ನೂರಕ್ಕೂ ಹೆಚ್ಚು ಜನರನ್ನು ಕೊಂದ ಬ್ರೆಜಿಲ್​ನ ಪೆಡ್ರೊ ತನ್ನ ಯೂಟ್ಯೂಬ್ ಚ್ಯಾನೆಲ್ ಡಿಸ್ಕ್ರಿಪ್ಷನ್ ನಲ್ಲಿ ‘ನಾನು ರಾಕ್ಷಸನಲ್ಲ‘ ಅಂತ ಬರೆದುಕೊಂಡಿದ್ದಾನೆ!

ಅವರಿಬ್ಬರನ್ನು ಪೊಲೀಸರು ಸ್ಟೇಶನ್ ಗೆ ಕರೆದೊಯ್ಯುವಷ್ಟರಲ್ಲಿ ಪೆಡ್ರೊ ಆ ಮತ್ತೊಬ್ಬ ಅಪರಾಧಿಯನ್ನು ಕೊಂದು ಹಾಕಿದ್ದ. ಇನ್ನೊಮ್ಮೆ ಪತ್ನಿಯನ್ನು ಭೇಟಿಯಾಗಲು ಜೈಲು ನೀಡುತ್ತಿದ್ದ ಸಮಯದಲ್ಲಿ ತನ್ನ ಚಲನವಲನಗಳ ಮೇಲೆ ನಿಗಾ ಇಟ್ಟು ಗೂಢಚರ್ಯೆ ನಡೆಸುತ್ತಿದ್ದ ಜೊತೆ ಕೈದಿಯೊಬ್ಬನನ್ನು ಕೊಂದು ಬಿಟ್ಟಿದ್ದ.

ನೂರಕ್ಕೂ ಹೆಚ್ಚು ಜನರನ್ನು ಕೊಂದ ಬ್ರೆಜಿಲ್​ನ ಪೆಡ್ರೊ ತನ್ನ ಯೂಟ್ಯೂಬ್ ಚ್ಯಾನೆಲ್ ಡಿಸ್ಕ್ರಿಪ್ಷನ್ ನಲ್ಲಿ ‘ನಾನು ರಾಕ್ಷಸನಲ್ಲ‘ ಅಂತ ಬರೆದುಕೊಂಡಿದ್ದಾನೆ!
ಪೆಡ್ರೊ ರಾಡ್ರಿಗ್ಸ್ ಫಿಲ್ಹೋ, ಸರಣಿ ಹಂತಕ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 22, 2022 | 7:53 AM

ಬ್ರೆಜಿಲ್ ನ ಪೆಡ್ರೊ ರಾಡ್ರಿಗ್ಸ್ ಫಿಲ್ಹೋ (Pedro Rodrigues Filho) ಒಬ್ಬ ಸರಣಿ ಹಂತಕ. 71 ಜನರನ್ನು ಕೊಂದಿದಕ್ಕೆ ಆವನಿಗೆ ಶಿಕ್ಷೆಗೊಳಪಡಿಸಲಾಯಿತಾದರೂ ಅವನೇ ಹೇಳಿಕೊಂಡಿರುವ ಹಾಗೆ 100 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನಂತೆ, ಅವರಲ್ಲಿ ಹೆಚ್ಚಿನವರು ಅವನೊಂದಿಗಿದ್ದ ಕಾರಾಗೃಹವಾಸಿಗಳು (inmates). 36 ವರ್ಷಗಳ ಕಾಲ ಅಪರಾಧ ಲೋಕದಲ್ಲಿ ಮೆರೆದ ಪೆಡ್ರೊ ಜನರನ್ನು ನಿರ್ದಯತೆಯಿಂದ ಕೊಲ್ಲುವ ಹೀನ ಕೆಲಸ ಶುರುಮಾಡಿದ್ದು ಹದಿಹರೆಯದಲ್ಲಿ. ‘ಮಾನವರನ್ನು ಕೊಲ್ಲುವ ಹಂಬಲ (urge) ನನ್ನಲ್ಲಿ ಹುಟ್ಟಿಕೊಳ್ಳುತಿತ್ತು’ ಎಂದು ಅವನು ಸೆರೆಮನೆಯಿಂದ ಹೊರಬಂದ ನಂತರ ಹೇಳಿದ್ದಾನೆ. ಪೆಡ್ರೊ ಕೇವಲ 18 ರ ಯುವಕನಾಗಿದ್ದಾಗ ತನ್ನ ಗರ್ಭಿಣಿ ಗೆಳತಿಯನ್ನು ಕೊಂದ ಎದುರಾಳಿ ಗುಂಪಿನ ಸದಸ್ಯರಲ್ಲಿ ಕೆಲವರನ್ನು ಕೊಂದುಹಾಕಿದ. ಅಲ್ಲಿಂದಲೇ ಅವನ ರಕ್ತಪಾತದ ಇತಿಹಾಸ ಶುರುವಾಯಿತು. ಕೊಲೆ ಮತ್ತು ಕೆಲವರಿಗೆ ದೈಹಿಕ ಹಿಂಸೆ ನೀಡಿದ ಅಪರಾಧಗಳನ್ನು ನಡೆಸಿ ಅವನು ಅದೇ ವಯಸ್ಸಿನಲ್ಲಿ ಜೈಲು ಪಾಲಾಗಿದ್ದ.

ಜನ್ಮ ನೀಡಿದವನನ್ನು ಜೈಲಲ್ಲಿ ಕೊಂದ!

ಆದರೆ, ಜನರನ್ನು ಕೊಲ್ಲುವ ಹವ್ಯಾಸ ಅವನಲ್ಲಿ ಆಗಷ್ಟೇ ಆರಂಭವಾಗಿತ್ತು. ಅದಕ್ಕಿಂತ ದೊಡ್ಡ ದೊಡ್ಡ ಅಪರಾಧಗಳನ್ನೆಸಗಲು ಅವನ ಪೀಠಿಕೆ ಹಾಕಿದ್ದ. ನಿಮಗೆ ಆಶ್ಚರ್ಯವಾಗಬಹುದು. ಜೈಲಿನಲ್ಲಿದ್ದಾಗ ಅವನು ತನಗೆ ಜನ್ಮ ನೀಡಿದ ತಂದೆಯನ್ನೇ ಮಚ್ಚಿನಿಂದ ಕೊಚ್ಚಿಹಾಕಿದ್ದ! ತನ್ನ ತಾಯಿಯನ್ನು ಕೊಂದ ಅಪ್ಪನ ಮೇಲೆ ಅವನು ಜೈಲಿನಲ್ಲಿ ಸೇಡು ತೀರಿಸಿಕೊಂಡಿದ್ದ. ಅವನಲ್ಲಿದ್ದ ವಿಕೃತಿ ಹೇಗಿತ್ತೆಂದರೆ, ಅಪ್ಪನ ದೇಹವನ್ನು ಕತ್ತರಿಸಿದ ಬಳಿಕ ನೆಲಕ್ಕೆ ಬಿದ್ದು ಇನ್ನೂ ಮಿಡಿಯುತ್ತಿದ್ದ ಅವನ ಹೃದಯವನ್ನು ಬಾಯಿಂದ ಕಚ್ಚಿದ್ದನಂತೆ!

ಒಂದು ಮೂಲದ ಪ್ರಕಾರ ಅವನು ಸೆರೆಮನೆಯಲ್ಲಿ 47 ಜನರ ಹತ್ಯೆಗೈದಿದ್ದ. ಜೈಲಿನ ಹೊರಗಡೆ ಭಯಾನಕ ಅಪರಾಧಗಳನ್ನು ಅದರಲ್ಲೂ ವಿಶೇಷವಾಗಿ ರೇಪ್ ಮಾಡಿ ಶಿಕ್ಷೆಗೊಳಗಾದವರನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದ.

100 ಕೊಲೆ ಮಾಡಿದರೂ ಬಿಡುಗಡೆ!

ಅಷ್ಟೆಲ್ಲ ಭಯಾನಕ ಚರಿತ್ರೆ ಹೊಂದಿದ್ದಾಗ್ಯೂ ಪೆಡ್ರೊನನ್ನು 2007ರಲ್ಲಿ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬ್ರೆಜಿಲ್ ದೇಶದಲ್ಲಿ ಒಬ್ಬ ಅಪರಾಧಿ ಎಷ್ಟೇ ಘೋರ ಅಪರಾಧಗಳನ್ನೆಸಗಿ ಶಿಕ್ಷೆಗೊಳಗಾದರೂ ಗರಿಷ್ಟ ಪ್ರಮಾಣದ ಶಿಕ್ಷೆ ಅವಧಿಯ ಬಳಿಕ ಅವನನ್ನು ಬಿಡುಗಡೆ ಮಾಡಲಾಗುತ್ತದೆ.

ಈಗ 68-ವರ್ಷ-ವಯಸ್ಸಿನವನಾಗಿರುವ ಪೆಡ್ರೊ ಜೈಲಿನಿಂದ ಹೊರಗಿದ್ದು ತನ್ನದೇ ಅದ ಯೂ ಟ್ಯಬ್ ಚ್ಯಾನೆಲ್ ಹೊಂದಿದ್ದಾನೆ ಮತ್ತು ಅದರಲ್ಲಿ ತನ್ನ ಬದುಕಿನ ಕತೆಯನ್ನು ಹೇಳುತ್ತಿದ್ದಾನೆ.

ಪೆಡ್ರೊನ ಮೊದಲ ಕೊಲೆ!

ಪೆಡ್ರೊ ರಾಡ್ರಿಗ್ಸ್ ಫಿಲ್ಹೋ ಜುಲೈ 17, 1954 ರಂದು ಬ್ರೆಜಿಲ್ ಆಗ್ನೇಯ ಭಾಗದ ರಾಜ್ಯವಾಗಿರುವ ಮಿನಾಸ್ ಗೆರೈಸ್ ನಲ್ಲಿರುವ ಸಂಟಾ ರಿಟಾ ಎಂಬಲ್ಲಿ ಹುಟ್ಟಿದ. ಪ್ರಾಯಶಃ ಅಮ್ಮನ ಹೊಟ್ಟೆಯಲ್ಲಿರುವಾಗಲೇ ಅವನಲ್ಲಿ ಹಿಂಸಾ ಪ್ರವೃತ್ತಿ ಶುರುವಾಗಿಬಿಟ್ಟಿತ್ತು, ಯಾಕೆಂದರೆ ಆಗ ಅವನಮ್ಮನೊಂದಿಗೆ ಜಗಳವಾಡುತ್ತಿದ್ದಾಗ ಅವನಪ್ಪ ಹೊಟ್ಟೆಗೆ ಒದ್ದುಬಿಟ್ಟಿದ್ದ. ಆ ಒದೆತ ಎಷ್ಟು ಗಂಭೀರವಾಗಿತ್ತೆಂದರೆ ಪೆಡ್ರೊನ ತಲೆ ಬುರಡೆಗೆ ಶಾಶ್ವತವಾದ ಪೆಟ್ಟಾಗಿತ್ತು. ಅಪ್ಪನ ಹಿಂಸಾಕೃತ್ಯಗಳನ್ನು ನೋಡುತ್ತಾ ಅವನು ಬೆಳೆದ ಅವನಲ್ಲಿ 13ನೇ ವಯಸ್ಸಿನಲ್ಲೇ ಕೊಲ್ಲುವ ವ್ಯಾಮೋಹ ಹುಟ್ಟಿತ್ತಂತೆ!

ಇದನ್ನೂ ಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ಅಮೆರಿಕದ ಪೊಲೀಸರಿಗೆ ಸವಾಲಾಗಿ ಕಾಡಿದ ‘ಬಾಯ್ ಇನ್ ದಿ ಬಾಕ್ಸ್’ ಪ್ರಕರಣ 65 ವರ್ಷಗಳ ನಂತರವೂ ಇತ್ಯರ್ಥಗೊಂಡಿಲ್ಲ!

ತನ್ನ ಕಸಿನೊಬ್ಬನ ಜೊತೆ ಜಗಳವಾಡಿದ ನಂತರ ಅವನು ಕೊಲ್ಲುವ ಉದ್ದೇಶದಿಂದ ಕಬ್ಬಿನ ರಸ ತೆಗೆಯುವ ಮಶೀನ್ ಅಡಿ ದೂಡಿದ್ದ. ಅದೃಷ್ಟವಶಾತ್ ಕಸಿನ್ ಬದುಕುಳಿದ. ಆದರೆ ಮೊದಲ ಕೊಲೆ ನಡೆಸಲು ಪೆಡ್ರೊ ಬಹಳ ಸಮಯವೇನೂ ಕಾಯಬೇಕಾಗಲಿಲ್ಲ, ಮರುವರ್ಷವೇ ಅವನು ವ್ಯಾಮೋಹವನ್ನು ಸಾಕಾರಗೊಳಿಸಿಕೊಂಡ.

14 ನೇ ವಯಸ್ಸಲ್ಲಿ ಮೊದಲ ಕೊಲೆ!

ಪೆಡ್ರೊ 14-ವರ್ಷದವಾನಾಗಿದ್ದಾಗ ಅವನ ತಂದೆ ತಾನು ಸೆಕ್ಯರಿಟಿ ಗಾರ್ಡ್ ಆಗಿ ಕೆಲಸ ಶಾಲೆಯೊಂದರ ಕಿಚನ್ ನಿಂದ ಆಹಾರ ಸಾಮಗ್ರಿಗಳನ್ನು ಕದ್ದ ಆರೋಪದಲ್ಲಿ ಕೆಲಸದಿಂದ ವಜಾ ಆದ. ತನ್ನಪ್ಪನ್ನು ಕೆಲಸದಿಂದ ವಜಾ ಮಾಡಿದ ವ್ಯಕ್ತಿಯನ್ನು ಪೆಡ್ರೊ ಒಂದು ಶಾಟ್ ಗನ್ ನಿಂದ ಗುಂಡು ಹಾರಿಸಿ ಕೊಲೆ ಮಾಡಿದ. ಅದಾದ ಒಂದು ತಿಂಗಳು ನಂತರ ಅವನು ತನ್ನಪ್ಪನ ಜೊತೆ ಕೆಲಸಮಾಡುತ್ತಿದ್ದ ಇನ್ನೊಬ್ಬ ಸೆಕ್ಯುರಿಟಿ ಗಾರ್ಡನ್ನು, ಅವನೇ ಅಸಲಿ ಕಳ್ಳ ಅಂತ ಭಾವಿಸಿ ಕೊಂದುಹಾಕಿ ಸಾವೋ ಪೌಲೊಗೆ ಪಲಾಯನ ಮಾಡಿದ.

ಅಲ್ಲಿ ಮಾರಿಯಾ ಅಪಾರೆಸಿಡಾ ಒಲಂಪಿಯ ಹೆಸರಿನ ಮಹಿಳೆ ಭೇಟಿಯಾದಾಗ ಅವನು ಮದುವೆಯ ಪ್ರಸ್ತಾಪ ಮಾಡಿದ. ಬದುಕಿನಲ್ಲಿ ಹೆಣ್ಣಿನ ಪ್ರವೇಶವಾದರೂ ಅವನಲ್ಲಿನ ಹಿಂಸಾ ಪ್ರವೃತ್ತಿ ನಿಲ್ಲಲಿಲ್ಲ. ಸ್ಲಮ್ ಪ್ರದೇಶಗಳಿಗೆ ನುಗ್ಗಿ ಜನರನ್ನು ದೋಚುತ್ತಿದ್ದ ಮತ್ತು ಅಲ್ಲೇ ಒಬ್ಬ ಡ್ರಗ್ ಡೀಲರ್ ನನ್ನು ಸಹ ಕೊಂದಿದ್ದ. ಅವನ ಎದುರಾಳಿ ಗ್ಯಾಂಗ್ ಜನ ಅವನ ಗರ್ಭಿಣಿ ಹೆಂಡತಿಯ ಕೊಲೆ ಮಾಡಿದಾಗ ಅವನು ಅವೇಶದಲ್ಲಿ ಹುಚ್ಚನಾಗಿಬಿಟ್ಟ. ಅವನ್ನು ಯಾರು ಕೊಲೆಮಾಡಿದರೆಂದು ತಿಳಿದುಕೊಳ್ಳಲು ಹಲವಾರು ಜನರನ್ನು ಕೊಂದ ಮತ್ತು ಕೆಲವರಿಗೆ ಚಿತ್ರಹಿಂಸೆ ನೀಡಿದ.

ಮದುವೆ ಸಮಾರಂಭದಲ್ಲಿ ಸಾಮೂಹಿಕ ಹತ್ಯೆ!

ಗ್ಯಾಗೊಂದರ ಲೀಡರ್ ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ತನ್ನೊಬ್ಬ ಗೆಳೆಯನೊಂದಿಗೆ ನುಗ್ಗಿದ ಪೆಡ್ರೊ 7 ಜನರನ್ನು ಕೊಂದ ಮತ್ತು 16 ಜನರನ್ನು ತೀವ್ರವಾಗಿ ಗಾಯಗೊಳಿಸಿದ.

ಆಗ ಅವನಿಗೆ ಕೇವಲ 18 ರ ಪ್ರಾಯ!

ಇದನ್ನೂ ಓದಿ:   China Covid Case: ವಿದೇಶ ಪ್ರಯಾಣ ನಿರ್ಬಂಧ ಸೇರಿದಂತೆ ಕೇಂದ್ರ ತೆಗೆದುಕೊಳ್ಳಬಹುದಾದ ಸಂಭಾವ್ಯ ಕ್ರಮಗಳ ಬಗ್ಗೆ ಮಾಹಿತಿ

ಅವನ ತಂದೆ ಪತ್ನಿ ಪೀಡಕನಾಗಿದ್ದ. ಅವಳಿಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧವಿದೆ ಅಂತ ಶಂಕಿಸಿ ಮಚ್ಚಿನಿಂದ ಅವಳನ್ನು ಕೊಚ್ಚಿಹಾಕಿದ್ದ. ಕಾಕತಾಳೀಯವೆಂದರೆ ಪೆಡ್ರೊ ಇದ್ದ ಕಾರಾಗೃಹಕ್ಕೆ ಅವನನ್ನು ಬಂಧಿಯಾಗಿಸಲಾಗಿತ್ತು. ‘ನನ್ನ ತಂದೆಯನ್ನು ಇಟ್ಟಿದ್ದ ಸೆಲ್ ಗೆ ಹೋಗುವ ದಾರಿಯನ್ನು ನಾನು ಶೋಧಿಸಿದ್ದೆ. ನಾನು ಜೀವ ತೆಗೆಯುತ್ತೇನೆಂಬ ಭಯ ನನ್ನ ತಂದೆಯಲ್ಲಿತ್ತು. ಹಾಗಾಗಿ ನಾನು ಜೈಲು ಸೇರಿದ ಬಳಿಕವೇ ಅವನು ನನ್ನಮ್ಮನನ್ನು ಕೊಂದಿದ್ದ,’ ಎಂದು ಪೆಡ್ರೊ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾನೆ.

ಅವನ ಅಮ್ಮನ ಅಂತ್ಯಸಂಸ್ಕಾರ ನಡೆದ ಸ್ಥಳ ಜೈಲಿಗೆ ಹತ್ತಿರದಲ್ಲಿದ್ದುದ್ದರಿಂದ ಅದರಲ್ಲಿ ಪಾಲ್ಗೊಳ್ಳಲು ಅವನಿಗೆ ಅನುಮತಿ ನೀಡಲಾಗಿತ್ತು. ಕೈಕೋಳಗಳಿದ್ದ ಕೈಗಳನ್ನು ಅಮ್ಮನ ಸಮಾಧಿಯ ಮೇಲಿಟ್ಟು ಅವನು ಅವಳ ಸಾವಿನ ಸೇಡು ತೀರಿಸಿಕೊಳ್ಳುವ ಶಪಥ ಮಾಡಿದ್ದ.

ಹಂತಕನ ಬಿಡುಗಡೆ

ತಾನೊಬ್ಬ ಹೀನ ಮತ್ತು ಕ್ರೂರ ಅಪರಾಧಿಯಾಗಿದ್ದರೂ ಪೆಡ್ರೊ ರಾಕ್ಷಸಿ ಪ್ರವೃತ್ತಿ ಪ್ರದರ್ಶಿಸಿ ಜೈಲು ಸೇರುತ್ತಿದ್ದ ಅಪರಾಧಿಗಳನ್ನು ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದ. ಒಮ್ಮೆ ಅವನನ್ನು ಪೊಲೀಸ್ ವ್ಯಾನಲ್ಲಿ ಜೈಲಿಗೆ ಕರೆದೊಯ್ಯುತ್ತಿದ್ದಾಗ ಅದೇ ವ್ಯಾನ್ ನ ಹಿಂಬದಿಯ ಸೀಟಲ್ಲಿ ಕೂತಿದ್ದ ಅಪರಾಧಿಯೊಬ್ಬ ಅತ್ಯಾಚಾರವೆಸಗಿದ ಆರೋಪದಲ್ಲಿ ಬಂಧಿಯಾಗಿದ್ದಾನೆ ಅಂತ ಅವನಿಗೆ ಗೊತ್ತಾಯಿತು.

ಅವರಿಬ್ಬರನ್ನು ಪೊಲೀಸರು ಸ್ಟೇಶನ್ ಗೆ ಕರೆದೊಯ್ಯುವಷ್ಟರಲ್ಲಿ ಪೆಡ್ರೊ ಆ ಮತ್ತೊಬ್ಬ ಅಪರಾಧಿಯನ್ನು ಕೊಂದು ಹಾಕಿದ್ದ. ಇನ್ನೊಮ್ಮೆ ಪತ್ನಿಯನ್ನು ಭೇಟಿಯಾಗಲು ಜೈಲು ನೀಡುತ್ತಿದ್ದ ಸಮಯದಲ್ಲಿ ತನ್ನ ಚಲನವಲನಗಳ ಮೇಲೆ ನಿಗಾ ಇಟ್ಟು ಗೂಢಚರ್ಯೆ ನಡೆಸುತ್ತಿದ್ದ ಜೊತೆ ಕೈದಿಯೊಬ್ಬನನ್ನು ಕೊಂದು ಬಿಟ್ಟಿದ್ದ.

34-ವರ್ಷ ಮಾತ್ರ ಶಿಕ್ಷೆ!

ಅಸಲಿಗೆ ಕೋರ್ಟ್ ಅವನಿಗೆ 130 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿತ್ತು ನಂತರ ಅದನ್ನು 400 ವರ್ಷಗಳಿಗೆ ವಿಸ್ತರಿಸಲಾಯಿತು. ಆದರೆ, ಬ್ರೆಜಿಲ್ ನಲ್ಲಿ ಅಪರಾಧಿಯೊಬ್ಬನಿಗೆ ವಿಧಿಸಬಹುದಾದ ಗರಿಷ್ಟ ಪ್ರಮಾಣದ ಶಿಕ್ಷೆಯೆಂದರೆ 30 ವರ್ಷ ಮಾತ್ರ. ಅಷ್ಟಾಗಿಯೂ ಅವನು 34-ವರ್ಷ ಶಿಕ್ಷೆ ಅನುಭವಿಸಿದ ಬಳಿಕ 2007ರಲ್ಲಿ ಅವನನ್ನು ಬಿಡುಗಡೆ ಮಾಡಲಾಯಿತು.

2020 ರ ಒಂದು ಪಾಡ್ ಕಾಸ್ಟ್ ನಲ್ಲಿ ಪೆಡ್ರೊಗೆ ಮತ್ತೇ ಕೊಲ್ಲುವ ವ್ಯಾಮೋಹ ಹುಟ್ಟಬಹುದಾ ಅಂತ ಕೇಳಿದಾಗ ಅವನು, ‘ಖಂಡಿತ ಇಲ್ಲ, ಯಾರಾದರೂ ನನ್ನ ಪ್ರಾಣ ತೆಗೆಯಲು ಬಂದರೆ ಅಥವಾ ನಾನು ಕುಟುಂಬವೆಂದು ಭಾವಿಸಿ ಪ್ರೀತಿಸುವ ಜನರನ್ನು ಕೊಲ್ಲಲು ಬಂದರೆ ಮಾತ್ರ ನಾನು ಪುನಃ ಮಚ್ಚು ಹಿಡಿಯುತ್ತೇನೆ,’ ಎಂದು ಹೇಳಿದ್ದ.

ತನ್ನ ಯೂಟ್ಯೂಬ್ ಚ್ಯಾನೆಲ್ ಡಿಸ್ಕ್ರಿಪ್ಷನ್ ನಲ್ಲಿ ಅವನು, ‘ನಾನು ರಾಕ್ಷಸನಲ್ಲ’ ಅಂತ ಬರೆದುಕೊಂಡಿದ್ದಾನೆ.

ಮತ್ತಷ್ಟು ಕ್ರೈಮ್ ಕತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ