ಉಡುಪಿ: ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಬೀಚ್ಗೆ (Maravanthe Beach) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಭೇಟಿ ನೀಡಿ, ಕಡಲ ಕೊರೆತ ಎಲ್ಲವನ್ನು ನೋಡಿದ್ದೇನೆ. ಪ್ರತಿ ವರ್ಷ ಸ್ವಲ್ಪ ಸ್ವಲ್ಪ ಕಡಲ ಕೊರೆತ ಸಂಭವಿಸುತ್ತಿದೆ. ಕಡಲಲ್ಲಿ ಬೇರೆ ಕಡೆ ಹಾಕಿರೊ ಕಲ್ಲು ಮತ್ತೊಂದು ಕಡೆ ಬಂದಿದೆ. ಮೊದಲು ಹಾನಿ ತಡೆಯಲು ತಾತ್ಕಾಲಿಕ ಕೆಲಸ ಕೂಡಲೆ ಶುರು ಮಾಡುತ್ತೇವೆ ಎಂದು ಭರವಸೆ ನೀಡಿದರು. ಅದಕ್ಕಾಗಿ ಎಷ್ಟು ಹಣ ಬೇಕು ಅಷ್ಟನ್ನೂ ಕೊಡುತ್ತೇವೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಕಲ್ಲುಗಳನ್ನು ಸಮರ್ಪಕವಾಗಿ ಹಾಕಿಲ್ಲ. ಒಂದು ಬದಿಯಿಂದ ಮತ್ತೊಂದು ಬದಿಗೆ ಕಲ್ಲು ತಂದು ಹಾಕಿದ್ದಾರೆ. ಕಳಪೆ ಕಾಮಗಾರಿ ಆಗಿರುವ ಕಡೆ ಕ್ರಮ ಕೈಗೊಳ್ಳುತ್ತೇವೆ. ಬೋಟ್ಗೆ ಸಂಬಂಧಪಟ್ಟಂತೆ 84 ಕೋಟಿ ಟೆಂಡರ್ ಆಗಿದೆ. ಮನೆಗಳು ಬಿದ್ದರೆ ಐದು ಲಕ್ಷ ಕೊಡಲು ತೀರ್ಮಾನಿಸಿದ್ದೇವೆ ಎಂದರು.
ಭಾರಿ ಮಳೆಯಿಂದ ಕಡಲ ತೀರದ ನಿವಾಸಿಗಳಿಗೆ ಸಂಕಷ್ಟ
ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ತೊಟ್ಟಂ ಕಡಲ ತೀರದಲ್ಲಿ ಕಡಲ್ಕೊರೆತದಿಂದ ನೂರಾರು ತೆಂಗಿನ ಮರಗಳು ಕೊಚ್ಚಿಹೋಗಿವೆ. ತೊಟ್ಟಂ ಕಡಲ ತೀರದಲ್ಲಿ ನೂರಾರು ಮನೆಗಳಿದ್ದರೂ ತಡೆಗೋಡೆಯಿಲ್ಲ. ಆದರೆ ಶ್ರೀಮಂತರ ರೆಸಾರ್ಟ್ ಇರುವ ಭಾಗದಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಸರ್ಕಾರ, ಅಧಿಕಾರಿಗಳ ವಿರುದ್ಧ ತೊಟ್ಟಂ ತೀರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡಜನರು ನೆಲೆಸಿರುವ ಭಾಗದಲ್ಲಿ ತಡೆಗೋಡೆ ನಿರ್ಮಿಸಿಲ್ಲವೆಂದು ಕಿಡಿ ಕಾರಿದ್ದಾರೆ.
Published On - 3:28 pm, Wed, 13 July 22