ಉಡುಪಿಯ ಕಡಲ ತೀರದಲ್ಲಿ ಹಿಮಾಲಯ ಅಘೋರಿಗಳಿಂದ ಗೌಪ್ಯವಾಗಿ ನಡೆಯುತ್ತಿದೆ ಮಹಾಯಾಗ

ಹಿಮಾಲಯ ದಿಂದ ದಕ್ಷಿಣ ಭಾರತಕ್ಕೆ ಆಗಮಿಸಿದ ಆಘೋರಿಗಳು ಈ ಯಾಗವನ್ನು ಕೈಗೊಂಡಿದ್ದಾರೆ. 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರ ಗ್ರಹಣ ಸಂಭವಿಸಿರುವುದರಿಂದ ಅಘೋರಿಗಳು ಯಾಗ ನಡೆಸುತ್ತಿದ್ದಾರೆ.

ಉಡುಪಿಯ ಕಡಲ ತೀರದಲ್ಲಿ ಹಿಮಾಲಯ ಅಘೋರಿಗಳಿಂದ ಗೌಪ್ಯವಾಗಿ ನಡೆಯುತ್ತಿದೆ ಮಹಾಯಾಗ
Udupi Aghori Pooja
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 15, 2022 | 6:17 PM

ಉಡುಪಿ: ಜಿಲ್ಲೆಯಲ್ಲಿ ಅಘೋರಿಗಳಿಂದ (Aghoris) ಮಹಾಯಾಗ(Yaga) ನಡೆಯುತ್ತಿದೆ. 15 ದಿನಗಳ ಅಂತರದಲ್ಲಿ ಸೂರ್ಯಗ್ರಹಣ (Solar Eclipse) ಮತ್ತು ಚಂದ್ರ ಗ್ರಹಣ (Lunar Eclipse) ಸಂಭವಿಸಿರುವುದರಿಂದ ಅಘೋರಿಗಳು ಯಾಗ ನಡೆಸುತ್ತಿದ್ದಾರೆ. ಈ ರೀತಿ ಗ್ರಹಣವಾದಾಗಲೆಲ್ಲ ಪ್ರಾಕೃತಿಕ ವಿಪ್ಲವಗಳು ಸಂಭವಿಸುವ ಆತಂಕ ಇರುವ ಕಾರಣಕ್ಕೆ ಮಹಾಯಾಗ ಕೈಗೊಳ್ಳಲಾಗಿದೆ.ಅಘೋರಿಗಳು ನಡೆಸುತ್ತಿರುವ ಮಹಾ ಮೃತ್ಯುಂಜಯ ಯಾಗ ಇದೀಗ ಗಮನ ಸೆಳೆದಿದೆ. ಸಂಚಾರದಲ್ಲಿದ್ದ ಅಘೋರಿಗಳು ಲೋಕ ಕಲ್ಯಾಣಾರ್ಥ ಈ ಯಾಗ ಕೈಗೊಂಡಿದ್ದಾರೆ. ಸಂಚಾರ ಮಾರ್ಗದಲ್ಲಿ ಇದ್ದಲ್ಲಿಯೇ ಯಾಗ ನಡೆಸುವಂತೆ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಈ ಮಹಾ ಯಾಗವನ್ನು ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ನಡೆಸಲಾಗುತ್ತಿದೆ. ಯಾಗ ನಡೆಸಲು ಸೂಕ್ತ ಸ್ಥಾನವನ್ನು ಹುಡುಕಿ ಅವಿಭಜಿತ ಜಿಲ್ಲೆಗಳ ಅನೇಕ ಸ್ಥಳಗಳಿಗೆ ಅಘೋರಿಗಳು ಭೇಟಿ ಕೊಟ್ಟಿದ್ದರು. ಬಳಿಕ ಪಟ್ಟಂಪ ಪರಿಸರದ ಕಡಲ ತೀರದ ಒಂದು ಫಾರ್ಮ್ ಹೌಸ್ ಅನ್ನು ಯಾಗಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.

ಅಘೋರಿಗಳಿಂದ ಗೌಪ್ಯವಾಗಿ ಯಾಗ

ಸ್ಥಳೀಯವಾದ ಯಾವುದೇ ಸಂಪರ್ಕವಿಲ್ಲದೆ ಸೀಮಿತ ವ್ಯಕ್ತಿಗಳ ಸಹಕಾರದೊಂದಿಗೆ ಅತ್ಯಂತ ಗೌಪ್ಯವಾಗಿ ಯಾಗ ನಡೆಸಲಾಗುತ್ತಿದೆ. ಸತತ ಒಂಬತ್ತು ದಿನಗಳ ಕಾಲ ಅಹೋರಾತ್ರಿ ಈ ಯಾಗ ಮುಂದುವರಿಯಲಿದೆ. ಏಕಕಾಲದಲ್ಲಿ ಎರಡು ಗ್ರಹಣಗಳು ಬಂದ ಸಂದರ್ಭದಲ್ಲಿ, ಪ್ರಾಕೃತಿಕ ಅನಾಹುತಗಳು ಸಂಭವಿಸುವ ಅಪಾಯ ಹೆಚ್ಚು ಎಂದು ಹೇಳಲಾಗುತ್ತೆ. ಅದಕ್ಕೆ ಪೂರಕವೋ ಎಂಬಂತೆ ವಿಶ್ವದ ನಾನಾ ಭಾಗಗಳಲ್ಲಿ ಗ್ರಹಣದ ನಂತರ ಭೂಕಂಪಗಳು ಕೂಡ ಸಂಭವಿಸಿವೆ.

ದೇಶದ ಅನೇಕ ಭಾಗಗಳಲ್ಲಿ ಅಘೋರಿಗಳು ಯಾಗ ನಿರತರಾಗಿದ್ದಾರಂತೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ನಿಸ್ವಾರ್ಥಭಾವದಿಂದ ನಾಲ್ವರು ಅಘೋರಿಗಳು ಇಲ್ಲಿ ಯಾಗ ನಿರತರಾಗಿದ್ದಾರೆ.ಪ್ರಕೃತಿಯಲ್ಲಿ ದೊರಕುವ ಅಮೃತಬಳ್ಳಿ, ಗರಿಕೆ ಮುಂತಾದ ಸಸ್ಯ ಜೋತೆಗೆ ಲೀಟರ್ ಗಟ್ಟಲೆ ಶುದ್ಧ ತುಪ್ಪವನ್ನು ಯಾಗಕ್ಕೆ ಬಳಸಲಾಗುತ್ತಿದೆ.

ಇದನ್ನೂ ಓದಿ: ಹಿಂದೂ ದೇವರುಗಳು: ವಾರದ 7 ದಿನಗಳಲ್ಲಿ ಯಾವ ದಿನ, ಯಾವ ದೇವರಿಗೆ, ಹೇಗೆ ಪೂಜೆ ಮಾಡಿದರೆ ಶುಭವಾಗುತ್ತದೆ

ಚಂದ್ರಗ್ರಹಣ ಮುಗಿಯುತ್ತಿದ್ದಂತೆ ಆರಂಭವಾದ ಈ ಯಾಗ, ನವಂಬರ್ 17ರಂದು ಪೂರ್ಣಗೊಳ್ಳಲಿದೆ. ಹಿಮಾಲಯ ದಿಂದ ದಕ್ಷಿಣ ಭಾರತಕ್ಕೆ ಆಗಮಿಸಿದ ಆಘೋರಿಗಳು ಈ ಯಾಗವನ್ನು ಕೈಗೊಂಡಿದ್ದಾರೆ. ಖಂಡಗ್ರಸ್ತ್ತ ಸೂರ್ಯ ಗ್ರಹಣ, ರಕ್ತಚಂದನ ಚಂದ್ರಗ್ರಹಣದಿಂದ ಲೋಕಕ್ಕೆ ಅತಿವೃಷ್ಟಿ, ಅನಾವೃಷ್ಠಿ ವಿಪತ್ತು ಸಂಭವಿಸದೆ ಲೋಕ ಸುಭಿಕ್ಷೆಯಿಂದ ಕೂಡಿರುವಂತೆ ಪ್ರಾರ್ಥಿಸಿ ಯಾಗ ನಡೆಸುತ್ತಿದ್ದೇವೆ ಎಂದಷ್ಟೇ ಯಾಗ ನಿರತ ಅಘೋರಿಗಳು ತಿಳಿಸಿದ್ದಾರೆ.

ಪ್ರತಿ ಒಂದೂವರೆ ಸಾವಿರ  ನಾಗ ಸಾಧುಗಳಿಗೆ, ಓರ್ವ ಅಘೋರಿ ಮುಖ್ಯಸ್ಥನಾಗಿರುತ್ತಾರೆ. ಇಂತಹ ನಾಲ್ವರು ಅಘೋರಿಗಳು ಉಡುಪಿಯಲ್ಲಿ ಯಾಗ ನಿರತರಾಗಿದ್ದಾರೆ. ಯಾವುದೇ ಪ್ರಚಾರವಿಲ್ಲದೆ, ಅಪೇಕ್ಷೆ ಇಲ್ಲದೆ ನಡೆಸುವ ಯಾಗಗಳು, ಈ ಜಗತ್ತಿನ ನೆಮ್ಮದಿಗೆ ಕಾರಣವಾಗಿದೆ ಎಂದು ಭಕ್ತರು ನಂಬಿದ್ದಾರೆ.

ತಾಜಾ ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ

Published On - 6:02 pm, Tue, 15 November 22

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು