ಉಡುಪಿ, ಸೆ.05: ರಾಷ್ಟ್ರಮಟ್ಟದ ಬಾಕ್ಸಿಂಗ್ (Boxing) ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ (Udupi) ಜಿಲ್ಲೆಯ ಮಲ್ಪೆ ಸಮೀಪದ ಶಾಂತಿನಗರದಲ್ಲಿ ನಡೆದಿದೆ. ಶಾಂತಿನಗರ ನಿವಾಸಿ ವಿರಾಜ್ ಮೆಂಡನ್ (29) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವಿರಾಜ್, ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿದ್ದ. ಇಂದು ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ರಾಯಚೂರು: ಕೆಲವೊಮ್ಮೆ ನಮಗೆ ಗೊತ್ತಿದ್ದೂ, ಗೊತ್ತಲ್ಲದೆಯೋ ಕೆಲವೊಂದು ಅವಘಡ ನಡೆಯುತ್ತದೆ. ಅದರಂತೆ ಇದೀಗ ಪತ್ನಿ ಜೊತೆ ಜಗಳವಾಡಿದ ಪತಿ, ಮಗುವನ್ನು ಕರೆದೊಯ್ಯುವಾಗ, ಮಗು ಅಳಲು ಪ್ರಾರಂಭಿಸಿದೆ. ಇದರಿಂದ ಮೂಗು, ಬಾಯಿ ಮುಚ್ಚಿ 14 ತಿಂಗಳ ಹಸುಗೂಸನ್ನು ಕರೆದೊಯ್ಯುವ ವೇಳೆ ಉಸಿರು ಗಟ್ಟಿ ಮಗು ಕೊನೆಯುಸಿರೆಳೆದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕನಸಾವಿ ಗ್ರಾಮದಲ್ಲಿ ನಡೆದಿದೆ. ಅಭಿನವ, ಮೃತ 14 ತಿಂಗಳ ಹಸುಗೂಸು.
ಇದನ್ನೂ ಓದಿ:ಚನ್ನಪಟ್ಟಣ: ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ ಸಾಲದ ಏಜೆಂಟ್, ನೊಂದ ಪತಿ ಆತ್ಮಹತ್ಯೆಗೆ ಶರಣು
ಇನ್ನು ಕೊಲೆ ಆರೋಪದಡಿ ತಂದೆ ಮಹಾಂತೇಶ್ನ್ನು ಮುದಗಲ್ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಜೊತೆ ಜಗಳವಾಡಿದ್ದ ಪತಿ ಮಹಾಂತೇಶ್. ಈ ಹಿನ್ನಲೆ ಇತ್ತೀಚೆಗೆ ಮಗು ಜೊತೆ ಪತ್ನಿ ತವರು ಮನೆ ಕನಸಾವಿ ಗ್ರಾಮಕ್ಕೆ ಹೋಗಿದ್ದಳು. ಬಾಗಲಕೋಟೆಯ ಇಳಕಲ್‌ನಿಂದ ಪತ್ನಿ ಊರಿಗೆ ಹೋಗಿದ್ದ ಪತಿ, ಈ ವೇಳೆ ಪತ್ನಿ ಜೊತೆ ಮತ್ತೆ ಜಗಳವಾಡಿ, ಮಗುವನ್ನು ಊರಿಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಅಳುತ್ತಿದ್ದ ಮಗುವಿನ ಬಾಯಿ, ಮೂಗನ್ನು ಮುಚ್ಚಿದ್ದಾಗ ಈ ದುರ್ಘಟನೆ ನಡೆದಿದೆ. ನಂತರ ಮಗು ಮೃತಪಟ್ಟ ಭಯದಲ್ಲಿ ಕಲ್ಲುಗಳ ಒಳಗೆ ಮಗು ಶವವಿಟ್ಟು ಆರೋಪಿ ತಂದೆ ಹೋಗಿದ್ದನು. ನಿನ್ನೆ ರಾತ್ರಿ ಘಟನೆ ಬೆಳಕಿಗೆ ಬಂದ ಹಿನ್ನಲೆ ಇಂದು(ಸೆ.05) ಆರೋಪಿ ಮಹಾಂತೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ