ಉಡುಪಿಯಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ: ಭಟ್ಕಳ ಭೇಟಿ ರದ್ದು

ದಿನಾಂಕ 13-07-22 ರಂದು ನಿಗದಿಪಡಿಸಿದ್ದ ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ ತಾಲೂಕಿನ ಪ್ರವಾಸ ಕಾರ್ಯಕ್ರಮವು ಕಾರಣಾಂತರಗಳಿಂದ ರದ್ದಾಗಿದೆ.

ಉಡುಪಿಯಲ್ಲಿ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ: ಭಟ್ಕಳ ಭೇಟಿ ರದ್ದು
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 13, 2022 | 8:26 AM

ಉಡುಪಿ: ದಿನಾಂಕ 13-07-22 ರಂದು ನಿಗದಿಪಡಿಸಿದ್ದ ಸಿಎಂ ಬೊಮ್ಮಾಯಿ (CM Bommai) ಉತ್ತರ ಕನ್ನಡ ಜಿಲ್ಲೆಯ ಭಟ್ಕಳ್ ತಾಲೂಕಿನ ಪ್ರವಾಸ ಕಾರ್ಯಕ್ರಮವು ಕಾರಣಾಂತರಗಳಿಂದ ರದ್ದಾಗಿದೆ. ರಸ್ತೆ ಮಾರ್ಗವಾಗಿ ಓಡಾಡುವುದು ತುಂಬಾ ಟ್ರಾವೆಲಿಂಗ್ ಆಗುತ್ತದೆ. ಒಂದು ಪ್ಲೇಸ್​ಗಾಗಿ ಅಷ್ಟೊಂದು ಕೀಮೀ ಬೇಡ ಅಂತಾ ತೀರ್ಮಾನ ಮಾಡಲಾಗಿದೆ. ಇವತ್ತು ಸಂಪೂರ್ಣವಾಗಿ ಉಡುಪಿ ಜಿಲ್ಲೆಯ ಮೇಲೆ ಹೆಚ್ಚು ಒತ್ತು ನೀಡಿ ಪರಿವೀಕ್ಷಣೆ ಮಾಡುತ್ತಿದ್ದು, ಮುಂದಿನ ಬಾರಿ ಕಾರಾವಾರ, ಉತ್ತರ ಕನ್ನಡಕ್ಕೆ ಭೇಟಿ ಕೊಡಲು ಚಿಂತನೆ ಮಾಡಲಾಗುತ್ತಿದೆ. ಹೀಗಾಗಿ ಇವತ್ತು ಉಡುಪಿ ಜಿಲ್ಲೆಯತ್ತ ಸಿಎಂ ಹೆಚ್ಚು ಒತ್ತು ನೀಡಲಿದ್ದಾರೆ. ನಿನ್ನೆರಾತ್ರಿ ಉಡುಪಿಗೆ ಆಗಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಇಂದು ನೆರೆ ಪ್ರವಾಸ ನಡೆಸಲಿದ್ದಾರೆ. ನಗರದ ಮಣಿಪಾಲದಲ್ಲಿ ಸಿಎಂ ವಾಸ್ತವ್ಯ ಹೂಡಿದ್ದು, ಇಂದು ದ.ಕ ಉಡುಪಿ, ಉತ್ತರಕನ್ನಡ ಜಿಲ್ಲೆಗಳ ನೆರೆ ಹಾನಿ ಕುರಿತು ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯಲ್ಲಿ ಬೆಳಗ್ಗೆ 10ಕ್ಕೆ ಸಿಎಂ ನೇತೃತ್ವದಲ್ಲಿ ಸಭೆ ಮಾಡಲಿದ್ದಾರೆ.

ಇದನ್ನೂ ಓದಿ: Karnataka Rains: ಮಳೆಯಿಂದ ಹಾನಿಯಾದ ಮನೆಗಳಿಗೆ 10 ಸಾವಿರ ಪರಿಹಾರ ಸಿಎಂ ಬೊಮ್ಮಾಯಿ ಘೋಷಣೆ

ಸಚಿವ ಆರ್.ಅಶೋಕ್, ಸುನಿಲ್ ಕುಮಾರ್, ಉಡುಪಿ ಉಸ್ತುವಾರಿ ಸಚಿವ ಎಸ್. ಅಂಗಾರ, ಸಚಿವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿ ಜಿಲ್ಲೆಯ ಐದು ಶಾಸಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಡಿಸಿ, ಎಸ್ಪಿ, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೂ ಸಿಎಂ ಸಭೆ ನಡೆಸಲಿದ್ದು, ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಜಿಲ್ಲೆಯ ಬೈಂದೂರು ತಾಲೂಕು ಸೇರಿದಂತೆ, ಕಡಲ್ಕೊರೆತ, ನೆರೆ-ಬೆಳೆ ಹಾನಿ ಪರಿಶೀಲನೆ ಮಾಡಲಾಗುವುದ. ಜಿಲ್ಲೆಗೆ ನೆರೆ ಪರಿಹಾರ ಘೋಷಣೆ ಮಾಡಲಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸಂಜೆ ವೇಳೆಗೆ ಮಂಗಳೂರು ವಾಪಸ್ ತೆರಳಲಿದ್ದಾರೆ.

ಇದನ್ನೂ ಓದಿ: ಮಳೆ ಆರ್ಭಟ: ಶುಕ್ರವಾರ ಡಿಸಿಗಳೊಂದಿಗೆ ಸಿಎಂ ಬೊಮ್ಮಾಯಿ ತುರ್ತು ವಿಡಿಯೋ ಸಂವಾದ

ಬೆಳಗ್ಗೆ 9 ಗಂಟೆಗೆ ಉಡುಪಿ ಜಿಲ್ಲೆಯ ನೆರೆ ಬಗ್ಗೆ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಿದ್ದಾರೆ. ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದು, ಉಡುಪಿಯಿಂದ ರಸ್ತೆ ಮೂಲಕ ಮಧ್ಯಾಹ್ನ 12 ಗಂಟೆಗೆ ಭಟ್ಕಳಕ್ಕೆ ಆಗಮಿಸಲಿದ್ದು, ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಚರ್ಚಿಸಲಿದ್ದಾರೆ. ಬಳಿಕ ರಸ್ತೆ ಮೂಲಕ ಉಡುಪಿಗೆ ಹಿಂದಿರುಗಲಿದ್ದಾರೆ.