ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್ ವಾಹನ ಅಪಘಾತ; ಎಸ್ಕಾರ್ಟ್ ಸಿಬ್ಬಂದಿಗೆ ಗಾಯ
ಉಡುಪಿಯ ಸಂತೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಸ್ಕಾರ್ಟ್ ವಾಹನ ಅಪಘಾತವಾಗಿದೆ.

ಉಡುಪಿ: ಉಡುಪಿಯ (Udupi) ಸಂತೆಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ (Kota Srinivas Poojary) ಎಸ್ಕಾರ್ಟ್ ವಾಹನ (Vehicle) ಅಪಘಾತವಾಗಿದೆ. ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಉರುಳಿಬಿದ್ದಿದೆ. ಎಸ್ಕಾರ್ಟ್ (Escort) ಬೆಂಗಾವಲು ಸಿಬ್ಬಂದಿ ಗಣೇಶ್ ಆಳ್ವ ಅವರಿಗೆ ಸಣ್ಣ ಪುಟ್ಟ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳು ಗಣೇಶ್ ಆಳ್ವ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಾವಲು ವಾಹನದ ಮುಂದೆ ಸಂಚರಿಸುತಿದ್ದ ಲಾರಿ ಸೂಚನೇ ನೀಡದೇ ಪಥ ಬದಲಿಸಿದ ಕಾರಣ ಅಪಘಾತ ನಡೆದಿದೆ.
ಮೈಸೂರಿನಲ್ಲಿ ಆಟೋ ಚಾಲಕನ ಹೈಡ್ರಾಮ
ಮೈಸೂರು: ಆಟೋ ಮತ್ತು ಸಾರಿಗೆ ಬಸ್ ಮಧ್ಯೆ ಅಪಘಾತ ಸಂಭವಿಸಿರುವ ಘಟನೆ ಮೈಸೂರು ಹುಣಸೂರು ರಸ್ತೆಯ ಆರ್ಮಿ ಕ್ಯಾಂಟೀನ್ ಬಳಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ, ಆಟೋ ಜಖಂಗೊಂಡಿದ್ದು, ಚಾಲಕನಿಗೆ ಗಾಯಗಳಾಗಿವೆ. ಆಟೋ ಚಾಲಕ ಕುಡಿದ ಮತ್ತಿನಲ್ಲಿ ಆಟೋ ಚಾಲಾಯಿಸುತ್ತಿದ್ದನು. ಕುಡಿದ ಮತ್ತಿನಲ್ಲಿ ಯೂಟರ್ನ್ ತೆಗೆದುಕೊಳ್ಳುವ ವೇಳೆ ಹುಣಸೂರು ಕಡೆಯಿಂದ ಬಂದ ಸಾರಿಗೆ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು ಮುಂದಾದಾಗ, ಆಸ್ಪತ್ರೆಗೆ ಹೋಗದೇ ಪಟ್ಟು ಆಟೋ ಚಾಲಕ ಹಿಡಿದಿದ್ದಾನೆ. ಅನಿವಾರ್ಯವಾಗಿ ಬಲವಂತದಿಂದ ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ದೇವರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 5:55 pm, Tue, 12 July 22




