ಆನ್ಲೈನ್ನಲ್ಲಿ ಹಣ ಕಳೆದುಕೊಂಡ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ, ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣು
Suicide: ಬೀದರದಲ್ಲಿ ಉಪನ್ಯಾಸಕಿಯೊಬ್ಬರು ಆನ್ಲೈನ್ನಲ್ಲಿ ಹಣ ಕಳೆದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನ ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣಾಗಿರುವ ದಾರುಣ ಘಟನೆಗಳು ನಡೆದಿವೆ.
ಬೀದರ್/ಬೆಂಗಳೂರು: ಬೀದರದಲ್ಲಿ ಉಪನ್ಯಾಸಕಿಯೊಬ್ಬರು ಆನ್ಲೈನ್ನಲ್ಲಿ ಹಣ ಕಳೆದುಕೊಂಡು (online fraud) ಬಾವಿಗೆ ಹಾರಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾರೆ. ಇನ್ನು ಬೆಂಗಳೂರಿನ (Bangalore) ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣಾಗಿರುವ ದಾರುಣ ಘಟನೆಗಳು ನಡೆದಿವೆ. ಆನ್ಲೈನ್ನಲ್ಲಿ ಹಣ ಕಳೆದುಕೊಂಡ ಉಪನ್ಯಾಸಕಿ ಆರತಿ ಕನಾಟೆ (28) ಬೀದರ್ (bidar) ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಬಾವಿಗೆ ಹಾರಿ ಅಸುನೀಗಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಆರತಿ ಕನಾಟೆ ಅವರು ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಗೆ 2.5 ಲಕ್ಷ ರೂ ಹಣ ನೀಡಿದ್ದರು. ಉಪನ್ಯಾಸಕಿ ಆರತಿ ಹಂತ ಹಂತವಾಗಿ ಒಟ್ಟು 2.5 ಲಕ್ಷ ಹಣ ನೀಡಿದ್ದರು. ಆದರೆ ಮುಂದೆ, ಮೋಸ ಹೋಗಿರುವುದು ಗೊತ್ತಾಗಿ ಬೇಸರದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಕಳೆದ ನಾಲ್ಕು ದಿನಗಳ ಹಿಂದೆ ಡೆತ್ನೋಟ್ ಬರೆದಿಟ್ಟು ಆರತಿ ಸಾವನ್ನಪ್ಪಿದ್ದಾರೆ. ಬಸವಕಲ್ಯಾಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣು:
ಪೋಷಕರು ಬೈದಿದ್ದಕ್ಕೆ ಮನನೊಂದು ಬಾಲಕ ನೇಣಿಗೆ ಶರಣಾಗಿದ್ದಾನೆ. ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 7ನೇ ತರಗತಿ ವಿದ್ಯಾರ್ಥಿ ಸಾಯಿಕುಮಾರ್ (13) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಮನೆಯಲ್ಲಿ ಕೆಲಸ ಮಾಡದಿದ್ದಕ್ಕೆ ಪೋಷಕರು ಬೈದಿದ್ದರು. ಸಾಯಿಕುಮಾರ್, ಮನೆಯ ಟೆರಸ್ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿನ್ನೆ ಸಂಜೆ 7 ಗಂಟೆಗೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹ ಈಗ ಅಂಬೇಡ್ಕರ್ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತ ಮಾಡಲಾಗುವುದು.
Also Read: ದೇವೇಗೌಡರನ್ನ ಹಿಂದಿನ ರಾತ್ರಿ ಕಾಟಾಚಾರಕ್ಕೆ ಕರೆದರು -ಬಿಜೆಪಿ ಸಂಸ್ಕಾರ, ಶಿಷ್ಟಾಚಾರ ಇದೇನಾ? ಜೆಡಿಎಸ್ ಮತ್ತೆ ಟ್ವೀಟ್