AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಕುಡುಕ ತಂದೆಯ ಹುಚ್ಚಾಟಕ್ಕೆ ಆಸ್ಪತ್ರೆ ಸೇರಿದ ಮಗ

ಕುಡುಕ ತಂದೆಯ ಹುಚ್ಚಾಟಕ್ಕೆ ಮಗ ಆಸ್ಪತ್ರೆಗೆ ದಾಖಲಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಲ್ಲೆ ಮಾಡಲು ಮಚ್ಚನ್ನು ಕೋಲಾರದಿಂದಲೇ ತಂದಿದ್ದನಂತೆ ಪಾಪಿ ತಂದೆ.

Bengaluru: ಕುಡುಕ ತಂದೆಯ ಹುಚ್ಚಾಟಕ್ಕೆ ಆಸ್ಪತ್ರೆ ಸೇರಿದ ಮಗ
ಆರೋಪಿ ವೆಂಕಟರಾಮ ರೆಡ್ಡಿ ಮತ್ತು ಹಲ್ಲೆಗೊಳಗಾದ ಚಂದ್ರಶೇಖರ್ ರೆಡ್ಡಿ
TV9 Web
| Edited By: Rakesh Nayak Manchi|

Updated on: Dec 22, 2022 | 8:40 AM

Share

ಬೆಂಗಳೂರು: ಕುಡುಕ ತಂದೆಯ ಹುಚ್ಚಾಟಕ್ಕೆ ಮಗ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಮಹದೇವಪುರದ ರಂಗನಾಥ ಲೇಔಟ್​ನಲ್ಲಿ ನಡೆದಿದೆ. ಕುಡಿತದ ಚಟ ಹೊಂದಿದ್ದ ವೆಂಕಟರಾಮ ರೆಡ್ಡಿ ನಿತ್ಯ ಹಣಕ್ಕಾಗಿ ಮಗನಲ್ಲಿ ಪೀಡಿಸುತ್ತಿದ್ದನು. ಮಗ ನಿರಾಕರಿಸಿದಾಗ ಮಚ್ಚಿನಿಂದ ಮಗನ ತಲೆಗೆ ಹಲ್ಲೆ (Assault) ನಡೆಸಿದ್ದಾನೆ. ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ಮಗನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಲಾರದ ಕಾಮಸಂದ್ರದ ನಿವಾಸಿ ವೆಂಕಟರಾಮ ರೆಡ್ಡಿ ತೀವ್ರ ಕುಡಿತದ ಚಟಕ್ಕೆ ಬಿದ್ದಿದ್ದನು. ಅಲ್ಲದೆ ತನ್ನ ಪತ್ನಿ ಹಾಗೂ ಮಗ ಚಂದ್ರಶೇಖರ್ ರೆಡ್ಡಿಗೆ ವಿಪರೀತ ಕಾಟ ಕೊಡುತ್ತಿದ್ದನು. ಇದರಿಂದ ಬೇಸತ್ತ ತಾಯಿ ಮತ್ತು ಮಗ ಕೋಲಾರದಿಂದ ಬೆಂಗಳೂರಿನ ಮಹದೇವಪುರದ ರಂಗನಾಥ ಲೇಔಟ್​ಗೆ ಶಿಫ್ಟ್​ ಆಗಿದ್ದರು. ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ತಾಯಿ ಮಗ ಸುಖವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಕುಡುಕ ತಂದೆ ಇಲ್ಲಿಗೂ ಬಂದು ಕಾಟ ಕೊಡಲು ಆರಂಭಿಸಿದ್ದಾನೆ.

ಇದನ್ನೂ ಓದಿ: ನೂರಕ್ಕೂ ಹೆಚ್ಚು ಜನರನ್ನು ಕೊಂದ ಬ್ರೆಜಿಲ್​ನ ಪೆಡ್ರೊ ತನ್ನ ಯೂಟ್ಯೂಬ್ ಚ್ಯಾನೆಲ್ ಡಿಸ್ಕ್ರಿಪ್ಷನ್ ನಲ್ಲಿ ‘ನಾನು ರಾಕ್ಷಸನಲ್ಲ‘ ಅಂತ ಬರೆದುಕೊಂಡಿದ್ದಾನೆ!

ಮಹದೇವಪುರಕ್ಕೆ ಆಗಮಿಸಿದ ವೆಂಕಟರಾಮ, ಪತ್ನಿ ಹಾಗೂ ಮಗನಿದ್ದ ಮನೆ ಕಡೆ ಬಂದಿದ್ದಾನೆ. ಬರುವಾಗ ಕೋಲಾರದಿಂದ ಮಚ್ಚು ಕೂಡ ತೆಗೆದುಕೊಂಡೇ ಬಂದಿದ್ದಾನೆ. ನಂತರ ಮದ್ಯ ಖರೀದಿಸಲು ಕಾಸು ಕೊಡುವಂತೆ ಪೀಡಿಸಲು ಆರಂಭಿಸಿದ್ದಾನೆ. ಡಿಸೆಂಬರ್ 17ರಂದು ಮನೆಯ ಬಳಿ ಬಂದಾಗಲೂ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಮಗ ಕೊಡಲ್ಲ ಎಂದಿದ್ದಕ್ಕೆ ಕೋಪದಿಂದ ಮಚ್ಚಿನಿಂದ ತಲಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!