ಮುಂಬೈ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನಿಂದ ಬರೋಬ್ಬರಿ 35 ಕೋಟಿ ರೂ. ಮೌಲ್ಯದ ಹೆರಾಯಿನ್ ಸೀಜ್

ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮುಂಬೈನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ 35 ಕೋಟಿ ರೂ. ಮೌಲ್ಯದ 4.98 ಕೆಜಿ ಹೆರಾಯಿನ್‌ ಸೀಜ್ ಮಾಡಿದ್ದಾರೆ.

ಮುಂಬೈ  ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನಿಂದ ಬರೋಬ್ಬರಿ 35 ಕೋಟಿ ರೂ.  ಮೌಲ್ಯದ ಹೆರಾಯಿನ್ ಸೀಜ್
heroin seized In Mumbai Airport
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Nov 11, 2022 | 7:57 PM

ಮುಂಬೈ: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 35 ಕೋಟಿ ರೂ. ಮೌಲ್ಯದ 4.98 ಕೆಜಿ ಹೆರಾಯಿನ್‌ ಸಾಗಿಸುತ್ತಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ.

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳಿಂದ ಇಂದು(ಶುಕ್ರವಾರ) ವಿದೇಶಿ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ಬಂಧಿತ ಪ್ರಯಾಣಿಕನಿಂದ 35 ಕೋಟಿ ರೂ. ಮೌಲ್ಯದ 4.98 ಕೆ.ಜಿ ಡ್ರಗ್ಸ್‌ ಜಪ್ತಿ ಮಾಡಿದ್ದಾರೆ.

ನೈರೋಬಿ (ಕೀನ್ಯಾ)ದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅನುಮಾನದ ಮೇಲೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಅಡ್ಡಗಟ್ಟಿ ಪರಿಶೀಲಿಸಿದ್ದಾರೆ. ಆ ವೇಳೆ ಟ್ರಾಲಿ ಬ್ಯಾಗ್‌ನಲ್ಲಿ 4.98 ಕೆಜಿ ಆಫ್-ವೈಟ್ ಕಲರ್ ಪೌಡರ್ ಸಿಕ್ಕಿದ್ದು, ಅದರನ್ನು ಪರೀಕ್ಷೆಗೊಳಪಡಿಸಿದಾಗ ಹೆರಾಯಿನ್ ಎಂದು ಗೊತ್ತಾಗಿದೆ.