ಮಲಯಾಳಂನ ಕುರುಪು ಚಿತ್ರವನ್ನೇ ಪ್ರೇರಣೆಯಾಗಿ ಪಡೆದು ವ್ಯಕ್ತಿಯನ್ನು ಜೀವಂತವಾಗಿ ಸುಟ್ಟ ಆರೋಪಿಗಳು; ನಾಲ್ವರು ಅರೆಸ್ಟ್

| Updated By: ಆಯೇಷಾ ಬಾನು

Updated on: Jul 15, 2022 | 5:12 PM

9 ಲೀಟರ್ ಪೆಟ್ರೋಲ್ ಬಳಸಿ ಕಾರಿಗೆ ಬೆಂಕಿ ಹಚ್ಚಿ ಜೀವಂತವಾಗಿದ್ದ ವ್ಯಕ್ತಿಯನ್ನು ಸುಟ್ಟು ವಿಕೃತಿ ಮೆರೆದಿದ್ದಾರೆ. ಬ್ರಹ್ಮಾವರ ತಾಲೂಕು ಸಾಸ್ತಾನ ಟೋಲ್ ಮೂಲಕ ವ್ಯಕ್ತಿಯ ಕಿಡ್ನಾಪ್ ಮಾಡಿ ವಿಕೃತಿ ಮೆರೆಯಲಾಗಿದೆ.

ಮಲಯಾಳಂನ ಕುರುಪು ಚಿತ್ರವನ್ನೇ ಪ್ರೇರಣೆಯಾಗಿ ಪಡೆದು ವ್ಯಕ್ತಿಯನ್ನು ಜೀವಂತವಾಗಿ ಸುಟ್ಟ ಆರೋಪಿಗಳು; ನಾಲ್ವರು ಅರೆಸ್ಟ್
ಆರೋಪಿಗಳು ಟೋಲ್ ಹಣ ಕಟ್ಟಿದ್ದ ದೃಶ್ಯ
Follow us on

ಉಡುಪಿ: ವ್ಯಕ್ತಿಯನ್ನು ಜೀವಂತವಾಗಿ ಕಾರಿನಲ್ಲಿ ಸುಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ನಡೆದಿದೆ. ಆನಂದ ಎಂಬ ಅಮಾಯಕ ವ್ಯಕ್ತಿಯನ್ನು ಸದಾನಂದ -ಶಿಲ್ಪಾ ಎಂಬುವವರು 9 ಲೀಟರ್ ಪೆಟ್ರೋಲ್ ಬಳಸಿ ಕಾರಿಗೆ ಬೆಂಕಿ ಹಚ್ಚಿ ಜೀವಂತವಾಗಿದ್ದ ವ್ಯಕ್ತಿಯನ್ನು ಸುಟ್ಟು ವಿಕೃತಿ ಮೆರೆದಿದ್ದಾರೆ. ಬ್ರಹ್ಮಾವರ ತಾಲೂಕು ಸಾಸ್ತಾನ ಟೋಲ್ ಮೂಲಕ ವ್ಯಕ್ತಿಯ ಕಿಡ್ನಾಪ್ ಮಾಡಿ ವಿಕೃತಿ ಮೆರೆಯಲಾಗಿದೆ. ಆರೋಪಿಗಳು ಕಾರಿನಿಂದ ಇಳಿದು ಟೋಲ್ ಹಣ ಕಟ್ಟಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು ಟೆಕ್ನಿಕಲ್ ಕ್ಲೂ ಮೂಲಕ ಘಟನೆ ನಡೆದು 24 ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಲಯಾಳಂನ ಕುರುಪು ಚಿತ್ರವೇ ಪ್ರೇರಣೆ

ದುಲ್ಕರ್ ಸಲ್ಮಾನ್ ನಟಿಸಿದ ಮಲಯಾಳಂನ ಕುರುಪು ಚಿತ್ರ ನೋಡಿ ಪ್ರೇರಣೆ ಪಡೆದ ಆರೋಪಿಗಳು, ಮೊದಲಿಗೆ ಪ್ಲ್ಯಾನ್ ಮಾಡಿಕೊಂಡು ಚಿತ್ರದ ಮಾದರಿಯಲ್ಲೇ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿದ್ದಾರೆ. ಸದಾನಂದ ಬಾಮೈದರಾದ ಸತೀಶ್ ಮತ್ತು ನಿತಿನ್ ಎಂಬುವವರು ಕೊಲೆ ಪ್ಲ್ಯಾನ್ ಮಾಡಿದ್ದಾರೆ. ಬೈಂದೂರು ತಾಲೂಕು ನ್ಯಾಯಾಲಯಕ್ಕೆ ನಾಲ್ವರು ಆರೋಪಿಗಳನ್ನು ಹಾಜರು ಪಡಿಸಲಾಗಿದ್ದು ನಾಲ್ವರು ಆರೋಪಿಗಳಿಗೆ ಐದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಕ್ಷುಲ್ಲಕ ವಿಚಾರಗಳಿಗೆ ಹೊರ ಬರುತ್ತಿವೆ ಲಾಂಗ್

ರಾಮನಗರದಲ್ಲಿ ಕ್ಷುಲ್ಲಕ ವಿಚಾರಗಳಿಗೆ ಲಾಂಗ್, ಮಚ್ಚಿನಿಂದ ಹೊಡೆದಾಡಿಕೊಳ್ಳುವ ಪ್ರಕರಣಗಳು ನಡೆಯುತ್ತಿವೆ. ಕಾರ್ತಿಕ್ ಎಂಬ ಯುವಕನ ಮೇಲೆ ತಿರುಮಲ ಎಂಬ ಯುವಕ ಲಾಂಗ್ ನಿಂದ ಹೊಡೆಯಲು ಮುಂದಾದ ಘಟನೆ ನಡೆದಿದೆ. ಕಾರ್ತಿಕ್ ರಾಮನಗರದ ದ್ಯಾವರಸೇಗೌಡನದೊಡ್ಡಿ ಯುವಕ. ತಿರುಮಲ ರಾಮನಗರದ ಮಾರುತಿನಗರದ ನಿವಾಸಿ. ರಾಮನಗರದ ಗೌಸಿಯಾ ಕಾಲೇಜು ಮುಂಭಾಗ ಯುವಕನ ರೌಡಿಸಂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎರಡು ತಿಂಗಳ ಹಿಂದೆ ನಡೆದಿರೋ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಲಾಂಗ್ ಬೀಸುತ್ತಿದ್ದಂತೆ ಕಾರ್ತಿಕ್ ಅಂಡ್ ಟೀಂ ಎಸ್ಕೇಪ್ ಆಗಿದ್ದು ಲಾಂಗ್ ಬೀಸಿದ್ದ ತಿರುಮಲನನ್ನು ರಾಮನಗರ ಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕಾಲೇಜು ವಿದ್ಯಾರ್ಥಿನಿಯರಿಗೆ ಮೂರ್ಚೆ ಹೋಗುವ ಸ್ಪ್ರೇ ಹೊಡೆಯುತಿದ್ದ ಪುಂಡನಿಗೆ ಥಳಿತ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಮಾರುತಿ ವೃತ್ತದಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಮೂರ್ಚೆ ಹೋಗುವ ಸ್ಪ್ರೇ ಹೊಡೆಯುತಿದ್ದ ಪುಂಡನನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ್ದಾರೆ. ಶಿವು ಎಂಬುವವನಿಂದ‌ ಕೃತ್ಯ ಎಸಗಲಾಗಿದೆ. ಚಿಂತಾಮಣಿ ನಗರ ಪೊಲೀಸರು ಪುಂಡನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Published On - 4:36 pm, Fri, 15 July 22