ಹೆಲಿಕಾಪ್ಟರ್​ನಲ್ಲಿ ಹಣದ ಗಂಟು ಹಿಡಿದುಕೊಂಡು ಬಂದಿದ್ದಾರೆ ಎನ್ನುವ ವಿನಯ್ ಕುಮಾರ್ ಸೊರಕೆ ಆರೋಪಕ್ಕೆ ಅಣ್ಣಾಮಲೈ ತಿರುಗೇಟು

|

Updated on: Apr 18, 2023 | 12:50 PM

ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಕೆ.ಅಣ್ಣಾಮಲೈ ತಮಿಳುನಾಡಿನಿಂದ ಹೆಲಿಕಾಪ್ಟರ್ ಮೂಲಕ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಕುರಿತು ಕಾಂಗ್ರೆಸ್​ನ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ‘ಅಣ್ಣಾಮಲೈ ಹಣದ ಗಂಟು ಹಿಡಿದುಕೊಂಡು ಹೆಲಿಕಾಪ್ಟರ್​ನಲ್ಲಿ ಬಂದಿದ್ದಾರೆ. ಈ ಬಗ್ಗೆ ನನಗೆ ಖಚಿತ ಮಾಹಿತಿಯಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಹೆಲಿಕಾಪ್ಟರ್​ನಲ್ಲಿ ಹಣದ ಗಂಟು ಹಿಡಿದುಕೊಂಡು ಬಂದಿದ್ದಾರೆ ಎನ್ನುವ ವಿನಯ್ ಕುಮಾರ್ ಸೊರಕೆ ಆರೋಪಕ್ಕೆ ಅಣ್ಣಾಮಲೈ ತಿರುಗೇಟು
ವಿನಯ್ ಕುಮಾರ್ ಸೊರಕೆ, ಕೆ ಅಣ್ಣಾಮಲೈ
Follow us on

ಉಡುಪಿ: ಎಲ್ಲೆಡೆ ವಿಧಾನಸಭೆ ಚುನಾವಣಾ(Karnataka Assembly Election) ಕಾವು ಜೋರಾಗಿದೆ. ಇದೀಗ ನಾಮಪತ್ರ ಸಲ್ಲಿಕೆ ಶುರುವಾಗುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪಗಳನ್ನ ಶುರು ಮಾಡಿದ್ದಾರೆ. ಕಾಪು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ(Gurme Suresh Shetty) ನಾಮಪತ್ರ ಸಲ್ಲಿಸುವ ಕಾರ್ಯಕ್ರಮಕ್ಕೆ ಬಿಜೆಪಿ ಸಹ ಉಸ್ತುವಾರಿ ಕೆ.ಅಣ್ಣಾಮಲೈ(K. Annamalai) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ತಮಿಳುನಾಡಿನಿಂದ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಿದ ಅಣ್ಣಾಮಲೈ ಮೇಲೆ ಕಾಂಗ್ರೆಸ್​ನ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ(Vinay Kumar Sorake) ಗಂಭೀರ ಆರೋಪ ಮಾಡಿದ್ದಾರೆ. ಅಣ್ಣಾಮಲೈ ಹಣದ ಗಂಟು ಹಿಡಿದುಕೊಂಡು ಹೆಲಿಕಾಫ್ಟರ್ ನಲ್ಲಿ ಬಂದಿದ್ದಾರೆ. ಈ ಬಗ್ಗೆ ನನಗೆ ಖಚಿತ ಮಾಹಿತಿ ಇದೆ ಎಂದಿದ್ದಾರೆ.

ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೊರಕೆ ಮಾಹಿತಿ ನೀಡಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ಪ್ರವಾಸದಲ್ಲಿರುವ ಅಣ್ಣಾಮಲೈ ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಕಾರ್ಯಕ್ರಮದಲ್ಲಿ ಭಾಗಿಯಾಗಲು ಟೈಮ್ ಟೇಬಲ್ ಫಿಕ್ಸ್ ಮಾಡಿದ್ದರು. ಎರಡು ದಿನದಲ್ಲಿ ಮೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ತೆರಳಬೇಕಾಗಿರುವ ಕಾರಣ ಅಣ್ಣಾಮಲೈ ಹೆಲಿಕಾಪ್ಟರ್ ಬಳಕೆ ಮಾಡಿದ್ದಾರೆ. ಇನ್ನು ಸೊರಕೆ ಅವರ ಆರೋಪಕ್ಕೆ ‘ಕಾಂಗ್ರೆಸ್ ಪಕ್ಷದವರು ಮಾಡುವುದನ್ನು ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಅಣ್ಣಾಮಲೈ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:Madal Virupakshappa: ಕೊನೆಗೂ ಜೈಲಿನಿಂದ ಹೊರಬಂದ ಮಾಡಾಳ್ ವಿರೂಪಾಕ್ಷಪ್ಪ​​, ಮುಂದಿನ ರಾಜಕೀಯ ನಡೆ ಬಗ್ಗೆ ಹೇಳಿದ್ದಿಷ್ಟು

ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಸೊರಕೆ ಕಳೆದ ಬಾರಿ ಲಾಲಾಜಿ ಮೆಂಡನ್ ವಿರುದ್ಧ 11 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಗುರ್ಮೆ ಸುರೇಶ್ ವಿರುದ್ಧ ಸೆಣೆಸಾಟ ಮಾಡಲಿದ್ದಾರೆ. ಈ ಹೇಳಿಕೆಯ ಮೂಲಕ ಕರಾವಳಿ ಜಿಲ್ಲೆ ಉಡುಪಿಯಲ್ಲಿ ರಾಜಕೀಯ ಜಟಾಪಟಿ ಆರಂಭವಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ