CM Siddaramaiah: ಆ. 1ರಂದು ಮಳೆಹಾನಿ ಜಿಲ್ಲೆಗಳಿಗೆ ಸಿದ್ದರಾಮಯ್ಯ ಭೇಟಿ, ಮೊದಲು ಸಿಎಂ ಹೋಗುವುದೆಲ್ಲಿಗೆ?
ಆಗಸ್ಟ್ 1ರಂದು ಮಳೆಹಾನಿ ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಳೆ ಹಿನ್ನೆಲೆ ಭೇಟಿ ನೀಡಲಿದ್ದಾರೆ.
ಬೆಂಗಳೂರು, ಜುಲೈ 30: ರಾಜ್ಯದಲ್ಲಿ ಮುಂಗಾರು(Monsoon) ಮಳೆ ಚುರುಕುಗೊಂಡಿದ್ದು ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ರಾಜ್ಯದಲ್ಲಿ ಮಳೆಯಿಂದಾಗಿ ಭಾರಿ ಅನಾಹುತಗಳು ಸಂಭವಿಸಿದ್ದು ಜಲಾಶಯಗಳು ತುಂಬಿ ಹರಿದಿವೆ. ಮಳೆ ನೀರು ಮನೆ, ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯನವರು(Siddaramaiah) ಮಳೆಹಾನಿ ಜಿಲ್ಲೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಆದ್ರೆ ಜುಲೈ 31ರ ಬದಲಿಗೆ ಆಗಸ್ಟ್ 1ರಂದು ಮಳೆಹಾನಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.
ಈ ಹಿಂದೆ ಜುಲೈ 31ರಿಂದ ಮಳೆಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದರು. ಆದ್ರೆ ನಾಳೆ ಎಸ್ಸಿಪಿ-ಟಿಪಿಎಸ್ಪಿ ಸಭೆ ಹಿನ್ನೆಲೆ ಭೇಟಿ ದಿನಾಂಕವನ್ನು ಬದಲಾವಣೆ ಮಾಡಲಾಗಿದ್ದು ಆಗಸ್ಟ್ 1ರಂದು ಮಳೆಹಾನಿ ಜಿಲ್ಲೆಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಮಳೆ ಹಿನ್ನೆಲೆ ಭೇಟಿ ನೀಡಲಿದ್ದಾರೆ. ಉಡುಪಿ ಕಾಲೇಜು ವಿಡಿಯೋ ಪ್ರಕರಣದ ವಿವಾದದ ಬೆನ್ನಲ್ಲೇ ಸಿಎಂ ಖುದ್ದು ಜಿಲ್ಲೆಗಳಿಗೆ ತೆರಳಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ಮಳೆ ಕಡಿಮೆಯಾದರು ನಿಲ್ಲದ ಕಡಲ ಅಬ್ಬರ, ಮಂಗಳೂರು ಬೀಚ್ಗಳಿಗೆ ಪ್ರವಾಸಿಗರಿಗೆ ನಿರ್ಬಂಧ
ಉಡುಪಿ ಮತ್ತು ಮಂಗಳೂರಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹಾನಿಯಾಗಿದ್ದರಿಂದ ಖುದ್ದು ಜಿಲ್ಲೆಗಳಿಗೆ ತೆರಳಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಆಗಸ್ಟ್ 1ರಂದು ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಉಡುಪಿಯಲ್ಲಿ ಕಾಲೇಜು ವಿಡಿಯೋ ಪ್ರಕರಣ ಸಾಕಷ್ಟು ಸದ್ದು ಮಾಡ್ತಿರೋದ್ರಿಂದ ಜಿಲ್ಲೆಯ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಮಂಗಳವಾರ ಉಡುಪಿ ಮತ್ತು ಮಂಗಳೂರು ಪ್ರವಾಸ ಮುಗಿಸಿ ಅಂದು ರಾತ್ರಿಯೇ ಬೆಂಗಳೂರಿಗೆ ಸಿಎಂ ವಾಪಸ್ ಆಗಲಿದ್ದಾರೆ.
ಎಸ್ಸಿಪಿ-ಟಿಪಿಎಸ್ಪಿ ಸಭೆ ಹಿನ್ನೆಲೆ ಸಚಿವರ ಜೊತೆ ಸಿಎಂ ಚರ್ಚೆ
ಇನ್ನು ಮತ್ತೊಂದೆಡೆ ನಾಳೆ ಎಸ್ಸಿಪಿ-ಟಿಪಿಎಸ್ಪಿ ಸಭೆ ಹಿನ್ನೆಲೆ ಸಿಎಂ ನಿವಾಸ ಕಾವೇರಿಗೆ ಸಚಿವರು ಭೇಟಿ ನೀಡುತ್ತಿದ್ದಾರೆ. ಸಚಿವರಾದ ಡಾ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚೆ ಮಾಡ್ತಿದ್ದಾರೆ. ದಲಿತರ ಮೇಲೆ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಾಯ್ದೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಉಭಯ ಸಚಿವರು ನಾಳೆ ಮೀಟಿಂಗ್ ನಲ್ಲಿ ಚರ್ಚೆ ಮಾಡುವ ಮುನ್ನ ಪೂರ್ವಬಾವಿಯಾಗಿ ಸಿಎಂ ಜೊತೆ ಚರ್ಚಿಸುತ್ತಿದ್ದಾರೆ. ಸಿಎಂ ಜೊತೆ ಉಡುಪಿ ಪ್ರಕರಣದ ಬಗ್ಗೆಯೂ ಗೃಹ ಸಚಿವ ಪರಮೇಶ್ವರ್ ಚರ್ಚೆ ನಡೆಸುವ ಸಾಧ್ಯತೆ ಇದೆ. ಮಂಗಳವಾರ ಸಿಎಂ ಉಡುಪಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ತೆರಳುವ ಮುನ್ನ ಪ್ರಸ್ತುತ ನಡೆದಿರುವ ಬೆಳವಣಿಗೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಸದ್ಯ ಸಿಎಂ ಭೇಟಿಗೆ ಡಿಜಿಐಜಿಪಿ ಅಲೋಕ್ ಮೋಹನ್ ಅವರು ಆಗಮಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ