ಉಡುಪಿಯಲ್ಲಿ ಅಪಘಾತ; ಕಾರನ್ನು ಟಿಪ್ಪರ್ ಎಳೆದೊಯ್ಯುತ್ತಿರುವ ಭಯಾನಕ ವಿಡಿಯೋ ವೈರಲ್
ಉಡುಪಿಯಲ್ಲಿ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಉಡುಪಿ, ಜುಲೈ 17: ಸಾಗರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಕಾರ್ ಮತ್ತು ಬೆಳ್ಮಣ್ಣಿನಿಂದ ಬೈಕಂಪಾಡಿ ಪ್ರದೇಶಕ್ಕೆ ಹೋಗುತ್ತಿದ್ದ ಟಿಪ್ಪರ್ ನಡುವೆ ಅಪಘಾತ (Accident) ಸಂಭವಿಸಿದೆ. ಹಿಂಭಾಕಕ್ಕೆ ಡಿಕ್ಕಿ ಹೊಡೆದ ವಿಚಾರ ತಿಳಿಯುತ್ತಿದ್ದಂತೆ ಚಾಲಕ ಟಿಪ್ಪರ್ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ. ಆದರೆ ಕಾರು ಟಿಪ್ಪರ್ ಹಿಂಭಾಗದಲ್ಲಿ ಸಿಲುಕಿರುವ ವಿಚಾರ ಚಾಲಕನಿಗೆ ತಿಳಿದಿಲ್ಲ. ಸಾರ್ವಜನಿಕರು ಕೂಡ ಟಿಪ್ಪರ್ ನಿಲ್ಲಿಸಲು ಬೆನ್ನತ್ತಿದ್ದಾರೆ. ಆದರೆ ಹೊಡೆತ ಬೀಳಬಹುದೆಂಬ ಭಯದಿಂದ ಟಿಪ್ಪರ್ ಚಾಲಕ ನಿಲ್ಲಿಸದೆ ಕಾರನ್ನು ಕಿಲೋಮೀಟರ್ ದೂರದವರೆಗೆ ಎಳೆದೊಯ್ದಿದ್ದಾನೆ. ಕೊನೆಗೆ ಸಾರ್ವಜನಿಕರು ಟಿಪ್ಪರ್ ನಿಲ್ಲಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಟಿಪ್ಪರನ್ನು ವಶಕ್ಕೆ ಪಡೆದ ಪಡುಬಿದ್ರಿ ಪೊಲೀಸರು, ಗಾಯಾಳುಗಳಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ