Kannada News Photo gallery Sri Krishna Janmashtami celebrations in Udupi Vajra Kavacha decoration for Kadegolu Krishna
ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ; ಕಡೆಗೋಲು ಕೃಷ್ಣನಿಗೆ ವಜ್ರ ಕವಚ ಅಲಂಕಾರ, ಇಲ್ಲಿದೆ ಪೋಟೋಸ್
ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಅದರಂತೆ ಉಡುಪಿಯ ಅಷ್ಟಮಠದ ರಥಬೀದಿಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಹಾಗೂ ಮುಖ್ಯ ಪ್ರಾಣ ದೇವರ ರಥೋತ್ಸವ ನಡೆಯುತ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.
ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಅದರಂತೆ ಉಡುಪಿಯ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಭಕ್ತ ಸಾಗರ ಹರಿದು ಬಂದಿದೆ.
1 / 6
ಇನ್ನು ಈ ವೇಳೆ ಪರ್ಯಾಯ ಕೃಷ್ಣಾಪುರ ಸ್ವಾಮೀಜಿಯವರು ಕಡೆಗೋಲು ಕೃಷ್ಣನಿಗೆ ವಜ್ರ ಕವಚ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
2 / 6
ಕಾಣಿಯೂರು, ಶೀರೂರು ಸ್ವಾಮೀಜಿಯವರು ಇಂದು ವಿಶೇಷ ಅಲಂಕಾರ ಸೇವೆ ಮಾಡಿದ್ದಾರೆ. ಅದರಂತೆ ಬೆಳಿಗ್ಗೆಯಿಂದ ಭಕ್ತ ಸಾಗರ ನಿರಂತರವಾಗಿ ಮಠದತ್ತ ಬರುತ್ತಿದೆ.
3 / 6
ಮಧ್ಯಾಹ್ನ 2.30 ರ ನಂತರ ವಿಟ್ಲಪಿಂಡಿ ಮಹೋತ್ಸವ ನಡೆಯುತ್ತಿದ್ದು, ಉಡುಪಿಯ ರಥಬೀದಿಯಲ್ಲಿ ಶ್ರೀಕೃಷ್ಣನ ಜನ್ಮ ನಂತರ ವಿವಿಧ ಲೀಲೋತ್ಸವದ ಕಾರ್ಯಕ್ರಮ ನಡೆಯುತ್ತಿದೆ. ಈ ವಿಟ್ಲಪಿಂಡಿ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
4 / 6
ಇನ್ನು ಬಂದಂತಹ ಭಕ್ತಾಧಿಗಳಿಗೆ ಸುಮಾರು 15 ಸಾವಿರ ಜನರಿಗೆ ಭೋಜನ ಪ್ರಸಾದ ವಿತರಣೆ ಮಾಡಲಾಗಿದೆ.
5 / 6
ಅಷ್ಟಮಠದ ರಥಬೀದಿಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಹಾಗೂ ಮುಖ್ಯ ಪ್ರಾಣ ದೇವರ ರಥೋತ್ಸವ ನಡೆಯುತ್ತಿದೆ. ಸ್ಚರ್ಣ ರಥದಲ್ಲಿ ಕೃಷ್ಣ ರಾರಾಜಿಸುತ್ತಿದ್ದರೆ, ಇತ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.