ಉಡುಪಿ, ಮಾ.14: ತನ್ನ ಸ್ವಂತ ಬಸ್ ಡಿಕ್ಕಿ (Bus Accident) ಹೊಡೆದು ಮಾಲೀಕ ಮೃತಪಟ್ಟ ದಾರುಣ ಘಟನೆ ಉಡುಪಿ (Udupi) ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ದಯಾನಂದ ಶೆಟ್ಟಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ವರದಿಗಳ ಪ್ರಕಾರ, ದಯಾನಂದ ಶೆಟ್ಟಿ ಅವರ ಬಸ್ ಅನ್ನು ರಿಪೇರಿಗಾಗಿ ಅತ್ರಾಡಿಯ ಗ್ಯಾರೇಜ್ಗೆ ಕೊಂಡೊಯ್ಯಲಾಗಿತ್ತು. ಹೀಗಾಗಿ ತಮ್ಮ ಬಸ್ನ ದುರಸ್ತಿ ಕಾರ್ಯ ನೋಡಿಕೊಳ್ಳಲು ಸ್ವತಃ ದಯಾನಂದ ಅವರೇ ಗ್ಯಾರೇಜ್ಗೆ ಹೋಗಿದ್ದರು. ಅದರಂತೆ ಬಸ್ ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ, ಗ್ಯಾರೇಜ್ನ ಮೆಕ್ಯಾನಿಕ್ ಅಜಾಗರೂಕತೆಯಿಂದ ಎಂಜಿನ್ ಸ್ಟಾರ್ಟ್ ಮಾಡಿದಾ ಬಸ್ ಮುಂದಕ್ಕೆ ಚಲಿಸಿದೆ.
ಇದನ್ನೂ ಓದಿ: ದೆಹಲಿ: ಮಾರುಕಟ್ಟೆಯಲ್ಲಿ 15 ಜನರ ಮೇಲೆ ಹರಿದ ಕಾರು, ಓರ್ವ ಮಹಿಳೆ ಸಾವು
ಬಸ್ ಮುಂದಕ್ಕೆ ಚಲಿಸುತ್ತಿದ್ದಂತೆ ದಯಾನಂದ ಅವರು ಬಸ್ ಅಡಿ ಬಿದ್ದು ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ದಯಾನಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ