ಸಮುದ್ರದ ಮಧ್ಯೆ ಮೀನುಗಾರರ ಬೋಟ್​ ಹೈಜಾಕ್​; ಸಿನಿಮೀಯ ರೀತಿಯಲ್ಲಿ ಭೇದಿಸಿದ ಮಲ್ಪೆ ಪೊಲೀಸರು

ಫೆಬ್ರವರಿ 19 ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ಕೃಷ್ಣ ಹೆಸರಿನ ಬೋಟ್​ನಲ್ಲಿ ಮೀನುಗಾರರೆಲ್ಲರೂ ತೆರಳಿದ್ದರು. ಏಳು ದಿನದ ಮೀನುಗಾರಿಕೆ ನಡೆಸಿ ಫೆಬ್ರವರಿ 27 ರಂದು ವಾಪಸ್‌ ಆಗುತ್ತಿದ್ದ ವೇಳೆ ಅಪರಿಚಿತ ಬೋಟ್​ನಲ್ಲಿ ಬಂದಿದ್ದ 25 ಜನರಿದ್ದ ತಂಡವು ಏಕಾಎಕಿ ದಾಳಿ ನಡೆಸಿ ದರೋಡೆ ಮಾಡಿದ್ದರು.

ಸಮುದ್ರದ ಮಧ್ಯೆ ಮೀನುಗಾರರ ಬೋಟ್​ ಹೈಜಾಕ್​; ಸಿನಿಮೀಯ ರೀತಿಯಲ್ಲಿ ಭೇದಿಸಿದ ಮಲ್ಪೆ ಪೊಲೀಸರು
ಸಮುದ್ರದ ಮಧ್ಯೆ ಮೀನುಗಾರರ ಬೋಟ್​ ಹೈಜಾಕ್
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 29, 2024 | 2:59 PM

ಉಡುಪಿ, ಫೆ.29: ಮೀನುಗಾರರ ಕಿಡ್ನ್ಯಾಪ್‌ ಪ್ರಕರಣವನ್ನ ಮಲ್ಪೆ ಪೊಲೀಸರು(Malpe Police) ಸಿನಿಮೀಯ ರೀತಿಯಲ್ಲಿ ಭೇದಿಸಿದ್ದಾರೆ. ಫೆಬ್ರವರಿ 19 ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗಾಗಿ ಕೃಷ್ಣ ಹೆಸರಿನ ಬೋಟ್​ನಲ್ಲಿ ಮೀನುಗಾರರೆಲ್ಲರೂ ತೆರಳಿದ್ದರು. ಏಳು ದಿನದ ಮೀನುಗಾರಿಕೆ ನಡೆಸಿ ಫೆಬ್ರವರಿ 27 ರಂದು ವಾಪಸ್‌ ಆಗುತ್ತಿದ್ದ ವೇಳೆ ತಾಂತ್ರಿಕ ಕಾರಣದಿಂದ ಮುಂಜಾನೆ ಮೂರು ಗಂಟೆಗೆ ಕೆಟ್ಟು ನಿಂತಿತ್ತು. ಇದೇ ಸಮಯಕ್ಕೆ ಅಪರಿಚಿತ ಬೋಟ್​ನಲ್ಲಿ ಬಂದಿದ್ದ 25 ಜನರಿದ್ದ ತಂಡವು ಏಕಾಎಕಿ ದಾಳಿ ನಡೆಸಿ ದರೋಡೆ ಮಾಡಿದ್ದಲ್ಲದೇ, ಮೀನುಗಾರರನ್ನು ಕಿಡ್ನಾಪ್ ಮಾಡಿದ್ದರು.

ಬೋಟ್‌ ದಡಕ್ಕೆ ಎಳೆದೊಯ್ದು ಮೀನುಗಾರರನ್ನು ಕೂಡಿ ಹಾಕಿ ಚಿತ್ರಹಿಂಸೆ

ಇನ್ನು  ಬೋಟ್‌ನಲ್ಲಿದ್ದ 8 ಲಕ್ಷ ಮೌಲ್ಯದ ಮೀನು ಮತ್ತು 7500 ಲೀಟರ್‌ ಡೀಸೆಲ್‌ ದೋಚಿದ ದುಷ್ಕರ್ಮಿಗಳು, ಬೋಟ್​ನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮೀನುಗಾರಿಕಾ ಬಂದರಿಗೆ ಎಳೆದೊಯ್ದಿದ್ದಾರೆ. ಬಳಿಕ ಮೀನುಗಾರರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಈ ವಿಷಯ ಗೊತ್ತಾಗುತ್ತಲೇ ಬೋಟ್ ಮಾಲಕರ ಜೊತೆ ಮಲ್ಪೆ ಪೋಲಿಸರು ಭಟ್ಕಳಕ್ಕೆ ತೆರಳಿ ಮೀನುಗಾರರನ್ನು ರಕ್ಷಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ದರೋಡೆ, ಕಿಡ್ನ್ಯಾಪ್‌ ಮಾಡಿದ ತಂಡಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಇದನ್ನೂ ಓದಿ:ಗ್ರಾ.ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ; ಸಿನಿಮೀಯ ರೀತಿಯಲ್ಲಿ ಹೋಟೆಲ್​ಗೆ ನುಗ್ಗಿ ಸದಸ್ಯರನ್ನು ಕಿಡ್ನ್ಯಾಪ್​​ ಮಾಡಿದ ಆರೋಪ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಡೇಟ್​ ಆಗುತ್ತಿದೆ..

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ