ಸೆನ್ಸೇಷನಲ್ ಕ್ರೈಮ್ ಕತೆಗಳು: ಅಮೆರಿಕದ ಪೊಲೀಸರಿಗೆ ಸವಾಲಾಗಿ ಕಾಡಿದ ‘ಬಾಯ್ ಇನ್ ದಿ ಬಾಕ್ಸ್’ ಪ್ರಕರಣ 65 ವರ್ಷಗಳ ನಂತರವೂ ಇತ್ಯರ್ಥಗೊಂಡಿಲ್ಲ!
ಆ ಬಾಲಕನ ವಯಸ್ಸು ಸುಮಾರು 6-7 ವರ್ಷಗಳಿರಬಹುದು. ಅವನ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆದಿತ್ತು. ಅವನು ನಿಶಕ್ತನಂತೆ ಕಾಣುತ್ತಿದ್ದ, ಪೌಷ್ಠಿಕ ಆಹಾರ ಸಿಗದ ಕಾರಣ ಅವನ ದೇಹ ಸೊರಗಿತ್ತು ಮತ್ತು ನಿಸ್ತೇಜ ಅನಿಸುತಿತ್ತು. ಬಹಳ ದಿನಗಳವರೆಗೆ ಅರಣ್ಯ ಪ್ರದೇಶದಲ್ಲಿ ದೇಹ ಬಿದ್ದಿದ್ದರಿಂದ ಕಸ, ಮಣ್ಣು ಅದರ ಮೇಲೆ ಶೇಖರಗೊಂಡಿತ್ತು.
ಕ್ರೈಮ್ ಲೋಕಕ್ಕೆ ಸಂಬಂಧಿಸಿದ ಕೆಲವು ಪ್ರಕರಣಗಳೇ ಹಾಗೆ, ದಶಕಗಳು ಉರುಳಿದರೂ ಪೊಲೀಸರಿಗೆ ಅವುಗಳನ್ನು ಬೇಧಿಸುವುದು ಸಾಧ್ಯವಾಗುವುದಿಲ್ಲ. ಸುಮಾರು 60 ವರ್ಷಗಳ ಹಿಂದೆ ಅಮೆರಿಕದಲ್ಲಿ ‘ಬಾಯ್ ಇನ್ ದಿ ಬಾಕ್ಸ್’ (Boy In The Box) ಪ್ರಕರಣ ಬೆಳಕಿಗೆ ಬಂದಿತ್ತು, ಆದರೆ ಇದುವರೆಗೆ ಅದು ಇತ್ಯರ್ಥಗೊಳ್ಳದೆ (unsolved) ಉಳಿದಿದೆ. 1957 ರ ಫೆಬ್ರುವರಿ ತಿಂಗಳು ಮೈ ಥರಗುಟ್ಟುವ ಚಳಿಯಲ್ಲಿ ಒಂದು ದಿನ ಬೆಳಗ್ಗೆ, ಅಮೆರಿಕದ ಫಿಲೆಡೆಲ್ಫಿಯದಲ್ಲಿ (Philadelphia) ವಾಸವಾಗಿದ್ದ ಯುವ ಇಲಿ ಬೇಟೆಗಾರನೊಬ್ಬ (muskrat hunter) ತನ್ನ ಬೇಟೆಗಳನ್ನು ಹುಡುಕುತ್ತಾ ಬೀದಿಗಳನ್ನು ಸುತ್ತುತ್ತಾ ನಗರದ ಹೊರವಲಯದ ಕಾಡು ಪ್ರದೇಶವನ್ನು ಪ್ರವೇಶಿಸಿದ್ದ. ಆಗಲೇ ಅವನಿಗೊಂದು ರಟ್ಟಿನ ಅ ಬಾಕ್ಸ್ ಕಾಣಿಸಿತು. ಅದನ್ನವನು ಓಪನ್ ಮಾಡಿದಾಗ ಆ ನಡುಗುಟ್ಟುವ ಚಳಿಯಲ್ಲೂ ಅವನ ಮೈ ಬೆವರಿತ್ತು. ಬಾಕ್ಸ್ ನಲ್ಲಿ ಅವನು ಕಂಡಿದ್ದು ಚಿಕ್ಕ ಬಾಲಕನೊಬ್ಬನ ನಗ್ನ ಮತ್ತು ವಿರೂಪಗೊಂಡಿದ್ದ ಮೃತದೇಹ!
ಆದರೆ ತಮಾಷೆಯ ಸಂಗತಿ ಏನು ಗೊತ್ತಾ? ತಾನು ಬಾಕ್ಸ್ ನಲ್ಲಿ ಕಂಡ ಬಾಲಕನ ದೇಹದ ಬಗ್ಗೆ ಅವನು ಯಾರಿಗೂ ಹೇಳಲಿಲ್ಲ. ಇಲಿಗಳನ್ನು ಬೇಟೆಯಾಡುವುದು ಅಮೆರಿಕದಲ್ಲಿ ನಿಷಿದ್ಧ ಮತ್ತು ಕಾನೂನುಬಾಹಿರವಾಗಿತ್ತು. ಪೊಲೀಸರಿಗೆ ಗೊತ್ತಾದರೆ ತನ್ನ ಅಕ್ರಮ ಗೊತ್ತಾಗಿಬಿಡುತ್ತದೆ ಅಂತ ಹೆದರಿ ಅವನು ವಿಷಯವನ್ನು ರಹಸ್ಯವಾಗಿಟ್ಟ.
ಮತ್ತೊಬ್ಬ ವ್ಯಕ್ತಿ ಅ ಬಾಕ್ಸನ್ನು ನೋಡುವರೆಗೆ ಅದು ರಹಸ್ಯವಾಗೇ ಉಳಿದಿತ್ತು. ಎರಡನೇ ವ್ಯಕ್ತಿ ಅದನ್ನು ನೋಡಿದಾಗ ಬಾಕ್ಸ್ ನಲ್ಲಿದ್ದ ಮಗುವಿನ ಶವ ಕೊಳೆತು ನಾರಲಾರಂಭಿಸಿತ್ತು.
ಆ ಬಾಲಕನ ವಯಸ್ಸು ಸುಮಾರು 6-7 ವರ್ಷಗಳಿರಬಹುದು. ಅವನ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆದಿತ್ತು. ಅವನು ನಿಶಕ್ತನಂತೆ ಕಾಣುತ್ತಿದ್ದ, ಪೌಷ್ಠಿಕ ಆಹಾರ ಸಿಗದ ಕಾರಣ ಅವನ ದೇಹ ಸೊರಗಿತ್ತು ಮತ್ತು ನಿಸ್ತೇಜ ಅನಿಸುತಿತ್ತು. ಬಹಳ ದಿನಗಳವರೆಗೆ ಅರಣ್ಯ ಪ್ರದೇಶದಲ್ಲಿ ದೇಹ ಬಿದ್ದಿದ್ದರಿಂದ ಕಸ, ಮಣ್ಣು ಅದರ ಮೇಲೆ ಶೇಖರಗೊಂಡಿತ್ತು.
ಸಾಯುವ ಮೊದಲು ಅವನ ತಲೆಗೂದನ್ನು ಕ್ಷೌರ ಮಾಡಲಾಗಿತ್ತು. ಅವನ ದೇಹದ ಮೇಲೆ ಕತ್ತರಿಸಿದ ಕೂದಲು ಕಂಡಿದ್ದವು. ದೇಹದ ಮೇಲೆಲ್ಲ ಅದರಲ್ಲೂ ವಿಶೇಷವಾಗಿ ಪಾದ, ತೊಡೆಸಂದಿ, ಮತ್ತು ಗದ್ದದ ಮೇಲೆಗ ಗಾಯದ ಗುರುತುಗಳಿದ್ದವು.
ಕೊಲೆಗಡಕ/ರು ಅವನ ದೇಹವನ್ನು ಬಾಕ್ಸ್ ನಲ್ಲಿರಿಸುವ ಮೊದಲು ಬ್ಲ್ಯಾಂಕೆಟ್ ಒಂದರಲ್ಲಿ ಸುತ್ತಿದ್ದರಲ್ಲಿ ಮಾತ್ರ ಕರುಣೆಯ ಅಂಶ ಕಾಣಿಸುತಿತ್ತು ಅನ್ನೋದನ್ನ ಬಿಟ್ಟರೆ ಸಾಯುವ ಮೊದಲು ಅವನನ್ನು ಬಹಳ ಕ್ರೂರವಾಗಿ ನಡೆಸಿಕೊಳ್ಳಲಾಗಿತ್ತು.
ಏನಾದರೂ ಸುಳಿವು ಸಿಕ್ಕೀತು ಎಂಬ ನಿರೀಕ್ಷೆಯೊಂದಿಗೆ ಪೊಲೀಸರು ಮೃತಬಾಲಕನ ಫಿಂಗ್ ಪ್ರಿಂಟ್ ಗಳನ್ನು ತಗೆದುಕೊಂಡರು. ಅದರೆ ಅದರಿಂದ ಉಪಯೋಗವಾಗಲಿಲ್ಲ. ಹಲವಾರು ಪೊಲೀಸರನ್ನು ಸುತ್ತಮುತ್ತಲ ಪ್ರದೇಶಗಳಿಗೆ ಹೋಗಿ ಯಾರ ಮನೆಯಿಂದಾದರೂ ಮಗು ಕಣ್ಮರೆಯಾಗಿದೆಯಾ ಅಂತ ಪತ್ತೆ ಮಾಡಲು ಕಳಿಸಲಾಯಿತು. ಒಂದೇ ಒಂದು ಕುಟುಂಬ ದೂರು ಹೇಳಲಿಲ್ಲ. ನಮ್ಮ ಮಗು ನಾಪತ್ತೆಯಾಗಿದೆಯಂತ ತಂದೆತಾಯಿಗಳ್ಯಾರೂ ಸುತ್ತಮುತ್ತಲ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಿರಲಿಲ್ಲ.
ಪೊಲೀಸರು ಮತ್ತು ತನಿಖಾಧಿಕಾರಿಗಳು ಪ್ರಕರಣವನ್ನು ಸಾಲ್ವ್ ಮಾಡಲು ಶತಪ್ರಯತ್ನ ಪಟ್ಟರೂ ಸಾಧ್ಯವಾಗದೆ ಹೋಯಿತು. ಬಾಕ್ಸ್ ನಲ್ಲಿ ಏನಾದರೂ ಸುಳಿವು ಸಿಕ್ಕಬಹುದು ಅಥವಾ ಅವನ ದೇಹಕ್ಕೆ ಸುತ್ತಿದ್ದ ಬ್ಲ್ಯಾಂಕೆಟ್ ನಲ್ಲಿ ಕೊಲೆಗಾರ ಯಾವುದಾದರೂ ಕುರುಹು ಬಿಟ್ಟಿರಬಹುದು ಅವುಗಳನ್ನು ಕೂಲಂಕಶವಾಗಿ ಪರಿಶೀಲನೆ ನಡೆಸಿದರು. ಎಲ್ಲ ಕಡೆ ಅವರಿಗೆ ನಿರಾಸೆಯೇ ಕಾದಿತ್ತು.
ಅಮೆರಿಕ ಅತ್ಯಂತ ಪ್ರಸಿದ್ಧವೆನಿಸಿರುವ ‘ಬಾಯ್ ಇನ್ ದಿ ಬಾಕ್ಸ್’ ಪ್ರಕರಣ 65 ವರ್ಷಗಳ ನಂತರವೂ ಇತ್ಯರ್ಥಗೊಂಡಿಲ್ಲ. ಬ್ಲ್ಯಾಂಕೆಟ್ ನಲ್ಲಿ ಸುತ್ತಿದ ಪುಟ್ಟ ಬಾಲಕನ ದೇಹ ಸಿಕ್ಕ ವಿಷಯ ಮಾತ್ರ ಜಗತ್ತಿಗೆ ಗೊತ್ತಾಯಿತು.
ಆದರೆ ಆ ಬಾಲಕ ಯಾರು, ಅವನ ತಂದೆ ತಾಯಿಗಳು ಯಾರು, ಅವನಿಗೆ ಅಣ್ಣ-ತಮ್ಮ, ಅಕ್ಕ-ತಂಗಿ ಯಾರೂ ಇರಲಿಲ್ವಾ ಅಂತ ಇವತ್ತಿನವರೆಗೆ ಗೊತ್ತಾಗಿಲ್ಲ. ಮತ್ತೂ ದುರಂತವೆಂದರೆ, ‘ಅಮೆರಿಕದ ಅಪರಿಚಿತ ಮಗುವಿನ’ ಹೆಸರು ಕೂಡ ಗೊತ್ತಾಗಲಿಲ್ಲ.