ಉಡುಪಿಯ ಅಷ್ಟಮಿಯಲ್ಲಿ ಭಾರತದ ಡ್ಯಾನ್ಸಿಂಗ್ ಸೆನ್ಸೇಷನ್ ಶ್ರೇಯಾ ಆಚಾರ್ಯರಿಂದ ಮೈನವಿರೇಳಿಸುವ ಕುಣಿತ!

ಉಡುಪಿಯ ಅಷ್ಟಮಿಯಲ್ಲಿ ಭಾರತದ ಡ್ಯಾನ್ಸಿಂಗ್ ಸೆನ್ಸೇಷನ್ ಶ್ರೇಯಾ ಆಚಾರ್ಯರಿಂದ ಮೈನವಿರೇಳಿಸುವ ಕುಣಿತ!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 07, 2023 | 7:34 PM

ಅಲ್ಲಿಂದ ಅವರು ಹುಲಿ ವೇಷ ತಾಸೆ ಪೆಟ್ಟಿಗೆಗೂ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಅವರ ಕುಣಿತ ಕಂಡು ಪ್ರೇರಿತರಾಗುವ ಯುವತಿಯರು ಮತ್ತು ಮಕ್ಕಳು ಸಹ ಅವರೊಂದಿಗೆ ಕುಣಿಯಲಾರಂಭಿಸುತ್ತಾರೆ. ಅಷ್ಟಮಿ, ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸದಲ್ಲಿ ಶ್ರೇಯಾ ಆಚಾರ್ಯ ಎಲ್ಲ ಲೈಮ್ ಲೈಟನ್ನು ತಮ್ಮತ್ತ ಸೆಳೆದುಕೊಂಡಿದ್ದು ಸುಳ್ಳಲ್ಲ.

ಉಡುಪಿ: ಡ್ಯಾನ್ಸಿಂಗ್ ಕ್ಷೇತ್ರದಲ್ಲಿ ಶ್ರೇಯಾ ಆಚಾರ್ಯ (Shreya Acharya) ದೊಡ್ಡ ಹೆಸರು. ಕುಣಿತದ ಬೇರೆ ಬೇರೆ ಪ್ರಾಕಾರಗಳಲ್ಲಿ (dance forms) ಅವರು ಪರಿಣಿತಿ ಸಾಧಿಸಿದ್ದಾರೆ. ಶ್ರೇಯಾ ಒಬ್ಬ ಉದಯೋನ್ಮುಖ ಹಿಂದಿ ಗಾಯಕಿಯೂ (singer) ಹೌದು. ಅವರನ್ನು ಬಹುಮುಖ ಪ್ರತಿಭೆಯ ಕಲಾವಿದೆ ಅಂದರೆ ತಪ್ಪಿಲ್ಲ, ಇಂಥ ಶ್ರೇಯಾ ಕೃಷ್ಣ ಜನ್ಮಾಷ್ಟಮಿಯ (Krishna Janmashtami) ದಿನವಾಗಿರುವ ಇಂದು ಉಡುಪಿಯಲ್ಲಿ ಕಾಣಿಸಿದರು. ಅವರಿದ್ದಲ್ಲಿ ಕುಣಿತ ಇರದಿರಲು ಸಾಧ್ಯವೇ? ನಗರದಲ್ಲಿ ಅಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದ್ದಾಗ ಅವರು ಭಗವತಿ ನಾಸಿಕ್ ತಂಡದ ಜೊತೆ ನೋಡುಗರ ಮೈನವಿರೇಳುವಂತೆ ಡ್ಯಾನ್ಸ್ ಮಾಡಿದರು ಮಾರಾಯ್ರೇ. ಕುಣಿಯುವಾಗ ಶ್ರೇಯಾ ದಣಿಯುವುದಿಲ್ಲ ಅನಿಸುತ್ತದೆ. ಅಲ್ಲಿಂದ ಅವರು ಹುಲಿ ವೇಷ ತಾಸೆ ಪೆಟ್ಟಿಗೆಗೂ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಅವರ ಕುಣಿತ ಕಂಡು ಪ್ರೇರಿತರಾಗುವ ಯುವತಿಯರು ಮತ್ತು ಮಕ್ಕಳು ಸಹ ಅವರೊಂದಿಗೆ ಕುಣಿಯಲಾರಂಭಿಸುತ್ತಾರೆ. ಅಷ್ಟಮಿ, ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸದಲ್ಲಿ ಶ್ರೇಯಾ ಆಚಾರ್ಯ ಎಲ್ಲ ಲೈಮ್ ಲೈಟನ್ನು ತಮ್ಮತ್ತ ಸೆಳೆದುಕೊಂಡಿದ್ದು ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ