ಹದಿಹರೆಯದ ತಮ್ಮ ಮಗಳನ್ನು ಅಪಹರಿಸಿ ಕೊಂದವರು ಯಾರೆಂದು ಗೊತ್ತಾಗದೆ ಅವಳ ಅಪ್ಪ-ಅಮ್ಮ ಪ್ರಾಣಬಿಟ್ಟರು!

ಫೋಟೋ ಸಿಕ್ಕ ಒಂದು ವರ್ಷದ ನಂತರ ಅಂದರೆ 1990 ರಲ್ಲಿ ಮೈಕೆಲ್ ಹೆನ್ಲೀಯ ದೇಹ ಜುನಿ ಪರ್ವತ ಪ್ರದೇಶಗಳಲ್ಲಿ ಸಿಕ್ಕಿತು. ಅದೇ ಸ್ಥಳದಲ್ಲಿ ಅವನ್ನು ತನ್ನ ಡ್ಯಾಡಿಯೊಂದಿಗೆ ಬೇಟೆಯಾಡಲು ಹೋಗಿದ್ದ. ಅವರಿಬ್ಬರನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂಬ ವಾದಕ್ಕೆ ಅಲ್ಲಿಗೆ ಪೂರ್ಣ ವಿರಾಮ ಬಿದ್ದಿತ್ತು.

ಹದಿಹರೆಯದ ತಮ್ಮ ಮಗಳನ್ನು ಅಪಹರಿಸಿ ಕೊಂದವರು ಯಾರೆಂದು ಗೊತ್ತಾಗದೆ ಅವಳ ಅಪ್ಪ-ಅಮ್ಮ ಪ್ರಾಣಬಿಟ್ಟರು!
ತಾರಾ ಕ್ಯಾಲಿಕೊ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 12, 2022 | 8:04 AM

1988ರ ಸೆಪ್ಟೆಂಬರ್ ತಿಂಗಳ ಒಂದು ದಿನ ತಾರಾ ಕ್ಯಾಲಿಕೊ (Tara Calico) ಹೆಸರಿನ ಹದಿಹರೆಯದ ಹುಡುಗಿ ತನ್ನಮ್ಮನ ಬೈಸಿಕಲ್ ತೆಗೆದುಕೊಂಡು ರೈಡ್ ಗೆ ಅಂತ ಹೊರಟಳು. ಹೊರಡುವ ಮೊದಲು ತನ್ನಮ್ಮನಿಗೆ, ಸೈಕಲ್ ಏನಾದರೂ ಪಂಕ್ಚರ್ ಆದರೆ ತನ್ನನ್ನು ಪಿಕಪ್ ಮಾಡಲು ಬರಬೇಕು, ಯಾಕೆಂದರೆ ನಾನು ಟೆನಿಸ್ (Tennis) ಅಡಲು ಹೋಗಬೇಕಿದೆ ಎಂದು ಹೇಳಿದ್ದಳು. ಆದರೆ, ತಾರಾ ಯಾವತ್ತೂ ವಾಪಸ್ಸು ಬರಲಿಲ್ಲ! ಅವಳ ಮನೆಯವರು ಫ್ಲೋರಿಡಾದ (Florida) ಮೂಲೆಮೂಲೆಗಳಲ್ಲಿ ಹುಡುಕಾಡಿದರು, ಹುಡುಕಾಡಿಸಿದರು. ಅವಳೆಲ್ಲೂ ಪತ್ತೆಯಾಗಲಿಲ್ಲ. ಸುಮಾರು ಒಂದು ವರ್ಷದ ನಂತರ ಒಬ್ಬ ಯುವತಿ ಮತ್ತು ಕಾಣೆಯಾಗಿದ್ದ ಹುಡುಗನೊಬ್ಬನ ಉಸಿರುಗಟ್ಟಿಸಿ ಸಾಯಿಸಿದ ದೇಹಗಳ ಫೊಟೋಗಳು ಲಭ್ಯವಾದವು.

ಫ್ಲೋರಿಡಾದ ಜ್ಯೂನಿಯರ್ ಫುಡ್ ಸ್ಟೋರ್ ನ ಪಾರ್ಕಿಂಗ್ ಲಾಟ್ ನಲ್ಲಿ ಫೋಟೋಗಳು ಪತ್ತೆಯಾಗಿದ್ದವು. ಏಪ್ರಿಲ್ 1988 ರಲ್ಲೇ, ತಾರಾ ಕ್ಯಾಲಿಕೊ ವಾಸವಾಗಿದ್ದ ಪ್ರದೇಶದಲ್ಲಿಯೇ ವಾಸವಾಗಿದ್ದ 9-ವರ್ಷ-ವಯಸ್ಸಿನ ಮೈಕೆಲ್ ಹೆನ್ಲೀ ತನ್ನ ಡ್ಯಾಡಿಯ ಜೊತೆ ಟರ್ಕಿ ಕೋಳಿಗಳ ಬೇಟೆಗೆ ಹೋದವನು ಕಾಣೆಯಾಗಿದ್ದ. ಅವರಿಬ್ಬರು ವಾಹನವೊಂದರ ಹಿಂಭಾಗದಲ್ಲಿದ್ದಂತೆ ಕಂಡರು. ಯುವತಿಯ ಪಕ್ಕದಲ್ಲಿ ತಾರಾಳ ನೆಚ್ಚಿನ ಲೇಖಕರಾದ ವಿ ಸಿ ಆಂಡ್ರ್ಯೂಸ್ ಬರೆದ ಪುಸ್ತಕ ಕಾಣಿಸಿತು.

ತಾರಾಳ ಅಮ್ಮ ಅದು ತನ್ನ ಮಗಳೇ ಅಂತ ನಂಬಲು ತಯಾರಿರಲಿಲ್ಲ, ಅದರೆ ಫೋಟೋದಲ್ಲಿದ್ದ ಯುವತಿಯ ಮುಖದ ಮೇಲಿದ್ದ ಮಚ್ಚೆ ತಾರಾಳ ಮುಖದ ಮೇಲಿದ್ದ ಜಾಗದಲ್ಲೇ ಇತ್ತು. ಅಷ್ಟಾಗಿಯೂ, ತಾರಾಳ ಅಮ್ಮ ಮತ್ತು ಹಲವಾರು ತಜ್ಞರು ಪೋಟೋದಲ್ಲಿದ್ದ ಯುವತಿಯೇ ತಾರಾ ಅಂತ ಹೇಳಲು ಪುರಾವೆ ಸಾಕಾಗುವುದಿಲ್ಲ ಅಂತ ಹೇಳಿದರು.

ಫೋಟೋ ಸಿಕ್ಕ ಒಂದು ವರ್ಷದ ನಂತರ ಅಂದರೆ 1990 ರಲ್ಲಿ ಮೈಕೆಲ್ ಹೆನ್ಲೀಯ ದೇಹ ಜುನಿ ಪರ್ವತ ಪ್ರದೇಶಗಳಲ್ಲಿ ಸಿಕ್ಕಿತು. ಅದೇ ಸ್ಥಳದಲ್ಲಿ ಅವನ್ನು ತನ್ನ ಡ್ಯಾಡಿಯೊಂದಿಗೆ ಬೇಟೆಯಾಡಲು ಹೋಗಿದ್ದ. ಅವರಿಬ್ಬರನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂಬ ವಾದಕ್ಕೆ ಅಲ್ಲಿಗೆ ಪೂರ್ಣ ವಿರಾಮ ಬಿದ್ದಿತ್ತು. ಅದಾದ ಮೇಲೆ ಪ್ರಕರಣವನ್ನು ಫ್ಲೋರಿಡಾ ಎಫ್ ಬಿ ಐಗೆ ವರ್ಗಾಯಿಸಲಾಯಿತು.

ಆದರೆ, ತಾರಾ ಕ್ಯಾಲಿಕೊಳ ತಂದೆತಾಯಿಗಳಿಗೆ ಮಾತ್ರ ತಮ್ಮ ಮಗಳನ್ನು ಯಾರು ಅಪಹರಿಸಿ ಕೊಂದರು ಅನ್ನೋದು ಸಾಯುವವರೆಗೆ ಗೊತ್ತಾಗಲಿಲ್ಲ.

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್