ಕುಂದಾಪುರದಲ್ಲಿ ಲವ್ ಜಿಹಾದ್ ಆರೋಪಿ ಪೊಲೀಸರ ವಶಕ್ಕೆ; ನಾಳೆ ಕುಂದಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಬಜರಂಗದಳ

| Updated By: sandhya thejappa

Updated on: May 30, 2022 | 3:43 PM

ಮದುವೆಯಾಗಿದ್ದರೂ ಹಿಂದೂ ಯುವತಿ ಜೊತೆ ಆರೋಪಿ ಸಂಪರ್ಕ ಇಟ್ಟುಕೊಂಡಿದ್ದನಂತೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆಯಾಗಲ್ಲ ಎಂದು ಹೇಳಿದ್ದ ಎಂಬ ಆರೋಪ ಕೇಳಿಬಂದಿದೆ.

ಕುಂದಾಪುರದಲ್ಲಿ ಲವ್ ಜಿಹಾದ್ ಆರೋಪಿ ಪೊಲೀಸರ ವಶಕ್ಕೆ; ನಾಳೆ ಕುಂದಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಬಜರಂಗದಳ
ಆರೋಪಿ ಅಜೀಜ್ ಜೊತೆ ಶಿಲ್ಪಾ ದೇವಾಡಿಗ
Follow us on

ಉಡುಪಿ: ಕುಂದಾಪುರದಲ್ಲಿ ನಡೆದ ಲವ್ ಜಿಹಾದ್ (Love Jihad) ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಜೀಜ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೇ 23ರಂದು ಆತ್ಮಹತ್ಯೆಗೆ ಯತ್ನಿಸಿದ್ದ ಹಿಂದೂ ಯುವತಿ ಶಿಲ್ಪಾ ದೇವಾಡಿಗ, ಚಿಕಿತ್ಸೆ ಫಲಿಸದೆ ಮೇ 25ರಂದು ಮೃತಪಟ್ಟಿದ್ದಳು. ಈಕೆಯ ಸಾವಿನ ಬಳಿಕ ಮತಾಂತರ ಒತ್ತಾಯ ಮತ್ತು ಲವ್ ಜಿಹಾದ್ ಆರೋಪ ಕೇಳಿಬಂದಿತ್ತು. ಮದುವೆಯಾಗಿದ್ದರೂ ಹಿಂದೂ ಯುವತಿ ಜೊತೆ ಆರೋಪಿ ಸಂಪರ್ಕ ಇಟ್ಟುಕೊಂಡಿದ್ದನಂತೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದ. ಬಳಿಕ ಮದುವೆಯಾಗಲ್ಲ ಎಂದು ಹೇಳಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಲವ್ ಜಿಹಾದ್ ಪ್ರಕರಣವನ್ನು ಖಂಡಿಸಿ ಬಜರಂಗದಳ ನಾಳೆ ಕುಂದಾಪುರದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ.

ಯುವತಿ ಅಣ್ಣ ಹೇಳಿದ್ದೇನು?
ನನ್ನ ತಂಗಿಯನ್ನು ಅಜೀಜ್ ದುರುಪಯೋಗಪಡಿಸಿಕೊಂಡಿದ್ದಾನೆ. ಟಾರ್ಚರ್ ಕೊಟ್ಟು ಮತಾಂತರವಾಗಲು ಒತ್ತಾಯಿಸಿರಬೇಕು. ಆಕೆ ಆಸ್ಪತ್ರೆಯಲ್ಲಿ ಕಿರುಕುಳ ಕೊಟ್ಟ ವಿಚಾರ ಹೇಳಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಫೋಟೋ ವಿಡಿಯೋ ಮಾಡಿದ್ದಾಗಿ ಹೇಳಿದ್ದಾಳೆ. ಅವರಿಗೆ ಹೇಗೆ ಸಂಪರ್ಕವಾಗಿತ್ತು ನನಗೆ ಗೊತ್ತಿಲ್ಲ. ಆಕೆ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅವನಿಗೆ ಈ ಮೊದಲೇ ಮದುವೆಯಾಗಿತ್ತು. ಮದುವೆಯಾಗಲು ಮತಾಂತರ ಆಗು ಎಂದು ಒತ್ತಾಯಿಸಿರುವ ಸಂಶಯ ಇದೆ ಎಂದರು.

ಹಿಂದೂ ಸಂಘಟನೆ ಒತ್ತಾಯ:
ಲವ್ ಜಿಹಾದಿಗೆ ಯುವತಿ ಬಲಿಯಾಗಿದ್ದಾಳೆ ಎಂದು ಕುಂದಾಪುರದ ಹಿಂದೂ ಸಂಘಟನೆಗಳು ಆರೋಪಿಸಿವೆ. ಮದುವೆಯಾಗಿರುವ ಅಜೀಜ್ ಯುವತಿ ಜೊತೆ ಸಂಬಂಧ ಇರಿಸಿಕೊಂಡಿದ್ದ. ಅಜೀಜ್​ಗೆ ತಕ್ಕ ಶಿಕ್ಷೆ ಕೊಡಬೇಕೆಂದು ಹಿಂದೂ ಸಂಘಟನೆ ಮುಖಂಡರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ
2009ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮರ ತಲೆಗೂದಲು ಮುಟ್ಟಿ ನೋಡಿದ ಬಾಲಕ; 13 ವರ್ಷಗಳ ನಂತರ ಆತನ ಜತೆ ಒಬಾಮ ವರ್ಚುವಲ್ ಭೇಟಿ
Nepal Plane Crash: ನೇಪಾಳದಲ್ಲಿ ವಿಮಾನ ಪತನ; 21 ಶವಗಳು ಪತ್ತೆ, 4 ಭಾರತೀಯರು ಸೇರಿ 22 ಪ್ರಯಾಣಿಕರೂ ಸಾವನ್ನಪ್ಪಿರುವ ಶಂಕೆ
PM Cares: ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಹಲವು ಸೌಲಭ್ಯ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ
ಆಮಿರ್​ ಖಾನ್​ ಮೇಲೆ ನಾಗ ಚೈತನ್ಯ ಫ್ಯಾನ್ಸ್​ ಬೇಸರ; ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​ನಿಂದ ನಿರಾಸೆ

ಇದನ್ನೂ ಓದಿ: 2009ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮರ ತಲೆಗೂದಲು ಮುಟ್ಟಿ ನೋಡಿದ ಬಾಲಕ; 13 ವರ್ಷಗಳ ನಂತರ ಆತನ ಜತೆ ಒಬಾಮ ವರ್ಚುವಲ್ ಭೇಟಿ

ಇತ್ತೀಚೆಗೆ ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು  ಹೆಚ್ಚಾಗಿವೆ. ಸದ್ಯ ಕುಂದಾಪುರದಲ್ಲಿ ನಡೆದ ಈ ಪ್ರಕರಣದ ಬಗ್ಗೆ ಅನುಮಾನ ಹೆಚ್ಚಾಗಿದೆ. ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆ ಬಳಿಕ ಸತ್ಯ ತಿಳಿದುಬರಬೇಕಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:51 pm, Mon, 30 May 22