮುಂದಾಗಿದ್ದ. ವೀಡ್ ಆಯ್ಲನ್ನ ಮಾರಾಟ ಮಾಡಿ ಫುಲ್ ಟೈಂ ಪೆಡ್ಲರ್ ಆಗಿದ್ದ.

ಇದನ್ನೂ ಓದಿ: ಮಂಗಳೂರಿನಲ್ಲಿ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಮೇಲೆ ಅನ್ಯಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ

ಬೆಂಗಳೂರಿನಲ್ಲೂ ವೀಡ್ ಆಯಿಲ್ ಮಾರಾಟ ಮಾಡಲು ಮುಂದಾಗಿದ್ದ. ಬೆಂಗಳೂರಿನ ಕಮ್ಮನಹಳ್ಳಿ ಬಳಿ ವೀಡ್ ಆಯಿಲ್ ಮಾರಾಟಕ್ಕೆ ಯತ್ನಿಸಿದ್ದು, ಮಾಹಿತಿ ತಿಳಿದ ಬಾಣಸವಾಡಿ ಇನ್ಸ್​ಪೆಕ್ಟರ್ ಸಂತೋಷ್ ಟೀಂನಿಂದ ಬಂಧಿಸಿದ್ದಾರೆ. ಆರೋಪಿ ವಿರುದ್ದ ಬಾಣಸವಾಡಿ ಠಾಣೆಯಲ್ಲಿ NDPS ಕಾಯ್ದೆ ಅಡಿ ಕೇಸ್ ದಾಖಲು ಮಾಡಲಾಗಿದೆ.

ಜೆಸಿಬಿಗೆ ಬೈಕ್ ಡಿಕ್ಕಿಯಾಗಿ ಸುಟ್ಟು ಕರಕಲಾದ ಬೈಕ್, ಸವಾರ ಸಾವು

ಹುಬ್ಬಳ್ಳಿಯ ಕಾರವಾರ ರಸ್ತೆಯ ಇರ್ಫಾನ್ ಐಸ್ ಫ್ಯಾಕ್ಟರಿ‌ ಮುಂದೆ ಭೀಕರ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ತಿರುವಿನಲ್ಲಿ ನಿಂತಿದ್ದ ಜೆಸಿಬಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸುಟ್ಟು ಕರಕಲಾಗಿದ್ದು, ಬೈಕ್ ಸವಾರ ಅದಿಲ್ ಸಿಖಂದರ್ (18) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿನ್ನೆ ಮಧ್ಯಾಹ್ನ ನಡೆದ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಿಂಬದಿ ಸವಾರ ಖಾದಿರ್ ಶೇಖ್ ಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Bengaluru: ಡಬಲ್ ಮರ್ಡರ್ ಪ್ರಕರಣ: ಆರೋಪಿಗಳು ಕಾಂಪೌಂಡ್ ಹಾರುವ ದೃಶ್ಯ ಸೆರೆಹಿಡಿದ ಪಕ್ಕದ ಮನೆಯ ಸಿಸಿ ಕ್ಯಾಮೆರಾ

ಸಹಕಾರಿ ಸಂಘದಲ್ಲಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ

ದಕ್ಷಿಣ ಕನ್ನಡ: ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾವಳಮೂಡುರು ವ್ಯವಸಾಯ ಸಹಕಾರಿ ಸಂಘದಲ್ಲಿ ಲಕ್ಷಾಂತರ ರೂ. ಗೋಲ್ ಮಾಲ್ ಆರೋಪ ಕೇಳಿಬಂದಿದೆ. ಸಹಕಾರಿ ಸಂಘದ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಗ್ರಾಹಕರ ಮಧ್ಯೆ ಹೈಡ್ರಾಮ ನಡೆದಿದೆ. ಗ್ರಾಹಕರ ಹೆಸರಿನಲ್ಲಿ ಸಂಘದ ಕೆಲ ಪದಾಧಿಕಾರಿಗಳು ಸಾಲ ಪಡೆದ ಆರೋಪ ಮಾಡಲಾಗಿದೆ. ಲೋನ್​ಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಗೋಲ್ ಮಾಲ್ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಬ್ಯಾಂಕ್​ಗೆ ಬಂದು ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.