ಚೈತ್ರಾ ಕುಂದಾಪುರಳಿಂದ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮರಳಿ ಸಮಾಜ ಸೇವೆಗೆ

| Updated By: ಆಯೇಷಾ ಬಾನು

Updated on: Sep 30, 2023 | 2:00 PM

ಹಿಡಿದ ಕೆಲಸ ಅರ್ಧಕ್ಕೆ ನಿಲ್ಲಿಸುವುದು ನನ್ನ ತತ್ವ ಸಿದ್ಧಾಂತವಲ್ಲ ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಮುಂದೆಯೂ ಕೂಡ ಕಷ್ಟದಲ್ಲಿರುವ ತಾಯಂದಿರ ಕಣ್ಣೀರು ಒರೆಸುವ ಕಾರ್ಯ ಮುಂದುವರೆಸುವೆ. ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ ಎನ್ನುವ ಸಂದೇಶದ ಜೊತೆ ಫೇಸ್ ಬುಕ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಚೈತ್ರಾ ಕುಂದಾಪುರಳಿಂದ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಮರಳಿ ಸಮಾಜ ಸೇವೆಗೆ
ಗೋವಿಂದ ಬಾಬು ಪೂಜಾರಿ
Follow us on

ಉಡುಪಿ, ಸೆ.30: ಹಿಂದೂಪರ ಭಾಷಣಕಾರ್ತಿ ಚೈತ್ರಾ ಕುಂದಾಪುರ (Chaitra Kundapur) ಅವರಿಂದ ವಂಚನೆಗೊಳಗಾದ ಗೋವಿಂದ ಬಾಬು ಪೂಜಾರಿ (Govinda Babu Poojari) ಅವರು ಈಗ ಮತ್ತೆ ಸಮಾಜ ಸೇವೆಗೆ ಇಳಿದಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ಮೂಲದ ಉದ್ಯಮಿಯಾಗಿರುವ ಗೋವಿಂದ ಬಾಬು ಪೂಜಾರಿ ಅವರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ (BJP Ticket) ಪಡೆಯಲು ಚೈತ್ರಾ ಕುಂದಾಪುರಳಿಗೆ 5 ಕೋಟಿ ಹಣ ನೀಡಿ ವಂಚನೆಗೊಳಗಾಗಿದ್ದರು. ಈ ಸಂಬಂಧ ತನಿಖೆಯಲ್ಲಿ ಪಾಲ್ಗೊಂಡಿದ್ದ ಗೋವಿಂದ ಬಾಬು ಪೂಜಾರಿ ಈಗ ಮತ್ತೆ ತಮ್ಮನ್ನು ಸಮಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಿಡಿದ ಕೆಲಸ ಅರ್ಧಕ್ಕೆ ನಿಲ್ಲಿಸುವುದು ನನ್ನ ತತ್ವ ಸಿದ್ಧಾಂತವಲ್ಲ ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ನು ಮುಂದೆಯೂ ಕೂಡ ಕಷ್ಟದಲ್ಲಿರುವ ತಾಯಂದಿರ ಕಣ್ಣೀರು ಒರೆಸುವ ಕಾರ್ಯ ಮುಂದುವರೆಸುವೆ. ನಿಮ್ಮ ಪ್ರೀತಿ ಆಶೀರ್ವಾದ ಹೀಗೆ ಇರಲಿ ಎನ್ನುವ ಸಂದೇಶದ ಜೊತೆ ಫೇಸ್ ಬುಕ್​ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಫೈರ್ ಬ್ರಾಂಡ್ ಚೈತ್ರಾಳಿಂದ 5 ಕೋಟಿ ವಂಚನೆಗೆ ಒಳಗಾಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಶೆಫ್ ಟಾಕ್ ಸಂಸ್ಥೆಯ ಮುಖ್ಯಸ್ಥರಾಗಿದ್ದು ಬೈಂದೂರು ಭಾಗದಲ್ಲಿ ಸಂಕಷ್ಟದಲ್ಲಿರುವರಿಗೆ, ಬಡವರಿಗೆ ಸೂರು ಕಟ್ಟಿ ಕೊಟ್ಟಿದ್ದಾರೆ. ಚೈತ್ರಾ ಪ್ರಕರಣದ ಬಳಿಕ ಸಾಮಾಜ ಸೇವೆ ಕಾರ್ಯದಿಂದ ಹಿಂದೆ ಸರಿದಿದ್ದರು. ಈಗ ಮತ್ತೆ ತಮ್ಮ ಸಹಾಯ ಕಾರ್ಯ ಮುಂದುವರೆಸಿದ್ದಾರೆ. ವಂಚನೆ ಪ್ರಕರಣದ ಜೊತೆ ಹಣ ವರ್ಗಾವಣೆ ವಿಚಾರವಾಗಿ ಗೋವಿಂದ ಬಾಬು ಅವರು ತನಿಖೆ ಎದುರಿಸುತ್ತಿದ್ದಾರೆ. ಸಮಾಜ ಸೇವೆ ಕಾರ್ಯಕ್ಕೆ ಬ್ರೇಕ್ ನೀಡಿದ್ದ ಉದ್ಯಮಿ ಮತ್ತೆ ಮರಳುವ‌ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆಗೆ ಸಿಲುಕಿದ ಗೋವಿಂದ ಬಾಬು ಪೂಜಾರಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಬೆಳೆದು ಬಂದು ಗೋವಿಂದ ಪೂಜಾರಿ ಅವರು ರಾಜಕೀಯದ ಮೂಲಕ ಸಮಾಜ ಸೇವೆ ಮಾಡಬೇಕು ಎಂದು ಕೊಂಡಿದ್ದರು. ಆದರೆ ಅವರ ಕನಸು ಕನಸಾಗಿಯೇ ಉಳಿದಿದೆ. ಇನ್ನು ಸಮಾಜಕ್ಕೆ ಒಳಿತು ಮಾಡಬೇಕೆಂಬ ಉದ್ದೇಶದಿಂದ ಚಾರಿಟೇಬಲ್ ಟ್ರಸ್ಟ್ ಕಟ್ಟಿ ಬಡವರಿಗೆ ನಾನಾ ರೀತಿಯ ಸಹಾಯ ಮಾಡುತ್ತಿದ್ದಾರೆ. ಬೈಂದೂರಿನಲ್ಲೇ ಬಡವರಿಗೆ 9 ಮನೆ ಕಟ್ಟಿ ಕೊಟ್ಟಿದ್ದಾರೆ. ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ